Revival of govt school: ಮುಚ್ಚುತ್ತಿದ್ದ ಸರಕಾರಿ ಶಾಲೆಗೆ ಮರುಜೀವ: ವಾತಾವರಣವನ್ನೇ ಬದಲಾಯಿಸಿದ ಹಳೆ ವಿದ್ಯಾರ್ಥಿಗಳು

ದಕ್ಷಿಣ ಕನ್ನಡ: (Revival of govt school) ಖಾಸಗಿ ಶಾಲೆಗಳು ಹೆಚ್ಚುತ್ತಿದ್ದು, ಇದರ ಪ್ರಭಾವದಿಂದ ಸಾಲು ಸಾಲು ಕನ್ನಡ ಸರಕಾರಿ ಶಾಲೆಗಳು ಮುಚ್ಚಿಕೊಂಡು ಅನಾಥವಾಗಿ ಬಿದ್ದಿದ್ದವು. ಆದರೆ ಇದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಚ್ಚುತ್ತಿದ್ದ ಶಾಲೆಗಳು ಈಗ ಮರುಜೀವ ಪಡೆದುಕೊಂಡಿದೆ. ಮಕ್ಕಳೇ ಇಲ್ಲದೇ ಖಾಲಿ ಖಾಲಿಯಾಗಿದ್ದ ಶಾಲೆಯಲ್ಲಿ ಇದೀಗ ಮಕ್ಕಳ ಬಲ ಹೆಚ್ಚಾಗಿದೆ.

ಹೌದು..! ಸರಕಾರಿ ಶಾಲೆಗಳೆಂದರೆ ಸಾಕು, ಚಂದದ ಕ್ಯಾಂಪಸ್‌, ಬಣ್ಣಗಳಿಂದ ತುಂಬಿದ ತರಗತಿ ಕೊಠಡಿಗಳು, ಸುತ್ತಮುತ್ತ ಗಿಡ ಮರಗಳಿಂದ ಕಂಗೊಳಿಸುತ್ತಿತ್ತು. ಅದರೆ ಖಾಸಗಿ ಶಾಲೆಗಳ ಪ್ರಭಾವದಿಂದ ಸರಕಾರಿ ಶಾಲೆಗಳ ಬಾಗಿಲು ಮುಚ್ಚಿದವು. ದಕ್ಷಿಣ ಕನ್ನಡದ ಬಂಟ್ವಾಳದಲ್ಲೂ ಕೂಡ ಇದೇ ಪರಿಸ್ಥಿತಿ (Revival of govt school) ಎದುರಾಗಿದ್ದು, ಇಡೀ ಶಾಲೆಯಲ್ಲಿ 44 ಮಕ್ಕಳಿದ್ದರು. ಇನ್ನೇನು ಶಾಲೆ ಮುಚ್ಚಬೇಕು ಎನ್ನುವ ಹೊತ್ತಿನಲ್ಲಿ ಶಾಲೆಯ ಅಭಿವೃದ್ದಿ ಸಮಿತಿ, ಹಳೆ ವಿದ್ಯಾರ್ಥಿಗಳು ಸೇರಿ ಸರ್ವೆ ನಡೆಸಿ ಮನೆ ಮನೆಗಳಿಗೆ ತೆರಳಿ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತೆ ಗ್ರಾಮಸ್ಥರನ್ನು ಪ್ರೇರೇಪಿಸಿದರು.

ಇದಷ್ಟೇ ಅಲ್ಲದೇ ಅದೇ ಶಾಲೆಯ ಹಿರಿಯ ವಿದ್ಯಾರ್ಥಿ ಸಂತೋಷ್‌ ಕುಮಾರ್‌ ಶೆಟ್ಟಿ ಎನ್ನುವವರು ಹಲವು ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿ, ಶಾಲೆಯನ್ನು ದತ್ತು ತೆಗೆದುಕೊಂಡರು. ನಂತರದಲ್ಲಿ ಶಿಕ್ಷಕರ ನೇಮಕಾತಿಯ ಸಹಿತ ಇನ್ನೂ ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರದಲ್ಲಿ ಎಲ್‌ ಕೆಜಿ ಹಾಗೂ ಯುಕೆಜಿ ವಿದ್ಯಾಭ್ಯಾಸವನ್ನು ಕೂಡ ಪ್ರಾರಂಭಿಸಿದರು. ಅಂದಿನಿಂದ ಶಾಲೆಯ ವಾತಾವರಣವೇ ಬದಲಾಯಿತು ಎಂದರೆ ತಪ್ಪಾಗಲಾರದು.

ಅಲ್ಲದೇ ಊರ ದಾನಿಗಳು ಕೂಡ ಶಾಲೆಯ ಅಭಿವೃದ್ದಿ ಕಾರ್ಯಕ್ರಮಕ್ಕೆ ಕೈಜೋಡಿಸಿ, ಮಕ್ಕಳಿಗೆ ಬೇಕಾಗುವ ರೀತಿಯಲ್ಲಿ ವಾತಾವರಣವನ್ನು ನಿರ್ಮಿಸಿದರು. ಜೊತೆಗೆ ಸರಕಾರದಿಂದ ಆಂಗ್ಲ ಮಾಧ್‌ಯಮದ ತರಗತಿಗೂ ಕೂಡ ಅನುಮತಿ ಸಿಕ್ಕಿತು. ಅಂದಿನಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರತೊಡಗಿತು. ಅಂದು 44 ಮಕ್ಕಳಿದ್ದ ಶಾಲೆಯಲ್ಲಿ ಇಂದು ಇನ್ನೂರಕ್ಕು ಹೆಚ್ಚು ಮಂದಿ ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಮುಚ್ಚಬೇಕು ಹೊರಟಿದ್ದ ಶಾಲೆಗೆ ಹೊಸ ಕಳೆ ಬಂದಿದೆ. ಇದು ಬೇರೆಲ್ಲೂ ಅಲ್ಲ ನಮ್ಮ ದಕ್ಷಿಣ ಕನ್ನಡದ ವೀರಕಂಬದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.

ಇದನ್ನೂ ಓದಿ : Thrisha student: ಸಿಎ ಅಂತಿಮ ಪರೀಕ್ಷೆಯಲ್ಲಿ ಸಾಧನೆ ಗೈದ ತ್ರಿಶಾ ವಿದ್ಯಾರ್ಥಿಗಳು

ಇದನ್ನೂ ಓದಿ : Bhagavad Gita teaching in school : ಶಾಲೆಯಲ್ಲಿ ಭಗವದ್ಘಿತೆ ಬೋಧನೆ: ಸಚಿವ ಬಿ.ಸಿ.ನಾಗೇಶ್ ಸಮ್ಮುಖದಲ್ಲಿ ಮಹತ್ವದ ಸಭೆ

Revival of govt school: Old students who changed the atmosphere

Comments are closed.