Bank Holidays January 2022 ರ ಜನವರಿ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 16 ದಿನ ರಜೆ

ಡಿಸೆಂಬರ್‌ ತಿಂಗಳಲ್ಲಿ (December 2021) ಬ್ಯಾಂಕ್ ರಜಾ ಅಥವಾ ಮತ್ತಿತರ ವಿಷಯಗಳಿಂದ ಯಾವುದಾದರೂ ಬ್ಯಾಂಕ್ ಕೆಲಸ ಮಾಡಿಕೊಳ್ಳಲಾಗದೇ ಇದ್ದೀರಾ? 2022ರ ಆರಂಭದಲ್ಲಿ ಅಂದರೆ, ಜನವರಿ ತಿಂಗಳಲ್ಲಿ Bank Holidays January 2022) ಬ್ಯಾಂಕ್ ಕೆಲಸಗಳನ್ನು ಮಾಡಿಕೊಳ್ಳೋಣ ಎಂದುಕೊಂಡಿದ್ದರೆ ಸ್ವಲ್ಪ ಈ  ಸ್ಟೋರಿ ಓದಿ.  ಏಕೆಂದರೆ 2022ನೇ ಇಸವಿಯ ಜನವರಿ ತಿಂಗಳಿನಲ್ಲಿ ಹದಿನಾರು ದಿನಗಳ ಕಾಲ ಬ್ಯಾಂಕ್‌ಗಳ ಬಾಗಿಲು ಹಾಕಿರುತ್ತದೆ. ಎಲ್ಲ ರಾಜ್ಯಗಳಲ್ಲಿನ ಬ್ಯಾಂಕ್‌ಗಳಿಗೂ ಈ ರಜೆಗಳು ಅನ್ವಯವಾಗದೇ ಇದ್ದರೂ ಈ ನಿಯಮವನ್ನು ನೀವೊಮ್ಮೆ ತಿಳಿದುಕೊಳ್ಳುವುದು ಲೇಸು. ಏಕೆಂದರೆ ನೀವು ಬ್ಯಾಂಕ್‌ಗೆಂದು ತೆರಳಿದ ದಿನವೇ ಬ್ಯಾಂಕ್ ಬಾಗಿಲು ಹಾಕಿದ್ದರೆ ಕಷ್ಟವಲ್ಲ ಮಾರಾಯರೇ!

ನಮ್ಮ ದೇಶದಲ್ಲಿನ ಬ್ಯಾಂಕ್‌ಗಳಿಗೆ ಪ್ರತಿ ತಿಂಗಳೂ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಘೋಷಿಸಲಾಗಿರುತ್ತದೆ. ಈ ರಜೆಗಳನ್ನು ಸೇರಿಸಿ ಇನ್ನಿತರ ಕೆಲವು ರಜಾದಿನಗಳೂ ಕೂಡಿ ಜನವರಿ ತಿಂಗಳೊಂದರಲ್ಲೆ ಭಾರತದಲ್ಲಿನ ಬ್ಯಾಂಕ್‌ಗಳಿಗೆ ಒಟ್ಟು ಹದಿನಾರು ದಿನಗಳ ರಜಾದಿನವಿದೆ. ಇವು ಎಲ್ಲ ಬ್ಯಾಂಕ್‌ಗಳು ಮತ್ತು ಎಲ್ಲ ರಾಜ್ಯಗ್ಳಿಗೂ ಅನ್ವಯವಾಗದೆಯೂ ಇರಬಹುದು. ಆದರೆ ಈ ರಜಾದಿನಗಳಲ್ಲಿ ಆನ್‌ಲೈನ್ ವಹಿವಾಟುಗಳನ್ನು ಖಂಡಿತ ನಡೆಸಬಹುದಾಗಿದೆ.

1 ಜನವರಿ: ಹೊಸ ವರ್ಷದ ದಿನ (ಇಡೀ ದೇಶದಲ್ಲೂ ಬ್ಯಾಂಕ್‌ಗಳಿಗೆ ರಜೆ)

2 ಜನವರಿ: ರವಿವಾರ

4 ಜನವರಿ: ಲೋಸೂಂಗ್ (ಸಿಕ್ಕಿಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)

8 ಜನವರಿ: ಎರಡನೇ ಶನಿವಾರ

9 ಜನವರಿ: ರವಿವಾರ

11 ಜನವರಿ: ಮಿಷನರಿ ಡೇ (ಮಿಜೋರಾಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)

ಜನವರಿ 12: ಸ್ವಾಮಿ ವಿವೇಕಾನಂದ ಅವರ ಜನ್ಮದಿನ

14 ಜನವರಿ: ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬ

15 ಜನವರಿ: ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ

16 ಜನವರಿ: ರವಿವಾರ

18 ಜನವರಿ: ಚೆನ್ನೈನಲ್ಲಿ ಥೈ ಪೂಸಂ ಎಂಬ ಹಬ್ಬ

22 ಜನವರಿ: ನಾಲ್ಕನೆಯ ಶನಿವಾರ

23 ಜನವರಿ: ರವಿವಾರ

30 ಜನವರಿ: ರವಿವಾರ

26 ಜನವರಿ: ಗಣರಾಜ್ಯೋತ್ಸವ ಸಂಭ್ರಮ

31 ಜನವರಿ: ಮಿ-ಡ್ಯಾಮ್-ಮಿ-ಫೈ (ಅಸ್ಸಾಂ ರಾಜ್ಯದಲ್ಲಿ ಮಾತ್ರ ಬ್ಯಾಂಕ್ ರಜೆ)

ಹೀಗಾಗಿ 2021ರ ಜನವರಿ ತಿಂಗಳ ಮೊದಲ ದಿನವೂ ಬ್ಯಾಂಕ್‌ಗೆ ರಜೆ ಆಗಿದ್ದು, ಜನವರಿ 31 ರಂದೂ ಸಹ ರಜೆ ಇರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: Human Milk Bank : ನವಜಾತ ಶಿಶುಗಳಿಗೆ ವರದಾನ : ಮಂಗಳೂರಿನಲ್ಲಿ ಸ್ಥಾಪನೆ ಆಗಲಿದೆ ಹ್ಯುಮನ್ ಮಿಲ್ಕ್ ಬ್ಯಾಂಕ್

(Bank Holidays January 2022 Remain Closed For 16 Days here is the list)

Comments are closed.