Dry Fruits : ನೀವು ಡ್ರೈ ಫ್ರುಟ್ಸ್‌ ಪ್ರಿಯರೇ? ಹಾಗಾದರೆ, ಡ್ರೈ ಫ್ರುಟ್ಸ್‌ ತಿನ್ನುವ ಸರಿಯಾದ ಕ್ರಮ ಇಲ್ಲಿದೆ ನೋಡಿ

ಡ್ರೈ ಫ್ರುಟ್ಸ್‌ (Dry Fruits) ಅಥವಾ ಒಣ ಹಣ್ಣುಗಳು ನಾರಿನಾಂಶ ಹೊಂದಿರುವ ಅತ್ಯತ್ತಮ ಮೂಲವಾಗಿದೆ. ಇದು ಅಗತ್ಯ ವಿಟಮಿನ್‌ ಮತ್ತು ಮಿನರಲ್‌ಗಳ ಕಣಜವಾಗಿದೆ. ಇವುಗಳು ದೀರ್ಘಕಾಲದ ಖಾಯಿಲೆಗಳಾದ ಡಯಾಬಿಟಿಸ್‌ ಮತ್ತು ಹೃದ್ರೋಗದ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತವೆ. ರುಚಿಯಾದ ಮತ್ತು ಗರಿಗರಿಯಾದ ಡ್ರೈ ಫ್ರುಟ್ಸ್‌ಗಳಲ್ಲಿ ಪ್ರೊಟೀನ್‌, ಫೈಬರ್‌ಗಳು ಹೇರಳವಾಗಿದ್ದು ತೂಕ ಇಳಿಸಲು ಸರಿಯಾದ ತಿಂಡಿಯಾಗಿದೆ. ಇದು ಬಹಳ ಸಮಯದವರೆಗೆ ಹಸಿವೆಯನ್ನು ತಡೆಯಬಲ್ಲದು. ಡಯಾಬಿಟಿಸ್‌ ಇರುವವರು ಕೂಡಾ ಸಕ್ಕರೆಯ ಪ್ರಮಾಣ ಕಡಿಮೆ ಇರುವ ಡ್ರೈ ಫ್ರುಟ್ಸ್‌ಗಳನ್ನು ನಂಬಬಹುದಾಗಿದೆ.

ಮಿತವಾಗಿ ಡ್ರೈ ಫ್ರುಟ್ಸ್‌ಗಳನ್ನು ತಿನ್ನುವುದು ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದ್ದರೂ, ಅತಿಯಾದ ಸೇವನೆಯು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು. ಆರೋಗ್ಯದ ಒಳಿತಿಗಾಗಿ ಆಯುರ್ವೇದದಲ್ಲಿ ಡ್ರೈ ಫ್ರುಟ್ಸ್‌ಗಳನ್ನು ತಿನ್ನಲು ಕೆಲವು ನಿಯಮಗಳನ್ನು ಹೊಂದಿದೆ. ಾಯುರವೇದ ತಜ್ಞೆಯಾಗಿರುವ ದಿಕ್ಷಾ ಭಾವ್ಸರ್‌ ಅವರು ಡ್ರೈ ಫ್ರುಟ್ಸ್‌ಗಳನ್ನು ತಿನ್ನಲು ಉತ್ತಮ ಸಮಯ, ಸರಿಯಾದ ಪ್ರಮಾಣ ಮತ್ತಯ ಯಾರು ತಿನ್ನಬಾರದು ಎಂಬುದರ ಕುರಿತು ಹೇಳಿದ್ದಾರೆ.

ಬೀಜಗಳು ವಿಟಮಿನ್‌ E, ಸೆಲೆನಿಯಮ್‌, ಕಾಪರ್‌, ಮ್ಯಾಗ್ನಾಸಿಯಂ, ಮತ್ತು ರೈಬೋಫ್ಲಾವಿನ್‌ ಗಳನ್ನು ಅಧಿಕವಾಗಿ ಹೊಂದಿದೆ. ಇದರ ಜೊತೆಗೆ ಕಬ್ಬಿಣ, ಪೊಟ್ಯಾಸಿಯಂ, ಝಿಂಕ್‌ ಮತ್ತು ವಿಟಮಿನ್‌ B, ನೈಸಿನ್‌, ಥೈಮಿನ್‌ ಮತ್ತು ಫೋಲೇಟ್‌ಗಳು ಇವೆ. ಇವುಗಳನ್ನು ದಿನನಿತ್ಯ ಸೇವಿಸುವುದು ಆರೋಗ್ಯಕ್ಕೆ ಒಳಿತು, ಎಂದು ದಿಕ್ಷಾ ಅವರು ಹೇಳುತ್ತಾರೆ.

ಡ್ರೈ ಫ್ರುಟ್ಸ್‌ ತಿನ್ನುವ ಸರಿಯಾದ ಸಮಯ, ಪ್ರಮಾಣ, ಅಡ್ಡ ಪರಿಣಾಮ ಮತ್ತು ಯಾರು ಸೇವಿಸಬಾರದು ಎಲ್ಲವನ್ನೂ ಅವರು ಹೇಳಿದ್ದಾರೆ.

ಡ್ರೈ ಫ್ರುಟ್ಸ್‌ ತಿನ್ನುವ ಸರಿಯಾದ ಕ್ರಮ
ಆಯುರ್ವೇದದ ಪ್ರಕಾರ ಡ್ರೈ ಫ್ರುಟ್ಸ್‌ಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಅದರಲ್ಲಿರುವ ಆರೋಗ್ಯಕರ ಫ್ಯಾಟ್‌, ಪ್ರೊಟೀನ್‌, ಫೈಬರ್‌ ಮುಂತಾದವುಗಳು ಇವೆ. ಬೀಜಗಳನ್ನು 6 ರಿಂದ 8 ಗಂಟೆಗಳವರೆಗೆ ನೀರಿನಲ್ಲಿ ನೆನೆಸಿಡಿ. ಇದರಿಂದ ಅದರಲ್ಲಿಯ ಉಷ್ಣತೆ ಕಡಿಮೆಯಾಗುತ್ತದೆ. ಒಂದು ವೇಳೆ ಅದನ್ನು ನೆನೆಸದೇ ತಿನ್ನುವಂತಾದರೆ, ಮೊದಲಿಗೆ ಅದನ್ನು ಡ್ರೈ ರೋಸ್ಟ್‌ ಮಾಡಿ. ನಂತರ ಸೇವಿಸಿ. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಇದನ್ನೂ ಓದಿ : Jaljeera : ಜಲ್ಜೀರಾ ಎಂಬ ಅಮೃತ ಪಾನೀಯ! ಬೇಸಿಗೆಯಲ್ಲಿ ಏಕೆ ಕುಡಿಯಬೇಕು ಎಂಬುದು ನಿಮಗೆ ಗೊತ್ತೇ?

ಡ್ರೈ ಫ್ರುಟ್ಸ್‌ ತಿನ್ನಲು ಸರಿಯಾದ ಸಮಯ
ಆಯುರ್ವೇದ ತಜ್ಞರು ಡ್ರೈ ಫ್ರುಟ್ಸ್‌ ಅನ್ನು ಬೆಳಿಗ್ಗೆ, ಇಲ್ಲವೇ ಮಧ್ಯಾಹ್ನ ಅಥವಾ ಸಂಜೆಯ ಸ್ನಾಕ್ಸ್‌ ಸಮಯದಲ್ಲಿ ತಿನ್ನಬಹುದು. ಇದು ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ.

ದಿನವೊಂದಕ್ಕೆ ಎಷ್ಟು ತಿನ್ನಬೇಕು?
ಯಾರಿಗೆ ಜೀರ್ಣಕ್ರಿಯೆ ಸರಿಯಾಗಿದ್ದು, ದಿನವೂ ವ್ಯಾಯಾಮ ಮಾಡುತ್ತಿದ್ದರೆ, ನೀರನ್ನು ಸರಿಯಾಗಿ ಕುಡಿಯುತ್ತಿದ್ದರೆ ಮತ್ತು ಯಾವುದೇ ರೀತಿಯ ದೀರ್ಘ ಕಾಯಿಲೆಗಳು ಇಲ್ಲದಿದ್ದರೆ ಅಂತಹವರು ಒಂದು ಔನ್ಸ್‌ ನಷ್ಟು ಅಂದರೆ ಅವರ ಒಂದು ಕೈಯಲ್ಲಿ ಹಿಡಿಸುವಷ್ಟು ಡ್ರೈ ಫ್ರುಟ್ಸ್‌ ದಿನವೊಂದಕ್ಕೆ ಸೇವಿಸಬಹುದು ಎಂದು ತಜ್ಞರು ಸರಿಯಾದ ಪ್ರಮಾಣವನ್ನು ಹೇಳಿದ್ದಾರೆ.

ಅತಿಯಾಗಿ ಡ್ರೈ ಫ್ರುಟ್ಸ್‌ ತಿನ್ನುವುದರಿಂದ ಆಗುವ ಅಡ್ಡ ಪರಿಣಾಮಗಳೇನು?
ಅತಿಯಾಗಿ ಡ್ರೈ ಫ್ರುಟ್ಸ್‌ಗಳನ್ನು ತಿನ್ನುವುದರಿಂದ ಅಜೀರ್ಣ, ಭಾರವಾದ ಹೊಟ್ಟೆ, ದೇಹದ ಉಷ್ಣತೆಯಲ್ಲಿ ಏರಿಕೆ, ಬೊಜ್ಜು, ಶೇಕಡಾ 80 ರಷ್ಟು ಕೊಬ್ಬು ಇರುವುದರಿಂದ ಹಸಿವಿನ ಕೊರತೆ ಮುಂತಾದ ಸಮಸ್ಯೆಗಳು ಕಾಣಿಸುತ್ತವೆ.

ಯಾರು ತಿನ್ನಬಾರದು
ಹೊಟ್ಟೆಯ ಸಮಸ್ಯೆ ಇರುವವರು, ಜೀರ್ಣದ ಸಮಸ್ಯೆ ಇರುವವರು, ಉಬ್ಬುರ, ಎಸಿಡಿಟಿ, ಡೈರಿಯಾ, IBS, ಅಲ್ಸರ್‌, ಅಲರ್ಜಿ ಇರವವರು ಡ್ರೈ ಫ್ರುಟ್ಸ್‌ಗಳನ್ನು ತಿನ್ನಬಾರದು.

ಇದನ್ನೂ ಓದಿ : Onion Benefits : ಈರುಳ್ಳಿಯ 6 ಪ್ರಯೋಜನಗಳು : ಸೌಂದರ್ಯಕ್ಕೂ ಸೈ, ಆರೋಗ್ಯಕ್ಕೂ ಜೈ !

(Dry Fruits eating dry fruits, dos and don’ts, the best time to eat)

Comments are closed.