Best Electric Bikes : 1.5 ಲಕ್ಷದ ಒಳಗೆ ಖರೀದಿಸಬಹುದಾದ 5 ಎಲೆಕ್ಷ್ರಿಕ್‌ ಬೈಕ್‌ಗಳು

ಮೊದಲೆಲ್ಲಾ ಪರ್ಸನಲ್‌ ವೆಹಿಕಲ್‌ ಖರೀದಿಸಬೇಕಾದರೆ ಅಷ್ಟೊಂದು ಚಿಂತಿಸವು ಅವಶ್ಯಕತೆ ಇರಲಿಲ್ಲ. ಯಾವಾಗ ಪೆಟ್ರೋಲ್‌ನ ಬೆಲೆ ಗಣನೀಯಾಗಿ ಏರಿರುವುದರಿಂದ ಪರ್ಯಾಯ ವ್ಯವಸ್ಥೆಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ ಸಿಎನ್‌ಜಿ, ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ವಾಹನ ತಯಾರಿಕಾ ಕಂಪನಿಗಳು ಸಹ ವಾಹನಗಳನ್ನು ತಯಾರಿಸುತ್ತಿದ್ದಾರೆ. ಈಗಂತೂ ಇಲೆಕ್ಟ್ರಿಕ್‌ ವಾಹನಗಳ (EVs) ಕಾಲ. ಬೈಕ್‌, ಸ್ಕೂಟರ್‌, ಕಾರು ಎಲ್ಲವೂ ಎಲೆಕ್ಟ್ರಿಕ್‌ ಮಾದರಿಯಲ್ಲಿಯೇ ಬರುತ್ತಿವೆ. ಎಲೆಕ್ಟ್ರಿಕ್‌ ಬೈಕ್‌ಗಳು ನೋಡಲು ಆಕರ್ಷಕವಾಗಿವೆ. ನಿಮಗೂ ಪ್ರತಿ ತಿಂಗಳು ಬೈಕ್‌ನ ಪೆಟ್ರೋಲ್ ಬಗ್ಗೆ ಚಿಂತೆಯಿದ್ದರೆ, ಎಲೆಕ್ಟ್ರಿಕ್‌ ಬೈಕ್‌ಗಳನ್ನು (Best Electric Bikes) ಖರೀದಿಸುವ ಬಗ್ಗೆ ಆಲೋಚಿಸಬಹುದು. 1.5 ಲಕ್ಷದ ಒಳಗೆ ದೊರೆಯುವ ಎಲೆಕ್ಟ್ರಿಕ್‌ ಬೈಕ್‌ಗಳ ಮಾಹಿತಿ ಇಲ್ಲಿದೆ.

  • ಅರ್ಥ್ ಎನರ್ಜಿಯ EV Evolve-R ಎಲೆಕ್ಟ್ರಿಕ್ ಬೈಕ್ 1.42 ಲಕ್ಷ ಬೆಲೆಯ ಈ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬೈಕು ಒಂದೇ ಚಾರ್ಜ್‌ನಲ್ಲಿ 100 ಕಿಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಂಟೆಗೆ 110 ಕಿಮೀ ವೇಗವನ್ನು ತಲುಪಬಹುದು. ಈ ಬೈಕಿನ ಬ್ಯಾಟರಿ ಕೆಪಾಸಿಟಿ 115Ah ಆಗಿದೆ.
  • ಅರ್ಥ್ ಎನರ್ಜಿಯ EV Evolve-Z ಎಲೆಕ್ಟ್ರಿಕ್ ಬೈಕ್ ಅನ್ನು 1.30 ಲಕ್ಷ ರೂಪಾಯಿಗೆ ಖರೀದಿಸಬಹುದು. ಈ ಬೈಕು ಒಂದೇ ಚಾರ್ಜ್‌ನಲ್ಲಿ 100 ಕಿಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 95 ಕಿಮೀ. ಈ ಬೈಕು ಚಾರ್ಜ್ ಮಾಡಲು 40 ನಿಮಿಷಗಳವರೆಗೆ ತೆಗೆದುಕೊಳ್ಳುತ್ತದೆ.
  • ಕಬೀರಾ ಮೊಬಿಲಿಟಿ KM4000 ಎಲೆಕ್ಟ್ರಿಕ್‌ ಬೈಕ್ ಅನ್ನು 1.37 ಲಕ್ಷ ರೂಪಾಯಿಗೆ ಖರೀದಿಸಬಹುದು. ಈ ಬೈಕು ಒಂದೇ ಚಾರ್ಜ್‌ನಲ್ಲಿ 150 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕು ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಬೈಕ್ ಸಂಪೂರ್ಣ ಚಾರ್ಜ್ ಆಗಲು ಕೇವಲ ಮೂರು ಗಂಟೆ ತೆಗೆದುಕೊಳ್ಳಲಿದೆ.
  • ರಿವೋಲ್ಟ್ RV400, ಈ ಎಲೆಕ್ಟ್ರಿಕ್ ಬೈಕ್ ಅನ್ನು ರೂ.1.25 ಲಕ್ಷಕ್ಕೆ ಖರೀದಿಸಬಹುದು. ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 80-150 ಕಿ.ಮೀ ದೂರವನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 85 ಕಿ.ಮೀ.
  • ಓಬೆನ್ ರೋರರ್ ಎಲೆಕ್ಟ್ರಿಕ್ ಬೈಕ್ ಅನ್ನು 1.03 ಲಕ್ಷ ರೂ.ಗೆ ಖರೀದಿಸಬಹುದು. ಈ ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ. ಇದು ಮೂರು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.

ಇದನ್ನೂ ಓದಿ : Maruti Suzuki Ciaz : ಹೊಸ ಬಣ್ಣಗಳ ಆಯ್ಕೆ, ಚೈಲ್ಡ್‌ ಸೀಟ್‌ ಎಂಕರೇಜ್‌ ಮುಂತಾದ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡು ಬಿಡುಗಡೆಯಾದ ಮಾರುತಿ ಸಿಯಾಜ್‌

ಇದನ್ನೂ ಓದಿ : Best Mileage Scooters : ಸ್ಕೂಟರ್‌ ಖರೀದಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್‌ ಮೈಲೇಜ್‌ ಕೊಡುವ ಸ್ಕೂಟರ್‌ಗಳು

(Best Electric Bikes. These are the best 5 electric bikes)

Comments are closed.