Bank Holidays August 2023 : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ರಜೆ

ನವದೆಹಲಿ : ಅಗಸ್ಟ್‌ ತಿಂಗಳ ರಜಾ ದಿನಗಳ ಪಟ್ಟಿಯನ್ನು (Bank Holidays August 2023) ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸಿದೆ. ಆರ್‌ಬಿಐ ಬ್ಯಾಂಕ್‌ ರಜಾದಿನಗಳ ಕ್ಯಾಲೆಂಡರ್‌ ಪ್ರಕಾರ ಭಾನುವಾರ ಹಾಗೂ ಶನಿವಾರ ಒಳಗೊಂಡಂತೆ ಅಗಸ್ಟ್‌ ತಿಂಗಳಿನಲ್ಲಿ ಒಟ್ಟು 14 ದಿನಗಳ ಕಾಲ ಬ್ಯಾಂಕುಗಳು ಮುಚ್ಚಲಿವೆ.

ಆಗಸ್ಟ್ ತಿಂಗಳಲ್ಲಿ ರಕ್ಷಾ ಬಂಧನ, ಸ್ವಾತಂತ್ರ್ಯ ದಿನ, ತೆಂಡೋಂಗ್ ಲ್ಹೋ ರಮ್ ಫಾತ್, ಪಾರ್ಸಿ ಹೊಸ ವರ್ಷ (ಶಾಹೆನ್‌ಶಾಹಿ), ಶ್ರೀಮಂತ ಶಂಕರದೇವರ ತಿಥಿ, ಮೊದಲ ಓಣಂ, ತಿರುವೋಣಂಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತುರ್ತು ಕೆಲಸಗಳಿಗೆ ತೆರಳುವವರು ರಜೆಯ ಪಟ್ಟಿಯನ್ನು ಗಮನಿಸಬೇಕಾಗಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಆಗಸ್ಟ್‌ನಲ್ಲಿ 14 ದಿನಗಳವರೆಗೆ ಮುಚ್ಚಲ್ಪಟ್ಟಿದ್ದರೂ ಸಹ, ಎಲ್ಲಾ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ದೇಶಾದ್ಯಂತ ಲಭ್ಯವಿರುತ್ತವೆ. ಅಗಸ್ಟ್‌ ತಿಂಗಳ ರಜಾಪಟ್ಟಿ ಈ ಕೆಳಗಿನಂತಿದೆ.

ಆಗಸ್ಟ್ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿ:

 • ಆಗಸ್ಟ್ 6: ತಿಂಗಳ ಮೊದಲ ಭಾನುವಾರ
 • ಆಗಸ್ಟ್ 8: ಟೆಂಡಾಂಗ್ ಲ್ಹೋ ರಮ್ ಫಾತ್
 • ಆಗಸ್ಟ್ 12: ತಿಂಗಳ ಎರಡನೇ ಶನಿವಾರ
 • ಆಗಸ್ಟ್ 13: ತಿಂಗಳ ಎರಡನೇ ಭಾನುವಾರ
 • ಆಗಸ್ಟ್ 15: ಸ್ವಾತಂತ್ರ್ಯ ದಿನ (ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್ – ಆಂಧ್ರಪ್ರದೇಶ, ಹೈದರಾಬಾದ್ – ತೆಲಂಗಾಣ, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೊಹಿಮಾ, ಕೋಲ್ಕತ್ತಾ, ಕಾನ್ಪುರ್, ಕೊಚ್ಚಿ, ಕೊಹಿಮಾ, ಕೋಲ್ಕತ್ತಾ, ರಾಂಚಿ, ಲಕ್ನ್‌ಪುರ್, ಮುಂಬೈ, ಲಖನ್‌ಪುರ್ ಲಾಂಗ್, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂ ಸ್ವಾತಂತ್ರ್ಯ ದಿನಾಚರಣೆಗಾಗಿ)
 • ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಪಾರ್ಸಿ ಹೊಸ ವರ್ಷವನ್ನು ಆಚರಿಸಲು ಬೇಲಾಪುರ್, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
 • ಆಗಸ್ಟ್ 18: ಶ್ರೀಮಂತ ಶಂಕರದೇವರ ತಿಥಿ (ಶ್ರೀಮಂತ ಶಂಕರದೇವರ ತಿಥಿಯ ನಿಮಿತ್ತ ಗುವಾಹಟಿಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
 • ಆಗಸ್ಟ್ 20: ಮೂರನೇ ಭಾನುವಾರ
 • ಆಗಸ್ಟ್ 26: ತಿಂಗಳ ನಾಲ್ಕನೇ ಶನಿವಾರ
 • ಆಗಸ್ಟ್ 27: ತಿಂಗಳ ನಾಲ್ಕನೇ ಭಾನುವಾರ
 • ಆಗಸ್ಟ್ 28: ಮೊದಲ ಓಣಂ (ಮೊದಲ ಓಣಂ ಆಚರಿಸಲು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
 • ಆಗಸ್ಟ್ 29: ತಿರುವೋಣಂ (ತಿರುವೋಣಂ ಆಚರಿಸಲು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.0
 • ಆಗಸ್ಟ್ 30: ರಕ್ಷಾ ಬಂಧನ (ರಕ್ಷಾ ಬಂಧನದ ನಿಮಿತ್ತ ಜೈಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ)
 • ಆಗಸ್ಟ್ 31: ರಕ್ಷಾ ಬಂಧನ/ಶ್ರೀ ನಾರಾಯಣ ಗುರು ಜಯಂತಿ/ಪಾಂಗ್-ಲಬ್ಸೋಲ್ (ರಕ್ಷಾ ಬಂಧನ/ಶ್ರೀ ನಾರಾಯಣ ಗುರು ಜಯಂತಿಯ ನಿಮಿತ್ತ ಗ್ಯಾಂಗ್‌ಟಕ್, ಡೆಹ್ರಾಡೂನ್, ಕಾನ್ಪುರ್, ಕೊಚ್ಚಿ, ಲಕ್ನೋ ಮತ್ತು ತಿರುವನಂತಪುರಂಗಳಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ).

ಇದನ್ನೂ ಓದಿ : EPFO on Pensioners Update : ಪಿಂಚಣಿದಾರರ ಗಮನಕ್ಕೆ : ಪಿಂಚಣಿದಾರರಿಗೆ ದೊಡ್ಡ ಪರಿಹಾರ ನೀಡಿದ ಇಪಿಎಫ್‌ಒ

ಇದನ್ನೂ ಓದಿ : Aadhaar Card Update‌ : ನಾಗರಿಕರ ಗಮನಕ್ಕೆ : ನಿಮ್ಮ ಆಧಾರ್ ಕಾರ್ಡ್‌ನ್ನು ಉಚಿತವಾಗಿ ಅಪ್‌ಡೇಟ್‌ ಮಾಡಿ

Bank Holidays August 2023 : Attention Bank Customers : 14 days bank holiday in August

Comments are closed.