Car fire accident: ಕಾರಿಗೆ ಬೆಂಕಿ ತಗುಲಿ ಗರ್ಭಿಣಿ, ಪತಿ ಸಜೀವ ದಹನ

ಕಣ್ಣೂರು: (Car fire accident) ಕೇರಳದಲ್ಲೊಂದು ದುರಂತ ಘಟನೆ ಸಂಭವಿಸಿದ್ದು, ತುಂಬು ಗರ್ಭಿಣಿಯೋರ್ವರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ತೆರಳುತ್ತಿದ್ದ ವೇಳೆ ಏಕಾಏಕಿ ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಹಾಗೂ ಆಕೆಯ ಪತಿ ಸಜೀವ ದಹನವಾಗಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮೃತರನ್ನು ಕುಟ್ಟಿಯಾತೂರು ಮೂಲದ ರೀಶಾ (26) ಹಾಗೂ ಆಕೆಯ ಪತಿ ಪ್ರಜಿತ್ (32) ಎಂದು ಪೊಲೀಸರು ಗುರುತಿಸಿದ್ದಾರೆ.

ರೀಶಾ ಎನ್ನುವಾಕೆ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕುಟುಂಬ ಸಮೇತರಾಗಿ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಕಾರಿಗೆ ಬೆಂಕಿ ತಗುಲಿದೆ. ಕಾರಿನಲ್ಲಿ ಐವರು ಪ್ರಯಾಣಿಕರಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಮೂವರು ಬೆಂಕಿ ತಗುಲುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಿದ್ದಾರೆ. ದಂಪತಿಗಳಿಬ್ಬರು ಸೀಟ್‌ ಬೆಲ್ಟ್‌ ಹಾಕಿಕೊಂಡಿದ್ದ ಕಾರಣ ಇಬ್ಬರು ಹೊರಬರಲಾಗಲಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ದಂಪತಿಗಳಿಬ್ಬರು ಸಜೀವ ದಹನವಾಗಿದ್ದಾರೆ.

ಪೊಲೀಸರ ಪ್ರಕಾರ, ಕಾರಿನಲ್ಲಿ ಐವರು ಪ್ರಯಾಣಿಕರಿದ್ದರು ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಜನರು ಪಾರಾಗಿದ್ದಾರೆ. ಸೀಟ್ ಬೆಲ್ಟ್ ಸಿಕ್ಕಿಹಾಕಿಕೊಂಡ ಕಾರಣ ದಂಪತಿಗಳು ಹೊರಬರಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. “ನಾವು ಅವರನ್ನು ಉಳಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು ಆದರೆ ವಾಹನವು ಬೆಂಕಿಯಿಂದ ಸಂಪೂರ್ಣವಾಗಿ ಆವೃತವಾಗಿತ್ತು. ಬೆಂಕಿ ಹೊತ್ತಿಕೊಂಡ ಕಾರಣ ಇಂಧನ ಟ್ಯಾಂಕ್ ಒಡೆದುಹೋಗುವ ಭಯವೂ ಇತ್ತು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ಪ್ರಾಥಮಿಕ ತನಿಖೆಯ ನಂತರ, ಶಾರ್ಟ್ ಸರ್ಕ್ಯೂಟ್‌ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಫೋರೆನ್ಸಿಕ್ ಅಧಿಕಾರಿಗಳು ಸಹ ವಾಹನವನ್ನು ಪರಿಶೀಲಿಸುತ್ತಿದ್ದಾರೆ. ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ತಜ್ಞರ ಸಹಾಯದಿಂದ ಕಾರನ್ನು ಸರಿಯಾಗಿ ಪರೀಕ್ಷಿಸಲಾಗುವುದು. ಕಾರಿನಲ್ಲಿದ್ದ ಇತರರಿಗೆ ಯಾವುದೇ ತೊಂದರೆಗಳಾಗಿಲ್ಲ. ಅವರು ಆಸ್ಪತ್ರೆಯಲ್ಲಿದ್ದು, ತಪಾಸಣೆಗೆ ಒಳಪಟ್ಟಿದ್ದಾರೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ : Scent of Terror : ಶಿಕ್ಷಕನಾಗಿದ್ದ ಭಯೋತ್ಪಾದಕನಿಂದ ಸುಗಂಧ ದ್ರವ್ಯ ಸುಧಾರಿತ ಸ್ಫೋಟಕ ಸಾಗಾಟ

ಇದನ್ನೂ ಓದಿ : Son killed his Father: ಡ್ರಗ್ಸ್‌ಗೆ ಹಣ ನೀಡಲು ನಿರಾಕರಿಸಿದ್ದಕ್ಕೆ ತಂದೆಯನ್ನೇ ಕೊಂದ ಮಗ

Car fire accident: Car caught fire, pregnant woman, husband burnt alive

Comments are closed.