ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ ? ಈ ಕೆಲಸ ಮಾಡಿದ್ರೆ ಇಂದೇ ಜಮೆ ಆಗುತ್ತೆ

ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವೆಬ್‌ಸೈಟ್‌ನಲ್ಲಿ ಇ-ಸರ್ವಿಸ್‌ ಕ್ಲಿಕ್‌ ಮಾಡಿ. ನಂತರ ಡಿಬಿಟಿ ಸ್ಟೇಟಸ್‌ ಕ್ಲಿಕ್‌ ಮಾಡಿ. ನಿಮ್ಮ ರೇಷನ್‌ ಕಾರ್ಡ್‌ ಸಂಖ್ಯೆಯನ್ನು ನಮೂದಿಸಿದ್ರೆ ಅಕ್ಕಿಯ ಹೆಚ್ಚುವರಿ ಹಣ ಜಮೆ ಆಗಿದ್ಯಾ, ಇಲ್ಲವೇ ಅನ್ನೋದು ತಿಳಿಯಲಿದೆ.

ಬೆಂಗಳೂರು : ಅನ್ನಭಾಗ್ಯ ಯೋಜನೆ (Anna Bhagya Yojana) ಕಾಂಗ್ರೆಸ್‌ ಸರಕಾರದ ಮಹತ್ವದ ಯೋಜನೆಗಳಲ್ಲೊಂದು. ಅನ್ನಭಾಗ್ಯ ಯೋಜನೆಯ ಮೂಲಕ ಪ್ರತೀ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಪ್ರತೀ ತಿಂಗಳು ವಿತರಣೆ ಮಾಡುವುದಾಗಿ ಘೋಷಿಸಿದೆ. ಆದರೆ ಅಕ್ಕಿಯ ಲಭ್ಯತೆಯ ಕೊರತೆಯಿಂದಾಗಿ ಸರಕಾರ 5 ಕೆಜಿ ಅಕ್ಕಿ ನೀಡಿ, 5 ಕೆಜಿ ಅಕ್ಕಿಗೆ ಹಣವನ್ನು ನೀಡುತ್ತಿದೆ.

ರಾಜ್ಯದಲ್ಲಿ ಈಗಾಗಲೇ ಅನ್ನಭಾಗ್ಯ ಯೋಜನೆ ಜಾರಿನಲ್ಲಿದೆ. ರಾಜ್ಯ ಸರಕಾರ ಜಾರಿಗೆ ಬರುತ್ತಿದ್ದಂತೆಯೇ ಅನ್ನಭಾಗ್ಯ ಅಕ್ಕಿಯನ್ನು ಪಡಿತರ ಕೇಂದ್ರಗಳ (Ration Center) ಮೂಲಕ ವಿತರಣೆ ಮಾಡಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದಲೂ 5  ಕೆಜಿ ಅಕ್ಕಿಯ ಬಾಬ್ತು ಹಣವನ್ನು ಪಡಿತರ ಖಾತೆದಾರರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ.

Karnataka did you not get the Anna Bhagya Yojana money If this work is done, the money will be deposited today
Image Credit to Orinal Source

ಆದರೆ ಬಹುತೇಕ ರೇಷನ್‌ ಕಾರ್ಡ್‌ ದಾರರಿಗೆ (Ration Card) ಸೆಪ್ಟೆಂಬರ್‌ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮೆ (DBT) ಆಗಿಲ್ಲ. ಆದರೆ ಅನ್ನಭಾಗ್ಯ ಹಣ ಬ್ಯಾಂಕ್‌ ಖಾತೆಗೆ (Bank Account) ಜಮೆ ಆಗದೇ ಇರೋದಕ್ಕೆ ಕಾರಣವಾಗಿರೋದು ಕೆವೈಸಿ ಸಮಸ್ಯೆ (KYC).

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಇದೇ ಕಾರಣಕ್ಕೆ 9 ಲಕ್ಷ ಜನರಿಗೆ ಸಿಗಲ್ಲ ಗೃಹಲಕ್ಷ್ಮೀ ಮೊದಲ ಕಂತಿನ ಹಣ

ಅನ್ನಭಾಗ್ಯ ಯೋಜನೆಯ ಲಾಭವನ್ನು ಪಡೆಯಲು ರೇಷನ್‌ ಕಾರ್ಡ್‌ ನಲ್ಲಿ ಇರುವ ಖಾತೆದಾರರ ವಿವರ ಆಧಾರ್‌ ಕಾರ್ಡ್‌ ಜೊತೆಗೆ ಲಿಂಕ್‌ ಆಗಿರಬೇಕು. ಆದರೆ ಈಗಾಗಲೇ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಲಿಂಕ್‌ (Adhar Card +Ration Card + Bank Account Link) ಮಾಡಿದವರಿಗೆ ಅನ್ನಭಾಗ್ಯದ ಹಣ ಜಮೆ ಆಗಿದೆ.

ಕೂಡಲೇ ಈ ಕೆಲಸ ಮಾಡಿ, ಅನ್ನಭಾಗ್ಯ ಹಣ ಪಡೆಯಿರಿ

ಇನ್ನು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಕೈಸೇರಬೇಕಾದ್ರೆ ನೀವು ಕಡ್ಡಾಯವಾಗಿ ಕೆವೈಸಿ ಮಾಡಬೇಕು. ಕೂಡಲೇ ನಿಮ್ಮ ಬ್ಯಾಂಕಿಗೆ ತೆರಳಿ ನಿಮ್ಮ ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಗೆ ಜೋಡಣೆ ಮಾಡಬೇಕು. ಹೀಗೆ ಮಾಡಿದ ಕೂಡಲೇ ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಲಿದೆ.

ಇದನ್ನೂ ಓದಿ : APL, BPL ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮಹತ್ವದ ಸೂಚನೆ

ಒಂದೊಮ್ಮೆ ನೀವು ಪೋಸ್ಟ್‌ ಆಫೀಸ್‌ನಲ್ಲಿ ಖಾತೆಯನ್ನು ಹೊಂದಿದ್ದರೆ, ಪೋಸ್ಟ್‌ ಆಫೀಸ್‌ ಎಕೌಂಟ್‌ ಅನ್ನು ಆಧಾರ್‌ ಕಾರ್ಡ್‌ ಜೊತೆಗೆ ಕೆವೈಸಿ ಮಾಡಿಸಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಖಾತೆಗೆ ಅನ್ನಭಾಗ್ಯ ಹಣ ಜಮೆ ಆಗಲಿದೆ.

Karnataka did you not get the Anna Bhagya Yojana money If this work is done, the money will be deposited today
Image Credit to Original Source

ಮೊಬೈಲ್‌ನಲ್ಲೇ ಚೆಕ್‌ ಮಾಡಿ ಅನ್ನಭಾಗ್ಯ ಹಣದ ಸ್ಟೇಟಸ್‌

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ಇಲ್ಲವೇ ಅಂತಾ ನಿಮ್ಮ ಮೊಬೈಲ್‌ ಮೂಲಕವೇ ಚೆಕ್‌ ಮಾಡಬಹುದು. ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ವೆಬ್‌ಸೈಟ್‌ನಲ್ಲಿ ಇ-ಸರ್ವಿಸ್‌ ಕ್ಲಿಕ್‌ ಮಾಡಿ. ನಂತರ ಡಿಬಿಟಿ ಸ್ಟೇಟಸ್‌ ಕ್ಲಿಕ್‌ ಮಾಡಿ. ನಿಮ್ಮ ರೇಷನ್‌ ಕಾರ್ಡ್‌ ಸಂಖ್ಯೆಯನ್ನು ನಮೂದಿಸಿದ್ರೆ ಅಕ್ಕಿಯ ಹೆಚ್ಚುವರಿ ಹಣ ಜಮೆ ಆಗಿದ್ಯಾ, ಇಲ್ಲವೇ ಅನ್ನೋದು ತಿಳಿಯಲಿದೆ.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

Karnataka did you not get the Anna Bhagya Yojana money? If this work is done, the money will be deposited today

Comments are closed.