ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗಿ ಮುಂದುವರಿಕೆ : ಬಿಸಿಸಿಐ ಅಧಿಕೃತ ಘೋಷಣೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ( Rahul Dravid) ಅವರನ್ನು ಮರು ನೇಮಕ ಮಾಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ( Rahul Dravid) ಅವರನ್ನು ಮರು ನೇಮಕ ಮಾಡಿದೆ. ಏಕದಿನ ವಿಶ್ವಕಪ್‌ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ ಅವಧಿ ಮುಕ್ತಾಯವಾಗಿದ್ದು, ಇದೀಗ ಬಿಸಿಸಿಐ ಒಪ್ಪಂದವನ್ನು ವಿಸ್ತರಣೆ ಮಾಡಿದೆ. ಈ ಕುರಿತು ಬಿಸಿಸಿಐ ಅಧಿಕೃತ ಆದೇಶ ಹೊರಡಿಸಿದೆ.

ರಾಹುಲ್‌ ದ್ರಾವಿಡ್‌ ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಯ ಅವಧಿ ಮುಗಿದ ಬೆನ್ನಲ್ಲೇ ಐಪಿಎಲ್‌ ಪ್ರಾಂಚೈಸಿಯ ಮೆಂಟರ್‌ ಆಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ವಿಶ್ವಕಪ್‌ ಬೆನ್ನಲ್ಲೇ ನಡೆದ ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ವಿವಿಎಸ್‌ ಲಕ್ಷ್ಮಣ್‌ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಎನ್‌ಸಿಎ ಮುಖ್ಯಸ್ಥರಾಗಿರುವ ಲಕ್ಷ್ಮಣ್‌ ಟೀಂ ಇಂಡಿಯಾದ ಕೋಚ್‌ ಆಗಲಿದ್ದಾರೆ ಎನ್ನಲಾಗುತ್ತಿತ್ತು.

Rahul Dravid Team india Coach Bcci Announces extension of contracts for Head coach and Support Staff
Image Credit : BCCI

ಆದರೆ ಇದೀಗ ಬಿಸಿಸಿಐ ರಾಹುಲ್‌ ದ್ರಾವಿಡ್‌ ಅವರನ್ನೇ ಮತ್ತೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ನೇಮಕ ಮಾಡಿದೆ. ಆದರೆ ರಾಹುಲ್‌ ದ್ರಾವಿಡ್‌ ಅವರ ಹೊಸ ಒಪ್ಪಂದದ ಅವಧಿ ಎಷ್ಟು ಸಮಯ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ಗುಜರಾತ್‌ ಟೈಟಾನ್ಸ್‌ ತಂಡದ ಕೋಚ್‌ ಆಗಿರುವ ಆಶಿಶ್‌ ನೆಹ್ರಾ ಅವರು ಟಿ೨೦ ಕ್ರಿಕೆಟ್‌ಗೆ ಕೋಚ್‌ ಆಗಲು ಒಪ್ಪದ ಹಿನ್ನೆಲೆಯಲ್ಲಿ ರಾಹುಲ್‌ ದ್ರಾವಿಡ್‌ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : IPL 2024 : RCBಗೆ ವಿರಾಟ್‌ ಕೊಹ್ಲಿ ಗುಡ್‌ಬೈ ! ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್‌ ಕೊಹ್ಲಿ

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ರಾಹುಲ್‌ ದ್ರಾವಿಡ್‌ ಅವರು ಎರಡನೇ ಅವಧಿ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಡಿಸೆಂಬರ್‌ ೧೦ರಿಂದ ೩ ಟಿ೨೦, ೩ ಏಕದಿನ ಹಾಗೂ ೨ ಟೆಸ್ಟ್‌ ಪಂದ್ಯಗಳನ್ನು ಭಾರತ ದಕ್ಷಿಣ ಆಫ್ರಿಕಾ ವಿರುದ್ದ ಆಡಲಿದೆ. ರಾಹುಲ್‌ ದ್ರಾವಿಡ್‌ ಅವರ ಜೊತೆಗೆ ಇತರ ಸಹಾಯಕ ಕೋಚ್‌ಗಳ ಅವಧಿಯನ್ನೂ ಕೂಡ ಬಿಸಿಸಿಐ ವಿಸ್ತರಣೆ ಮಾಡಿದೆ.

ಇದನ್ನೂ ಓದಿ : ಐಪಿಎಲ್ 2024 : ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ

ರಾಹುಲ್‌ ದ್ರಾವಿಡ್‌ ಅವರ ದೂರದೃಷ್ಟಿ, ವೃತ್ತಿಪರತೆ ಮತ್ತು ಅವರ ಪ್ರಯತ್ನಗಳಿಂದಾಗಿ ಟೀಂ ಇಂಡಿಯಾ ಇಂದು ಯಶಸ್ಸಿನತ್ತ ಮುನ್ನೆಡೆದಿದೆ. ಭಾರತೀಯ ಕ್ರಿಕೆಟ್‌ ತಂಡದ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಅವರು ಮುಂದುವರಿಯುವ ಅಗತ್ಯವಿದೆ. ದ್ರಾವಿಡ್‌ ಅವರ ಅವಧಿಯಲ್ಲಿ ಭಾರತ ತಂಡ ಯಶಸ್ಸಿನ ಉತ್ತುಂಗದಲ್ಲಿದೆ. ಬಿಸಿಸಿಐ ಪ್ರಸ್ತಾಪವನ್ನು ಸ್ವೀಕರಿಸಿದ್ದಕ್ಕಾಗಿ ನನಗೆ ಸಂತೋಷವಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ತಿಳಿಸಿದ್ದಾರೆ.

Rahul Dravid Team india Coach Bcci Announces extension of contracts for Head coach and Support Staff
Image Credit to Original Source

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಯನ್ನು ವಹಿಸಿಕೊಳ್ಳಲು ರಾಹುಲ್‌ ದ್ರಾವಿಡ್‌ ಅವರಿಗಿಂತ ಉತ್ತಮ ವ್ಯಕ್ತಿಯಿಲ್ಲ. ದ್ರಾವಿಡ್‌ ಅವರು ತನ್ನನ್ನು ತಾನು ಸಾಬೀತು ಪಡಿಸಿದ್ದಾರೆ. ಶ್ರೇಷ್ಟತೆಗೆ ಸಾಟಿಯಿಲ್ಲದ ಬದ್ದತೆ, ಟೀಂ ಇಂಡಿಯಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯೂ ಅಸಾಧಾರಣ ಸಾಧನೆಯನ್ನು ಮಾಡಿದೆ. ವಿಶ್ವಕಪ್‌ನಲ್ಲಿ 10 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ ಎಂದಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯಶಾ ತಿಳಿಸಿದ್ದಾರೆ.

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾರು ನಾಯಕ ? ಹಾರ್ದಿಕ್‌ ಪಾಂಡ್ಯ ಅಥವಾ ರೋಹಿತ್‌ ಶರ್ಮಾ ?

ಟೀಂ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಮಾತನಾಡಿ, ಟೀಂ ಇಂಡಿಯಾದ ಜೊತೆಗಿನ ಎರಡು ವರ್ಷಗಳು ಸಂಪೂರ್ಣ ಸ್ಮರಣೀಯವಾಗಿದೆ. ಡ್ರೆಸ್ಸಿಂಗ್‌ ರೂಂನಲ್ಲಿ ಸ್ಥಾಪಿಸಿರುವ ಸಂಸ್ಕೃತಿಯ ಬಗ್ಗೆ ನಿಜವಾಗಿಯೂ ಹೆಮ್ಮೆಯಿದೆ. ಎರಡನೇ ಅವಧಿಗೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಬಿಸಿಸಿಐ ಮತ್ತು ಪದಾಧಿಕಾರಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

Rahul Dravid Team india Coach Bcci Announces extension of contracts for Head coach and Support Staff

Comments are closed.