Arecanut today price : ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ : ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟು ಗೊತ್ತಾ ?

ಬೆಂಗಳೂರು : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ (Arecanut today price) ಮತ್ತೆ ಭರ್ಜರಿ ಏರಿಕೆ ಕಂಡಿದೆ. ಕೆಲವು ದಿನಗಳಿಂದ ಕುಸಿತವಾಗಿದ್ದ ಅಡಿಕೆ ಧಾರಣೆಯಲ್ಲಿ ಚೇತರಿಕೆ ಕಂಡಿದ್ದು, ಅಡಿಕೆ ಬೆಳೆಗಾರರಿಗೆ ಸಂತಸವನ್ನು ತಂದಿದೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆ ಒಂದಾಗಿದೆ. ಇದೀಗ ಅಡಿಕೆ ಧಾರಣೆಯಲ್ಲಿ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಷ್ಟೇ ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ಅಡಿಕೆ ಧಾರಣೆ 52,515 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜನವರಿ 7) ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಯ ಬೆಲೆ :

  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಶಿ ಅಡಿಕೆ 41,119 ರೂ.
  • ದಾವಣಗೆರೆಯ ಚನ್ನಗಿರಿಯಲ್ಲಿ ರಾಶಿ ಅಡಿಕೆ 46,700 ರೂ.
  • ದಾವಣಗೆರೆಯಲ್ಲಿ ರಾಶಿ ಅಡಿಕೆ 45,269 ರೂ.
  • ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ರಾಶಿ ಅಡಿಕೆ 46,099 ರೂ.
  • ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ರಾಶಿ ಅಡಿಕೆ 45,909 ರೂ.
  • ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಶಿ ಅಡಿಕೆ 46,399 ರೂ.
  • ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ರಾಶಿ ಅಡಿಕೆ 52,515 ರೂ.
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆ ಅಡಿಕೆಗೆ 48,000 – 54,500 ರೂ.
  • ದಕ್ಷಿಣ ಕನ್ನಡ ಬಂಟ್ವಾಳದಲ್ಲಿ ಕೋಕ್‌ಗೆ 12,500 – 25,000 ರೂ.
  • ಮಂಗಳೂರಿನಲ್ಲಿ ಹೊಸ ಅಡಿಕೆಗೆ 25,876 -31,000 ರೂ.
  • ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಕೋಕ್‌ಗೆ 11,000 – 26,000 ರೂ.
  • ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಹೊಸ ಅಡಿಕೆಗೆ 32,000 – 38,000 ರೂ.
  • ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ರಾಶಿ ಅಡಿಕೆ 46,809 ರೂ.
  • ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಶಿ ಅಡಿಕೆ 46,419 ರೂ.
  • ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ರಾಶಿ ಅಡಿಕೆ 46,579 ರೂ.
  • ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ರಾಶಿ ಅಡಿಕೆ 45,900 ರೂ.
  • ಶಿವಮೊಗ್ಗದಲ್ಲಿ ರಾಶಿ ಅಡಿಕೆ 46,899 ರೂ.
  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆ 46,899 ರೂ.
  • ತುಮಕೂರು ಜಿಲ್ಲೆಯಲ್ಲಿ ರಾಶಿ ಅಡಿಕೆ 43,400 ರೂ.

ಇದನ್ನೂ ಓದಿ : Amazon mass lay off: ಬಿಗ್ ಶಾಕ್‌ ನೀಡಿದ ಅಮೆಜಾನ್:‌ ಬರೋಬ್ಬರಿ 18,000 ಉದ್ಯೋಗಿಗಳ ವಜಾ

ಇದನ್ನೂ ಓದಿ : ಮತ್ತೆ ಏರಿಕೆ ಕಂಡ ಅಡಿಕೆ ಬೆಲೆ: ಮಾರುಕಟ್ಟೆಯಲ್ಲಿ ಇಂದಿನ ದರವೆಷ್ಟು ಗೊತ್ತಾ?

ಇದನ್ನೂ ಓದಿ : Flipkart Big Bachat Dhamal: ಈ ದಿನದಿಂದ ಪ್ರಾರಂಭವಾಗಲಿದೆ ಫ್ಲಿಪ್‌ಕಾರ್ಟ್‌ನ ಹೊಸ ವರ್ಷದ ಬಿಗ್‌ ಬಚತ್‌ ಧಮಾಲ್‌ ಸೇಲ್‌

Arecanut today price: Huge increase in the price of arecanut: Do you know the price today in the market?

Comments are closed.