Bank Holidays 2024 : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಗಳಿಗೆ ವಾರ್ಷಿಕ ರಜೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೀಗ ಎಪ್ರಿಲ್ ಆರಂಭಕ್ಕೆ ಇನ್ನೂ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿದ್ದು, ಇದೀಗ ಬ್ಯಾಂಕ್‌ಗಳಿಗೆ ಹೊಸ ರಜಾ ಪಟ್ಟಿ (Bank Holiday) ಬಿಡುಗಡೆ ಆಗಲಿದೆ. ಏಪ್ರಿಲ್ ತಿಂಗಳಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಎಂದಿನಂತೆ ಬ್ಯಾಂಕ್‌ಗಳಿಗೆ ರಜೆ. ಏಪ್ರಿಲ್ 2024-25 ರ ಆರ್ಥಿಕ ವರ್ಷದ ಮೊದಲ ತಿಂಗಳು ಆಗಿರುವುದರಿಂದ, ಕೆಲವು ಜನರು ಹಣಕಾಸಿನ ಸಂಬಂಧಿತ ಕೆಲಸಗಳಿಗಾಗಿ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಬಹುದು.
ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ತುರ್ತು ಕೆಲಸಗಳಿದ್ದರೆ, ರಜೆ ಪಟ್ಟಿಯನ್ನು ನೋಡಿದ ನಂತರ ಬ್ಯಾಂಕ್ಗೆ ಭೇಟಿ ನೀಡಿ. ಇಲ್ಲದಿದ್ದರೆ ನಿಮ್ಮ ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತದೆ. ಆದಾಗ್ಯೂ, ಈ ರಜಾದಿನಗಳಲ್ಲಿ ಎಟಿಎಂಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಇದನ್ನೂ ಓದಿ : ಎಸ್‌ಬಿಐ ಗ್ರಾಹಕರ ಗಮನಕ್ಕೆ : ಏಪ್ರಿಲ್ 1 ರಿಂದ ಹೆಚ್ಚಳವಾಗಲಿದೆ ಈ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕ
ಆಯಾಯ ರಾಜ್ಯಗಳ ಪ್ರಾದೇಶಿಕ ಆಚರಣೆಗೆ ತಕ್ಕಂತೆ ಬ್ಯಾಂಕ್ ರಜೆಯನ್ನು ನಿರ್ಧಾರ ಮಾಡಲಾಗುತ್ತದೆ. ಆದರೂ ಕೂಡ ಕೆಲವೊಂದು ಸಾರ್ವಜನಿಕ ರಜೆಗಳು ಭಾರತದಾದ್ಯಂತ ಅನ್ವಯವಾಗಲಿದೆ. ರಜೆಯ ದಿನಗಳಲ್ಲಿ ಗ್ರಾಹಕರು ಆನ್‌ಲೈನ್ ಮೂಲಕ ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಬಹುದಾಗಿದೆ.
ಆದಾಗ್ಯೂ, ನೀವು ಬ್ಯಾಂಕ್ಗೆ ಭೇಟಿ ನೀಡಬೇಕಾದರೆ, ರಜೆಯ ಪಟ್ಟಿಯನ್ನು ನೋಡುವುದು ಉತ್ತಮ. ಗೃಹ ಸಾಲ, ವಾಹನ ಸಾಲ ಇತ್ಯಾದಿ ಸಾಲಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಬ್ಯಾಂಕ್‌ಗೆ ಭೇಟಿ ನೀಡಬೇಕು. ಆದ್ದರಿಂದ ಏಪ್ರಿಲ್ ತಿಂಗಳಲ್ಲಿ ಯಾವ ದಿನಗಳು ಬ್ಯಾಂಕ್ ರಜೆ ಎಂದು ಪರಿಶೀಲಿಸಿ ಮತ್ತು ನಂತರ ಭೇಟಿ ನೀಡಿ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಇದನ್ನೂ ಓದಿ : Gruha Lakshmi Yojana Big Updates : ಗೃಹಲಕ್ಷ್ಮೀ ಯೋಜನೆ ಬಿಗ್ ಅಪ್ಟೇಟ್ಸ್ : ಈ 3 ದಾಖಲೆ ಕೊಟ್ರೆ ಸಿಗುತ್ತೆ ಬಾಕಿ ಹಣ
RBI ಬ್ಯಾಂಕ್ ರಜಾದಿನಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ- ಆರ್‌ಬಿಐ ಪ್ರಕಟಿಸುವ ರಜೆಯು ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಮಾತ್ರವಲ್ಲದೇ, ಖಾಸಗಿ, ವಿದೇಶಿ, ಪ್ರಾದೇಶಿಕ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳಿಗೆ ನ್ವಯವಾಗಲಿದೆ.
ಬ್ಯಾಂಕ್ ರಜಾದಿನಗಳು ಏಪ್ರಿಲ್ 2024:

ಏಪ್ರಿಲ್ 1: ವಾರ್ಷಿಕ ಖಾತೆಗಳನ್ನು ಮುಚ್ಚುವ ಖಾತೆಯಲ್ಲಿ ರಜೆ.
ಏಪ್ರಿಲ್ 5: ಬಾಬು ಜಗಜೀವನ್ ರಾಮ್ ಜನ್ಮದಿನ/ಜುಮಾತ್-ಉಲ್-ವಿದಾ
ಏಪ್ರಿಲ್ 7: ಭಾನುವಾರ
ಏಪ್ರಿಲ್ 9: ಗುಡಿ ಪಾಡ್ವಾ/ಯುಗಾದಿ ಹಬ್ಬ/ತೆಲುಗು ಹೊಸ ವರ್ಷದ ದಿನ/ಮೊದಲ ನವರಾತ್ರಿ
ಏಪ್ರಿಲ್ 10: ರಂಜಾನ್-ಈದ್ (ಈದ್-ಉಲ್-ಫಿತರ್)
ಏಪ್ರಿಲ್ 11: ರಂಜಾನ್-ಈದ್ (ಈದ್-ಉಲ್-ಫಿತರ್)
ಏಪ್ರಿಲ್ 13: ಬೊಹಾಗ್ ಬಿಹು/ಚೆರೋಬಾ/ಬೈಸಾಕಿ/ಬಿಜು ಹಬ್ಬ
ಏಪ್ರಿಲ್ 14: ಭಾನುವಾರ
ಇದನ್ನೂ ಓದಿ : ಎಷ್ಟೇ ದುಡಿದರೂ ಪರ್ಸ್ ನಲ್ಲಿ ಹಣ ಉಳಿತಿಲ್ವಾ ? ಇಲ್ಲಿದೆ ಹಣ ಉಳಿಸುವ ಸರಳ ಟಿಪ್ಸ್
ಏಪ್ರಿಲ್ 15: ಬೋಹಾಗ್ ಬಿಹು/ಹಿಮಾಚಲ ದಿನ
ಏಪ್ರಿಲ್ 17: ಶ್ರೀ ರಾಮ ನವಮಿ (ಚೈತೆ ದಾಸೈನ್)
ಏಪ್ರಿಲ್ 20: ಗರಿಯಾ ಪೂಜೆ
ಏಪ್ರಿಲ್ 21: ಭಾನುವಾರ
ಏಪ್ರಿಲ್ 27: ನಾಲ್ಕನೇ ಶನಿವಾರ
ಏಪ್ರಿಲ್ 28: ಭಾನುವಾರ.
Bank Holidays 2024 Bank will close 14 days from April 1