Free ration extension: ಬಡವರಿಗೆ ಉಚಿತ ಪಡಿತರ ವಿಸ್ತರಣೆ : ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಅನುದಾನ

ನವದೆಹಲಿ : (Free ration extension) ಕೊರೊನಾ ಸಂಕಷ್ಟದ ವೇಳೆಯಲ್ಲಿ ಕೇಂದ್ರ ಸರಕಾರ ಬಡವರು, ಮದ್ಯಮ ವರ್ಗದ ಜನರಿಗಾಗಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅಡಿಯಲ್ಲಿ ಉಚಿತ ಪಡಿತರ ವ್ಯವಸ್ಥೆಯನ್ನು ಕಲ್ಪಿಸಿದೆ. ಕೊರೊನಾ ನಂತರದಲ್ಲಿಯೂ ಕೇಂದ್ರ ಸರಕಾರ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದೆ. ಇದೀಗ ಯೋಜನೆ ಮತ್ತೆ ಒಂದು ವರ್ಷ ವಿಸ್ತರಣೆಯಾಗಲಿದ್ದು, ಇದಕ್ಕೆ 2 ಲಕ್ಷ ಕೋಟಿ ರೂ. ಅನುದಾನ ಘೋಷಿಸಲಾಗಿದೆ.

ಬಡವರನ್ನು ಕೊರೊನಾ ತೊಂದರೆಯಿಂದ ಮುಕ್ತವಾಗಿಸಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದು, ಈ ಯೋಜನೆಯಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಎಲ್ಲಾ ಫಲಾನುಭವಿಗಳಿಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆಜಿ ಉಚಿತ ಆಹಾರಧಾನ್ಯ ನೀಡಲಾಗುತ್ತದೆ. ಈ ಆಹಾರ ಧಾನ್ಯಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕಡ್ಡಾಯಪಡಿಸಿರುವ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಈ ಯೋಜನೆಯ ಮೂಲಕ ಎಂಬತ್ತೊಂದು ಕೋಡಿಗೂ ಅಧಿಕ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗಿದೆ.

ಈ ಯೋಜನೆಯಡಿಯಲ್ಲಿ ಸರಕಾರವು ಆಹಾರ ಧಾನ್ಯಗಳನ್ನು ಮಾತ್ರವಲ್ಲದೇ ಇತರ ಸೇವೆಗಳನ್ನು ಸಹ ಒದಗಿಸಿದೆ. ಸರಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲಲಿ ಕೆಲಸ ಮಾಡುವ ಇಪ್ಪತ್ತೆರಡು ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಕಾರ್ಯಕರ್ತರಿಗೆ ಸರಕಾರವು ಐವತ್ತು ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಒದಗಿಸಿದೆ. 8.5 ಕೋಟಿ ಮನೆಗಳಿಗೆ ಉಚಿತ ಅಡುಗೆ ಅನಿಲವನ್ನು ವಿತರಿಸಿದೆ. ರೈತರು, ಮಹಿಳೆಯರು, ಬಡವರು ಹಾಗೂ ನಿರ್ಗತಿಕರಿಗೆ 42 ಕೋಟಿ ರೂ. ನೆರವು ಒದಗಿಸಿದೆ.

ಇದನ್ನೂ ಓದಿ : ತೆರಿಗೆದಾರರಿಗೆ ಗುಡ್ ನ್ಯೂಸ್ : ಆದಾಯ ತೆರಿಗೆ ಮಿತಿ 7 ಲಕ್ಷ ರೂ.ಏರಿಕೆ

ಇದನ್ನೂ ಓದಿ : Union Budget 2023 updates: ಕೇಂದ್ರ ಬಜೆಟ್‌ 2023 : ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೀಸಲು

ಇದೀಗ ಕೆಂದ್ರ ಬಡವರಿಗೆ ಹಾಗೂ ಅವರ ಜೀವನೋಪಾಯ ಬೆಂಬಲಿಸಲರು ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಒಂದು ವರ್ಷದವರೆಗೆ ವಿಸ್ತರಿಸಿದ್ದು, ಈ ಯೋಜನೆಗೆ 2 ಲಕ್ಷ ಕೋಟಿ ರೂ. ಅನುದಾನವನ್ನು ಕೇಂದ್ರ ನೀಡುವುದಾಗಿ ಇಂದು ಬಜೆಟ್‌ ಮಂಡನೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

Free ration extension: Free ration extension for the poor: 2 lakh crore grant for Garib Kalyan Yojana

Comments are closed.