Atal Pension Yojana : ವೃದ್ದಾಪ್ಯದಲ್ಲಿ ಭಾರತೀಯ ನಾಗರೀಕರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಭಾರತ ಸರಕಾರ ಅಟಲ್ ಪಿಂಚಣಿ ಯೋಜನೆ ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ನಾಗರಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯ ಲಾಭವೇನು ? ಅರ್ಜಿ ಸಲ್ಲಿಸುವುದು ಹೇಗೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಟಲ್ ಪಿಂಚಣಿ ಯೋಜನೆ 2023 ಯೋಜನೆಗೆ ನಾಗರಿಕರು, ವಿಶೇಷವಾಗಿ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರು ಸೇರ್ಪಡೆ ಆಗಬಹುದು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಫ್ ಲೈನ್ ಹಾಗೂ ಆನ್‌ಲೈನ್‌ಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಾಗರಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಅಟಲ್ ಪಿಂಚಣಿ ಯೋಜನೆ (APY) ಅನ್ನು 2015 ರಲ್ಲಿ ಪ್ರಾರಂಭಿಸಲಾಗಿದೆ.

ಅಟಲ್ ಪಿಂಚಣಿ ಯೋಜನೆ (APY) 2023: ಅರ್ಜಿ ಸಲ್ಲಿಸುವುದು ಹೇಗೆ ?
ಅಟಲ್ ಪಿಂಚಣಿ ಯೋಜನೆಗೆ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಅಟಲ್ ಪಿಂಚಣಿ ಯೋಜನೆ ಅರ್ಜಿ ಸಲ್ಲಿಸ ಬಹುದು. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ದಾಖಲೆಗಳ ಜೊತೆಗೆ ಭರ್ತಿ ಮಾಡಿದ ಅರ್ಜಿಯನ್ನು ಬ್ಯಾಂಕುಗಳಿಗೆ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ
ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು, ಆಧಾರ್ ಕಾರ್ಡ್‌ನ ಫೋಟೋಕಾಪಿಯನ್ನು ಸಲ್ಲಿಸಿದ ನಂತರದಲ್ಲಿ ಅಪ್ಲಿಕೇಶನ್ ಅನುಮೋದನೆಯ ನೋಟಿಫಿಕೇಷನ್ ಸಂದೇಶವನ್ನು ಸ್ವೀಕರಿಸುತ್ತೀರಿ. ನಂತರದಲ್ಲಿ ಅರ್ಜಿಯನ್ನು ನೀವು ಸುಲಭವಾಗಿ ಸಲ್ಲಿಕೆ ಮಾಡಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆ 2023ಯ ಪ್ರಯೋಜನಗಳು :
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ಜಾರಿಯಲ್ಲಿದೆ. ಅಲ್ಲದೇ ಟಲ್ ಪಿಂಚಣಿ ಯೋಜನೆಯನ್ನು ಆಡಳಿತಾತ್ಮಕ ಮತ್ತು ಸಾಂಸ್ಥಿಕ ವಾಸ್ತುಶಿಲ್ಪದ ಅಡಿಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ.
ಇದನ್ನೂ ಓದಿ : 10 ವರ್ಷಗಳಿಂದ ಆಧಾರ್ ಕಾರ್ಡ್ ಮಾಹಿತಿ ಅಪ್ಡೇಟ್ ಮಾಡಿಲ್ಲವೇ..? ಡಿ.14ರ ಒಳಗೆ ಉಚಿತವಾಗಿ ಮಾಡಿ
ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳು :
ಈ ಯೋಜನೆಗೆ ಸೇರ್ಪಡೆಯಾಗುವ ಚಂದಾದಾರರು 60 ವರ್ಷ ವಯಸ್ಸಿನ ನಂತರದಲ್ಲಿ ಪ್ರತೀ ತಿಂಗಳು 1000ರೂ. ನಿಂದ 5000ರೂ. ವರೆಗೆ ಕನಿಷ್ಠ ಖಾತರಿ ಪಿಂಚಣಿಯನ್ನು ಪಡೆಯಬಹುದಾಗಿದೆ. ಆದರೆ ವಯಸ್ಸಿನ ಆಧಾರದ ಮೇಲೆ ಪಿಂಚಣಿಯ ಪ್ರಯೋಜನಗಳು ವಯಸ್ಸಿನ ಆಧಾರದ ಮೇಲೆ ಬದಲಾವಣೆಯಾಗಲಿದೆ.

ಇನ್ನು ಅಟಲ್ ಪಿಂಚಣಿ ಯೋಜನೆಯಲ್ಲಿ ಸೇರ್ಪಡೆ ಆದ ನಂತರದಲ್ಲಿ ವ್ಯಕ್ತಿಯು ಸಾವನ್ನಪ್ಪಿದ್ದರೆ ಅಂಗಾತಿಗೆ ಪಿಂಚಣಿಯ ಹಣ ದೊರೆಯಲಿದೆ. ಚಂದಾದಾರರು ಮತ್ತು ಸಂಗಾತಿಯ ಮರಣದ ನಂತರ ಚಂದಾದಾರರಿಂದ 60 ವರ್ಷದವರೆಗೆ ಸಂಗ್ರಹವಾದ ಪಿಂಚಣಿ ಸಂಪತ್ತನ್ನು ಸಂಪೂರ್ಣವಾಗಿ ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ
ಅಟಲ್ ಪಿಂಚಣಿ ಯೋಜನೆ : ವಯಸ್ಸು ಮತ್ತು ಮಾನದಂಡ
ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆ ಆಗಲು ಭಾರತೀಯ ನಾಗರಿಕರಾಗಿರಬೇಕು.18 ರಿಂದ 40 ವರ್ಷ ವಯಸ್ಸಿನ ಯಾರು ಬೇಕಾದ್ರೂ ಈ ಯೋಜನೆಗೆ ಸೇರ್ಪಡೆ ಆಗಬಹುದು. ಈ ಯೋಜನೆಗೆ ಸೇರ್ಪಡೆ ಆದ ನಂತರದಲ್ಲಿ ಕನಿಷ್ಠ 20 ವರ್ಷಗಳ ಕಾಲ ಪಿಂಚಣಿಗೆ ಹಣವನ್ನು ಪಾವತಿಸಬೇಕು. ಚಂದಾದಾರರಿಗೆ 60 ವರ್ಷ ತುಂಬಿದ ನಂತರ ಪಿಂಚಣಿ ರಿಟರ್ನ್ಸ್ ನೀಡಲಾಗುತ್ತದೆ.
ಆದರೆ ಆದಾಯ ತೆರಿಗೆ ಪಾವತಿ ಮಾಡುವವರು ಈ ಯೋಜನೆಗೆ ಸೇರ್ಪಡೆ ಆಗಲು ಅವಕಾಶವಿಲ್ಲ. ಒಂದು ವೇಳೆ 1ನೇ ಅಕ್ಟೋಬರ್ 2022 ರಂದು ಅಥವಾ ನಂತರ ಸೇರ್ಪಡೆಗೊಂಡ ಚಂದಾದಾರರು, ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮೊದಲು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, APY ಖಾತೆಯನ್ನು ಮುಚ್ಚಲಾಗುವುದು. ಮತ್ತು ಇಲ್ಲಿಯವರೆಗೆ ಸಂಗ್ರಹವಾದ ಪಿಂಚಣಿ ಸಂಪತ್ತನ್ನು ಚಂದಾದಾರರಿಗೆ ನೀಡಲಾಗುವುದು.
Atal pension yojana Eligility How to Apply