ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2023 : ಮಹಿಳಾ ಹೂಡಿಕೆದಾರರಿಗೆ ಎಫ್‌ಡಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ಗಳು

ನವದೆಹಲಿ : ಸಾಮಾನ್ಯವಾಗಿ ಹಿರಿಯ ನಾಗರಿಕರು ಬ್ಯಾಂಕ್‌ಗಳಿಂದ ನಿಶ್ಚಿತ ಠೇವಣಿ (ಎಫ್‌ಡಿ) ಗಳ ಮೇಲೆ ಹೆಚ್ಚುವರಿ ಬಡ್ಡಿದರವನ್ನು (Bank FD Interest Rates) ಪಡೆಯುತ್ತಾರೆ. ಇತ್ತೀಚೆಗೆ ಎಫ್‌ಡಿಗಳು ಜನಪ್ರಿಯ ಹೂಡಿಕೆಯ ಆಯ್ಕೆಗಳಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಹೊಸ ಹೂಡಿಕೆದಾರರಲ್ಲಿ, ಅವು ಆದಾಯದ ಖಚಿತತೆ ಮತ್ತು ಬಂಡವಾಳ ರಕ್ಷಣೆಯನ್ನು ನೀಡುತ್ತವೆ. ಸ್ಥಿರ ಠೇವಣಿಗಳು ಅಲ್ಪಾವಧಿಯ ಹಣಕಾಸಿನ ಗುರಿಗಳನ್ನು ಸಾಧಿಸಲು ಮತ್ತು ನಿವೃತ್ತಿಯ ನಂತರದ ಉತ್ತಮವಾದ ಜೀವನವನ್ನು ನಡೆಸಲು ಸೂಕ್ತವಾದ ಸಾಧನವಾಗಿದೆ.

ಆದರೆ, ಎಲ್ಲಾ ಬ್ಯಾಂಕ್‌ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC) ಮತ್ತು ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್‌ಎಫ್‌ಸಿ) ಮಹಿಳಾ ಹೂಡಿಕೆದಾರರಿಗೆ ಎಫ್‌ಡಿಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡುವುದಿಲ್ಲ. ನಿಶ್ಚಿತ ಠೇವಣಿಗಳ ಮೇಲೆ, ವಿಶೇಷವಾಗಿ ಮಹಿಳಾ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುವ ಕೆಲವು ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ (NBFC) ಗಳನ್ನು ಈ ಕೆಳಗೆ ತಿಳಿಸಲಾಗಿದೆ.

ಇಂಡಿಯನ್ ಬ್ಯಾಂಕ್ :
ಇಂಡಿಯನ್ ಬ್ಯಾಂಕ್ ಇತ್ತೀಚೆಗೆ ‘IND SUPER 400 DAYS’ ಎಂಬ ಹೊಸ ಚಿಲ್ಲರೆ ಅವಧಿಯ ಎಫ್‌ಡಿಗಳನ್ನು ಪರಿಚಯಿಸಿದೆ. ಇದು ಗ್ರಾಹಕರಿಗಾಗಿ ಮಾರ್ಚ್ 6, 2023 ರಿಂದ ಹೂಡಿಕೆಗಾಗಿ ತೆರೆದಿದೆ. ಈ ಅವಧಿಯ ಠೇವಣಿಯಲ್ಲಿ, ಬ್ಯಾಂಕ್ ಮಹಿಳಾ ಹೂಡಿಕೆದಾರರಿಗೆ ಶೇ. 0.05ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಇದಲ್ಲದೆ, ಹಿರಿಯ ಮಹಿಳಾ ನಾಗರಿಕರು ಶೇ. 7.65ರವರೆಗೆ ಗಳಿಸಬಹುದು ಮತ್ತು ಸೂಪರ್ ಹಿರಿಯ ನಾಗರಿಕರು ಶೇ. 7.90ರವರೆಗೆ ಬಡ್ಡಿದರವನ್ನು ಗಳಿಸಬಹುದು.

ಮಹಿಳಾ ಉಳಿತಾಯ ಯೋಜನೆ :
ಎಫ್‌ಡಿಗಳ ಹೊರತಾಗಿ, ಮಹಿಳೆಯರಿಗಾಗಿ ಒಂದು ಸಣ್ಣ ಉಳಿತಾಯ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಇದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ 2023 ಭಾಷಣದಲ್ಲಿ ಘೋಷಿಸಿದರು. ಹಣಕಾಸು ಸಚಿವೆ ಸೀತಾರಾಮನ್ ಪ್ರಕಾರ, ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಎರಡು ವರ್ಷಗಳ ಅವಧಿಯನ್ನು ಹೊಂದಿರುತ್ತದೆ ಹಾಗೂ ಇದರಲ್ಲಿ ಶೇ.7.5ರಷ್ಟು ಬಡ್ಡಿದರವನ್ನು ಹೊಂದಿರುತ್ತದೆ.

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ :
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮಹಿಳೆಯರಿಗಾಗಿ ‘PSB GRIH LAKSHMI ಫಿಕ್ಸೆಡ್ ಡೆಪಾಸಿಟ್ ಸ್ಕೀಮ್’ ಎಂಬ ವಿಶೇಷ ನಿಶ್ಚಿತ ಠೇವಣಿಯನ್ನು ಪ್ರಾರಂಭಿಸಿದೆ. ಇದು ಮಹಿಳೆಯರಿಗಾಗಿ ಆನ್‌ಲೈನ್ ಮಾರ್ಗದ ಮೂಲಕ ಎಫ್‌ಡಿ ಬುಕ್ ಮಾಡಿದಾಗ ಶೇ. 6.90ರಷ್ಟು ಬಡ್ಡಿದರವನ್ನು ನೀಡಿದೆ. ಹಿರಿಯ ನಾಗರಿಕ ಮಹಿಳಾ ಹೂಡಿಕೆದಾರರಿಗೆ ಬ್ಯಾಂಕ್ ಶೇ. 7.40ರಷ್ಟು ಬಡ್ಡಿದರವನ್ನು ನೀಡುತ್ತದೆ.

ಶ್ರೀರಾಮ್ ಫೈನಾನ್ಸ್ :
ಶ್ರೀರಾಮ್ ಫೈನಾನ್ಸ್ ಇತ್ತೀಚೆಗೆ ಮಹಿಳಾ ಠೇವಣಿದಾರರಿಗೆ ಶೇ. 0.10ರಷ್ಟು ಹೆಚ್ಚಿನ ಬಡ್ಡಿದರದ ಹೆಚ್ಚುವರಿ ಬಡ್ಡಿದರವನ್ನು ಘೋಷಿಸಿದೆ. ಹಿರಿಯ ಮಹಿಳಾ ನಾಗರಿಕರು ಸಾಮಾನ್ಯ ಠೇವಣಿಗಳ ಮೇಲೆ ಶೇ. 0.50 ಮತ್ತು ಶೇ0.10ರಷ್ಟು ಬಡ್ಡಿದರವನ್ನು ಗಳಿಸಬಹುದು ಎಂದು ತಿಳಿಸಿದೆ.

ಇದನ್ನೂ ಓದಿ : ಆಭರಣ ಪ್ರಿಯರ ಗಮನಕ್ಕೆ : ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಇದನ್ನೂ ಓದಿ : ಪಿಂಚಣಿದಾರರ ಗಮನಕ್ಕೆ : ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಮೇ 3 ರವರೆಗೆ ಅವಧಿ ವಿಸ್ತರಿಸಿದ ಇಪಿಎಫ್‌ಒ

ಇದನ್ನೂ ಓದಿ : ಇಪಿಎಫ್‌ಒ ಬಡ್ಡಿದರದ ಬಗ್ಗೆ ಸಿಬಿಟಿಯಿಂದ ಮಾರ್ಚ್ 25ಕ್ಕೆ ಮಹತ್ವದ ಘೋಷಣೆ

SBI, HDFC ಬ್ಯಾಂಕ್ ಮತ್ತು ICICI ಬ್ಯಾಂಕ್ :
ನಿಯಮಿತ ಹೂಡಿಕೆದಾರರಿಗೆ, ಎಸ್‌ಬಿಐ ತನ್ನ ವಿಶೇಷ ಅಮೃತ್ ಕಲಾಶ್ ಠೇವಣಿಯ ಮೇಲೆ ಶೇ. 7.10ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಇದು 2023 ರ ಮಾರ್ಚ್‌ 31 ರವರೆಗೆ ಮಾನ್ಯವಾಗಿರುತ್ತದೆ. ಹಾಗೆಯೇ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ ಮೇಲೆ ಶೇ. 7.10 ರಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ.

Bank FD Interest Rates : International Women’s Day 2023: Banks increase FD interest rates for women investors

Comments are closed.