Amazon Great Republic Day Sale 2023 : ಇಂದಿನಿಂದಲೇ ಪ್ರೈಮ್‌ ಸದಸ್ಯರಿಗೆ ಲೈವ್‌ ಆಗಲಿದೆ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌

ಭಾರತದ ದೊಡ್ಡ ಇ–ಕಾಮರ್ಸ್‌ ದೈತ್ಯ ಅಮೆಜಾನ್‌ ಹೊಸ ವರ್ಷದ ಮೊದಲ ಅತಿದೊಡ್ಡ ಸೇಲ್‌ ಘೋಷಿಸಿದೆ. ಜನರು ನಿರೀಕ್ಷಿಸುತ್ತಿದ್ದ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ 2023 ತನ್ನ ಪ್ರೈಮ್‌ ಸದಸ್ಯರಿಗೆ ಜನವರಿ 14 ರ ಮಧ್ಯರಾತ್ರಿಯಿಂದಲೇ ಲೈವ್‌ ಆಗಲಿದೆ (Amazon Great Republic Day Sale 2023). ಉಳಿದವರಿಗೆ ಇದು ಜನವರಿ 15ರ ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದೆ ಮತ್ತು ಈ ಸೇಲ್‌ ಜನವರಿ 20ರ ವರೆಗೆ ಮುಂದುವರಿಯಲಿದೆ. ಪ್ರತಿಸಲದಂತೆ ಅಮೆಜಾನ್‌ ಈ ವರ್ಷದ ಗ್ರೇಟ್‌ ರಿಪಬ್ಲಿಕ್‌ ಸೇಲ್‌ನಲ್ಲಿ ಆಕರ್ಷಕ ಡೀಲ್‌ಗಳನ್ನು ಘೋಷಿಸಲಿದೆ. ಇದರಲ್ಲಿ ಗ್ರಾಹಕರು ಉತ್ಪನ್ನಗಳ ಮೇಲೆ ಆಫರ್‌ ಮತ್ತು ಡಿಸ್ಕಾಂಟ್‌ಗಳನ್ನು ಪಡೆಯಬಹುದಾಗಿದೆ. ಇದು ಹೆಚ್ಚುವರಿಯಾಗಿ ಉತ್ಪನ್ನಗಳ ಮೇಲೆ ಬ್ಯಾಂಕ ಆಫರ್‌ಗಳನ್ನು ಮತ್ತು EMI ಆಯ್ಕೆಗಳನ್ನು ನೀಡಲಿದೆ.

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಹೆಚ್ಚಿನದಾಗಿ ಸ್ಮಾರ್ಟ್‌ಫೋನ್‌, ಟೆಲಿವಿಷನ್‌, ಟ್ಯಾಬ್ಲೆಟ್‌, ಸೌಂದರ್ಯ ಉತ್ಪನ್ನಗಳು, ಫ್ಯಾಷನ್‌, ಲ್ಯಾಪ್‌ಟಾಪ್‌, ಮುಂತಾದವುಗಳಲ್ಲಿ ಉತ್ತಮ ಡೀಲ್‌ಗಳನ್ನು ನೋಡಬಹುದಾಗಿದೆ. ಈ ಸೇಲ್‌ನಲ್ಲಿ SBI ಕಾರ್ಡ್‌ ಮೂಲಕ ಖರೀದಿಸುವವರಿಗೆ 10% ಕ್ಯಾಶ್‌ಬ್ಯಾಕ್‌ ಆಫರ್‌ ಇರುತ್ತದೆ. ಜೊತೆಗೆ EMI ಆಪ್ಷನ್‌, ಹೋಮ್‌ ಡಿಲೇವರಿ ಮತ್ತು ಎಕ್ಸ್‌ಚೇಂಜ್‌ ಸೌಲಭ್ಯ ದೊರಯಲಿದೆ. ಈ ಸೇಲ್‌ನಲ್ಲಿ ಎಲ್ಲಾ ವಿಭಾಗದಲ್ಲಿಯೂ ಡಿಸ್ಕೌಂಟ್‌ ಮತ್ತು ಕೊಡುಗೆಗಳಿರುತ್ತವೆ. ಗ್ರೇಟ್‌ ರಿಪಬ್ಲಿಕ್‌ ಸೇಲ್‌ನಲ್ಲಿ 80 ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಪ್ರಾರಂಭಿಸಲಿದೆ.

ಅಮೆಜಾನ್‌ನ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಅಡುಗೆಮನೆಯ ವಸ್ತುಗಳಿಗೂ ರಿಯಾಯಿತಿ ಸೌಲಭ್ಯಗಳಿವೆ. LG, ಗೋದ್ರೇಜ್‌ ಮತ್ತು ಸ್ಯಾಮ್‌ಸಂಗ್‌ಗಳ ಮೇಲೆ ಡೀಲ್‌ ನೋಡಬಹುದಾಗಿದೆ. ಇಂದು ಪ್ರೈಮ್‌ ಸದಸ್ಯರಿಗೆ ಲೈವ್‌ ಆಗಲಿರುವ ಸೇಲ್‌ನಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಅನೇಕ ಉತ್ತಮ ಡೀಲ್‌ಗಳನ್ನು ನೀಡಿದೆ. 65,900 ರೂ ಗಳಿದ್ದ ಐಫೋನ್‌ 13 ನ ಬೆಲೆಯನ್ನು 59,999 ರೂ. ಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ 18,000 ರೂ.ಗಳಿಗೆ ಹಳೆಯ ಫೋನ್‌ ಅನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಒನ್‌ಪ್ಲಸ್‌ 10R ಮಿಡ್‌ ರೇಂಜ್‌ ಫೋನ್‌ ಅನ್ನು 29,999 ರೂ. ಗಳಿಗೆ, iQOO Neo 6 ಮಿಡ್‌–ರೇಂಜ್‌ ಫೋನ್‌ ಅನ್ನು 27,999 ರೂ. ಗಳಿಗೆ ಖರೀದಿಸಬಹುದಾಗಿದೆ. ಈ ಎರಡೂ ಹಳೆ ಫೋನುಗಳ ಎಕ್ಸ್‌ಚೇಂಜ್‌ ಮೇಲೆ 18,000 ರೂ ಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : Kantara Oscar rase: ಆಸ್ಕರ್‌ಗೆ 2 ವಿಭಾಗಗಳಲ್ಲಿ ಅರ್ಹತೆ ಪಡೆದ ಕಾಂತಾರ ದಂತಕಥೆ

ಇದನ್ನೂ ಓದಿ :Golden Globes 2023 : ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಹಾಡಿಗಾಗಿ ಪ್ರಶಸ್ತಿ ಬಾಚಿಕೊಂಡ ‘ನಾಟು ನಾಟು’ ಹಾಡು

(Amazon Great Republic Day Sale 2023 will live today for prime members)

Comments are closed.