ತೆರಿಗೆದಾರರಿಗೆ ಗುಡ್ ನ್ಯೂಸ್ : ಆದಾಯ ತೆರಿಗೆ ಮಿತಿ 7 ಲಕ್ಷ ರೂ.ಏರಿಕೆ

ನವದೆಹಲಿ : ಕೇಂದ್ರ ಸರಕಾರ ಹೊಸ ತೆರಿಗೆ ಪದ್ದತಿಯನ್ನು (New tax regime) ಜಾರಿಗೆ ತಂದಿದೆ. ಈ ಬಾರಿಯ ಬಜೆಟ್ ನಲ್ಲಿ ತೆರಿಗೆದಾರರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದು, 7 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ಹಿಂದೆ 3 ರಿಂದ 5 ಲಕ್ಷ ರೂಪಾಯಿಯ ವರೆಗೆ ಶೇ.5 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಆದ್ರೀಗ 7 ಲಕ್ಷ ರೂಪಾಯಿ ವರೆಗೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಲಾಗಿದೆ.

ಹೊಸ ತೆರಿಗೆ ಪದ್ದತಿಯ ಪ್ರಕಾರ 7 ಲಕ್ಷ ರೂಪಾಯಿಯ ವರೆಗೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಪಡೆಯ ಬಹುದಾಗಿದೆ. ಅಲ್ಲದೇ 6 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಯ ವರೆಗೆ ಶೇ.10 ರಷ್ಟು ತೆರಿಗೆ, 9 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿಯ ವರೆಗೆ ಶೇ.15 ರಷ್ಟು ತೆರಿಗೆ ಹಾಗೂ 12 ರಿಂದ 15 ಲಕ್ಷ ರೂಪಾಯಿಯ ವರೆಗೆ ಶೇ.20 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.

ಪಸ್ತುತ ರೂ 5 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಈ ಹಿಂದೆ ಸಾಮಾನ್ಯ ನಾಗರಿಕರಿಗೆ 2.5 ಲಕ್ಷದವರೆಗಿನ ಆದಾಯ ತೆರಿಗೆ ವಿನಾಯಿತಿ ನೀಡಲಾಗಿತ್ತಿತ್ತು. ಆದರೆ ಕಳೆದ ಬಜೆಟ್ ನಲ್ಲಿ ಈ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೆಚ್ಚಳವಾದ ಬೆನ್ನಲ್ಲೇ ಕೇಂದ್ರ ಸರಕಾರ ಈ ಬಾರಿ ತೆರಿಗೆ ವಿನಾಯಿತಿ ಮಿತಿಯನ್ನು ಏರಿಕೆ ಮಾಡುವ ನಿರೀಕ್ಷೆಯಿತ್ತು. ಅಂತೆಯೇ ಕೇಂದ್ರ ಸರಕಾರ ತೆರಿಗೆ ಪಾವತಿದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಮುಂದಿನ ಆರ್ಥಿಕ ವರ್ಷದಿಂದಲೇ ಹೊಸ ತೆರಿಗೆ ಪದ್ದತಿ ಜಾರಿಗೆ ಬರಲಿದ್ದು, ಹೆಚ್ಚು ಅನುಕೂಲವಾಗಲಿದೆ.

ಇದನ್ನೂ ಓದಿ : ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ 5300 ಕೋಟಿ ಆರ್ಥಿಕ ನೆರವ

ಇದನ್ನೂ ಓದಿ : Union Budget 2023 updates: ಕೇಂದ್ರ ಬಜೆಟ್‌ 2023 : ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೀಸಲು

ಇದನ್ನೂ ಓದಿ : ಮೀನುಗಾರರಿಗೆ ಗುಡ್‌ ನ್ಯೂಸ್‌ : ಮೀನುಗಾರಿಕೆ ಅಭಿವೃದ್ದಿಗೆ 6 ಸಾವಿರ ಕೋಟಿ ರೂ. ಘೋಷಣೆ

New tax regime Good news for taxpayers Income tax limit increased by Rs 7 lakh

ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ :
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ರಿಯಾಯಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದ್ದಾರೆ. ಇದರರ್ಥ ಹೊಸ ತೆರಿಗೆ ಪದ್ದತಿಯ ಅಡಿಯಲ್ಲಿ ರೂ 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಸದ್ಯ ನಾಗರೀಕರು ಹಳೆಯ ಪದ್ದತಿಯಂತೆ ತೆರಿಗೆ ಅನುಕೂಲವನ್ನು ಪಡೆಯಲಿದ್ದಾರೆ. ವಾರ್ಷಿಕವಾಗಿ 15 ಲಕ್ಷದವರೆಗಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ 52,400 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯಬಹುದಾಗಿದೆ.

New tax regime: Good news for taxpayers: Income tax limit increased by Rs 7 lakh

Comments are closed.