Bank strike 2026 : ಇನ್ನೆಷ್ಟು ದಿನ ಬ್ಯಾಂಕ್ ಮುಷ್ಕರ ? ನಾಳೆ ಓಪನ್ ಇರುತ್ತಾ ಬ್ಯಾಂಕ್ ?

Bank strike 2026 : ಭಾರತದಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯುತ್ತಿದೆ. ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಈ ಮುಷ್ಕರಕ್ಕೆ ಕರೆ ನೀಡಿದ್ದು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ಗಣನೀಯ ವ್ಯತ್ಯಯ ಉಂಟಾಗಿದೆ.
ಶನಿವಾರದಿಂದಲೇ ಬ್ಯಾಂಕ್‌ಗಳು ಬಂದ್ ಆಗಿದ್ದು, ಇಂದೂ ಕೂಡ ಮುಷ್ಕರ ಹಿನ್ನೆಲೆಯಲ್ಲಿ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗಿದೆ. ಜನವರಿ 24ರಂದು ಶನಿವಾರ ನಾಲ್ಕನೇ ಶನಿವಾರ ಆಗಿದ್ರೆ, ಜನವರಿ 25 ಭಾನುವಾರ, ಜನವರಿ 26ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಜೆ ನೀಡಲಾಗಿತ್ತು.
ಇಂದು ಒಂದು ದಿನದ ಕಾಲ ಸಂಪೂರ್ಣ ಬ್ಯಾಂಕುಗಳು ಬಂದ್ ಆಗಿರಲಿವೆ. ಜನವರಿ 28ರಂದು ಬುಧವಾರ ದೇಶದ ಎಲ್ಲಾ ಬ್ಯಾಂಕುಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ. ನಗದು ವ್ಯವಹಾರ ಹೊರತುಪಡಿಸಿ, ಉಳಿದ ಎಲ್ಲಾ ವ್ಯವಹಾರಗಳನ್ನು ಗ್ರಾಹಕರು ಬಳಕೆ ಮಾಡಿಕೊಳ್ಳಬಹುದಾಗಿದೆ.
Bank strike 2026 : ಬ್ಯಾಂಕ್ ಮುಷ್ಕರಕ್ಕೆ ಪ್ರಮುಖ ಕಾರಣವೇನು ?
ಬ್ಯಾಂಕ್ ನೌಕರರು ವಾರದಲ್ಲಿ 5 ದಿನಗಳ ಕೆಲಸದ ವ್ಯವಸ್ಥೆಯನ್ನು (ಅಂದರೆ ಎಲ್ಲಾ ಶನಿವಾರಗಳನ್ನು ರಜೆ ಎಂದು ಘೋಷಿಸುವುದು) ತಕ್ಷಣವೇ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ.
ಯಾವೆಲ್ಲಾ ಬ್ಯಾಂಕ್ ಗಳು ಬಂದ್ ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇತರ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿವೆ. ಕರ್ನಾಟಕ ಬ್ಯಾಂಕ್ ಸೇರಿದಂತೆ ಕೆಲವು ಖಾಸಗಿ ವಲಯದ ಹಳೆಯ ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರಿದೆ.
ಇದನ್ನೂ ಓದಿ : ಹಿರಿಯ ನಾಗರಿಕರ ಕಾರ್ಡ್: 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಬಂಪರ್ ಕೊಡುಗೆ
4 ದಿನ ರಜೆ ಗ್ರಾಹಕರು ಕಂಗಾಲು
ಜನವರಿ 24 (ನಾಲ್ಕನೇ ಶನಿವಾರ), ಜನವರಿ 25 (ಭಾನುವಾರ) ಮತ್ತು ಜನವರಿ 26 (ಗಣರಾಜ್ಯೋತ್ಸವ) ರಂದು ಈಗಾಗಲೇ ಬ್ಯಾಂಕ್‌ಗಳಿಗೆ ರಜೆ ಇತ್ತು. ಇಂದು ಮುಷ್ಕರ ನಡೆಯುತ್ತಿರುವುದರಿಂದ, ಗ್ರಾಹಕರಿಗೆ ಸತತ ನಾಲ್ಕನೇ ದಿನವೂ ಬ್ಯಾಂಕ್ ವ್ಯವಹಾರಗಳಲ್ಲಿ ತೊಂದರೆಯಾಗುತ್ತಿದೆ.
ಇದನ್ನೂ ಓದಿ : ಒಂದು ಗ್ರಾಂ ಚಿನ್ನಕ್ಕೆ ಒಂದು ಲಕ್ಷ; ಹೊರಬಿತ್ತು ಭಯಾನಕ ಭವಿಷ್ಯ!
ಯಾವೆಲ್ಲಾ ಬ್ಯಾಂಕಿಂಗ್ ಸೇವೆಗಳು ಲಭ್ಯ ?
- ಬ್ಯಾಂಕ್ ಶಾಖೆಗಳಲ್ಲಿ ನಗದು ವ್ಯವಹಾರ, ಚೆಕ್ ಕ್ಲಿಯರೆನ್ಸ್ ಮತ್ತು ಪಾಸ್‌ಬುಕ್ ಅಪ್‌ಡೇಟ್‌ನಂತಹ ಭೌತಿಕ ಸೇವೆಗಳು ಸ್ಥಗಿತಗೊಂಡಿದ್ದರೂ, ಈ ಕೆಳಗಿನ ಡಿಜಿಟಲ್ ಸೇವೆಗಳು ಲಭ್ಯವಿರುತ್ತವೆ:
- UPI ಸೇವೆಗಳು: Google Pay, PhonePe ಮತ್ತು ಇತರ ಅಪ್ಲಿಕೇಶನ್‌ಗಳ ಮೂಲಕ ಹಣ ವರ್ಗಾವಣೆ ಮಾಡಬಹುದು.
- ATM ಸೇವೆಗಳು: ಹಣ ಹಿಂತೆಗೆದುಕೊಳ್ಳಲು ಎಟಿಎಂಗಳು ಕಾರ್ಯನಿರ್ವಹಿಸುತ್ತವೆ (ನಗದು ಲಭ್ಯತೆ ಸ್ಥಳೀಯವಾಗಿ ವ್ಯತ್ಯಾಸವಾಗಬಹುದು).
- ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್: ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ.
ಗಮನಿಸಿ: HDFC, ICICI ಮತ್ತು Axis ನಂತಹ ಪ್ರಮುಖ ಖಾಸಗಿ ಬ್ಯಾಂಕ್‌ಗಳು ಈ ಮುಷ್ಕರದಲ್ಲಿ ಭಾಗವಹಿಸುತ್ತಿಲ್ಲವಾದ್ದರಿಂದ, ಅವುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
Bank Strike 2026: When Will Banks Reopen ? Is Jan 28 a Working Day?



