ಗಂಡ, ಹೆಂಡತಿ ಇಬ್ಬರಿಗೂ ಪ್ರತೀ ತಿಂಗಳು ಸಿಗಲಿದೆ 10 ಸಾವಿರ ರೂ. : ಕೇಂದ್ರ ಸರಕಾರದಿಂದ ಹೊಸ ಯೋಜನೆ

Atal Pension Yojana : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇದೀಗ ಪತಿ, ಪತ್ನಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಪಿಂಚಣಿ ಯೋಜನೆಯೊಂದನ್ನು ಜಾರಿಗೆ ತಂದಿದೆ.

Atal Pension Yojana : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಇದೀಗ ಪತಿ, ಪತ್ನಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಪಿಂಚಣಿ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅಟಲ್ ಪಿಂಚಣಿ ಯೋಜನೆಯ ಮೂಲಕ ಪ್ರತೀ ತಿಂಗಳು ದಂಪತಿ 10 ಸಾವಿರ ರೂಪಾಯಿ ವರೆಗೆ ಪಡೆಯಲು ಅವಕಾಶವಿದೆ.

Atal Pension Yojana Both husband and wife will get Rs 10 thousand every month
Image Credit to Original Source

ಕೇಂದ್ರ ಸರಕಾರ ದಂಪತಿಗಳಿಗಾಗಿಯೇ ಅಟಲ್‌ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ ದಂಪತಿ ಮಾಸಿಕ ಕಂತುಗಳ ಮೂಲಕ ಹೂಡಿಕೆ ಮಾಡಬಹುದಾಗಿದೆ. ದಂಪತಿ ವಯಸ್ಸು 60  ಕಳೆದ ನಂತರದಲ್ಲಿ ಪ್ರತೀ ತಿಂಗಳು 10 ಸಾವಿರ ರೂಪಾಯಿ ಪಡೆಯಲು ಅವಕಾಶವಿದೆ.

ಅಟಲ್‌ ಪಿಂಚಣಿ ಯೋಜನೆಯ ಮೂಲಕವಾಗಿ ಗಂಡ ಹೆಂಡತಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ 210 ರೂಪಾಯಿ ಹಣವನ್ನು ಪ್ರತೀ ತಿಂಗಳು ಪಾವತಿ ಮಾಡಬಹುದಾಗಿದೆ. ಹೀಗೆ ಪಾವತಿ ಮಾಡಿದ್ರೆ 60 ವರ್ಷದ ಬಳಿಕ 5000 ರುಪಾಯಿ ಪಿಂಚಣಿಯನ್ನು ಪ್ರತೀ ತಿಂಗಳು ಪಡೆಯಲು ಅವಕಾಶವಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ : ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಚೆಕ್‌ ಮಾಡಿ

ಒಂದೊಮ್ಮೆ ನೀವು 30 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರ್ಪಡೆ ಆಗಲು ಬಯಸಿದ್ರೆ, ನೀವು 30 ವರ್ಷಗಳ ಕಾಲ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಪ್ರತೀ ತಿಂಗಳು ನೀವು 116 ರೂಪಾಯಿ ಹೂಡಿಕೆ ಮಾಡಿದ್ರೆ 1000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ.

Atal Pension Yojana Both husband and wife will get Rs 10 thousand every month
Image Credit to Original Source

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಡಿ ಈ ಮಹಿಳೆಯರಿಗೆ ಮಾತ್ರವೇ ಸಿಗಲಿದೆ 6000 ರೂ.

ಇನ್ನು 40 ನೇ ವಯಸ್ಸಿನಲ್ಲಿ ಅಟಲ್‌ ಪಿಂಚಣಿ ಯೋಜನೆಗೆ ಸೇರ್ಪಡೆ ಆದ್ರೆ ನೀವು ಮಾಸಿಕವಾಗಿ 264 ರೂಪಾಯಿ ಪಾವತಿಸಬೇಕಾಗಿದೆ. ಅಲ್ಲದೇ 5000 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯ ಬೇಕಾದ್ರೆ ನೀವು 30 ವರ್ಷಗಳ ಕಾಲ 577 ರೂಪಾಯಿ ಪಾವತಿಸಬೇಕಾಗಿದೆ.

ಇದನ್ನೂ ಓದಿ : ಪ್ರತೀ ಕುಟುಂಬಕ್ಕೆ ಸಿಗಲಿದೆ 5000 ರೂ. : ಕಾಂಗ್ರೆಸ್‌ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ

18 ರಿಂದ 40 ವರ್ಷದ ಒಳಗಿನ ಎಲ್ಲರೂ ಕೂಡ ಈ ಯೋಜನೆಗೆ ಸೇರ್ಪಡೆ ಆಗಬಹುದಾಗಿದೆ. ಅಟಲ್‌ ಪಿಂಚಣಿ ಯೋಜನೆಗೆ ಒಮ್ಮ ಸೇರ್ಪಡೆ ಆದ್ರೆ ಕನಿಷ್ಠ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗಿದೆ. ಒಂದೊಮ್ಮೆ ದಂಪತಿ ಈ ಯೋಜನೆಗೆ ಸೇರ್ಪಡೆ ಆದ್ರೆ ಪ್ರತೀ ತಿಂಗಳು 10 ಸಾವಿರ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ವೃದ್ದಾಪ್ಯದ ಸಂದರ್ಭದಲ್ಲಿ ಅಟಲ್‌ ಪಿಂಚಣಿ ಯೋಜನೆ ಹೆಚ್ಚು ಅನುಕೂಲಕರ. ಅದ್ರಲ್ಲೂ ಅತ್ಯಂತ ಕಡಿಮೆ ಮಾಸಿಕ ಕಂತುಗಳ ಪಾವತಿಯ ಮೂಲಕ ಈ ಯೋಜನೆಗೆ ಸೇರ್ಪಡೆ ಆಗಬಹುದಾಗಿದೆ.

Atal Pension Yojana Both husband and wife will get Rs 10 thousand every month

Comments are closed.