Republic Day 2023: ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿದ ಕೇಂದ್ರ ಸರಕಾರ

ನವದೆಹಲಿ: (Republic Day 2023) ನವದೆಹಲಿಯಲ್ಲಿ ಪ್ರತಿವರ್ಷ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ಕರ್ನಾಟಕದ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರಕಾರ ನಿರಾಕರಿಸಿದೆ. ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಸರ್ಕಾರ ಸ್ತಬ್ದ ಚಿತ್ರ ಪ್ರದರ್ಶನ ಮಾಡಿಕೊಂಡು ಬಂದಿದ್ದು, ಈ ಬಾರಿ ಕರ್ನಾಟಕಕ್ಕೆ ಅವಕಾಶ ತಪ್ಪಿ ಹೋಗಿದೆ.

ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ(Republic Day 2023)ದಂದು ನಡೆಯುವ ಸ್ತಬ್ದ ಚಿತ್ರ ಪರೇಡ್‌ ನಲ್ಲಿ ಕರ್ನಾಟಕ ಪ್ರತಿನಿಧಿಸುತ್ತಾ ಬಂದಿದೆ. ಆದರೆ ಈ ಬಾರಿ ಬೇರೆ ರಾಜ್ಯಗಳಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈ ಬಾರಿ ಕರ್ನಾಟಕದ ಸ್ತಬ್ದ ಚಿತ್ರಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಲಾಗಿದೆ.

ಕಳೆದ ಬಾರಿ ರಾಜ್ಯದ ಸ್ತಬ್ದ ಚಿತ್ರ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತ್ತು. ಈ ಬಾರಿ ಮಹಿಳಾ ಸಬಲೀಕರಣದ ವಿಷಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಸಿದ್ದತೆ ನಡೆಸಿಕೊಂಡಿತ್ತು. ಆದರೆ ಕೊನೆಯಲ್ಲಿ ರಾಜ್ಯಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದೆ.

ಈ ಬಾರಿ ಕೇರಳ, ತಮಿಳುನಾಡು ಸೇರಿದಂತೆ ದೇಶದ ಹದಿಮೂರು ರಾಜ್ಯಗಳನ್ನು ಗಣರಾಜ್ಯೋತ್ಸವ ಪರೇಡ್‌ನ ಸ್ತಬ್ದ ಚಿತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಜಿಲ್ಲೆಯು ಮಹಿಳಾ ಸಬಲೀಕರಣವನ್ನು ಸಾರುವ ನಿಟ್ಟಿನಲ್ಲಿ ಒಟ್ಟು ನಾಲ್ಕು ವಿಷಯಗಳನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿತ್ತು. ಕರ್ನಾಟಕ ಪ್ರತಿನಿಧಿಸಿದ್ದ ಹಿಮಳಾ ಸಬಲೀಕರಣ ವಿಷಯಾಧರಿತ ಸ್ತಬ್ದ ಚಿತ್ರ ಆರಂಬದ ಕೆಲವು ಸುತ್ತಿನಲ್ಲಿ ಆಯ್ಕೆಯಾಗಿತ್ತು. ಇದರ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿ ಒಪ್ಪಿಗೆ ಕೂಡ ನೀಡಲಾಗಿತ್ತು. ಕರ್ನಾಟಕದ ಸ್ತಬ್ದ ಚಿತ್ರ ಕಲ್ಪನೆಗೆ ಮೆಚ್ಚುಗೆಯೂ ಕೂಡ ವ್ಯಕ್ತವಾಗಿತ್ತು. ಆದರೆ ಕೊನೆಯ ಹಂತದಲ್ಲಿ ಕರ್ನಾಟಕ ಸ್ತಬ್ದ ಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ .

ಇದನ್ನೂ ಓದಿ : Income Tax Payers : ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್‌ : ಈ 10 ರೀತಿಯಲ್ಲಿ ತೆರಿಗೆ ವಿನಾಯಿತಿ

ಇದನ್ನೂ ಓದಿ : Deadbody found in car: 3 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾರಿನಲ್ಲಿ ಪತ್ತೆ

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ಧಿ : 3 ವರ್ಷಗಳ ನಂತರ ಏರಿಕೆಯಾಯ್ತು ಸ್ಥಿರ ಠೇವಣಿ ದರ

Republic Day 2023: The central government has refused permission to screen silent films in Karnataka

Comments are closed.