ಧೂಮಪಾನಿಗಳಿಗೆ ಬಿಗ್ ಶಾಕ್: ಕೇಂದ್ರದ ಸುಂಕದ ಎಫೆಕ್ಟ್, ಸಿಗರೇಟ್ ಬೆಲೆ ಶೇ. 21ರಷ್ಟು ಭಾರಿ ಏರಿಕೆ!

ಕೇಂದ್ರ ಸರ್ಕಾರವು ಇತ್ತೀಚಿಗೆ ಅಬಕಾರಿ ಸುಂಕದಲ್ಲಿ ಏರಿಕೆ ಮಾಡಿದ್ದು, ಪರಿಣಾಮವಾಗಿ ಸಿಗರೇಟ್​ ದರ ಶೇಕಡಾ 21ರಷ್ಟು ಏರಿಕೆ ಮಾಡಲಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಒಂದೊಂದೇ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತಲೇ ಇದೆ. ಇದೀಗ ಈ ಸಾಲಿಗೆ ಸಿಗರೇಟ್​ ಕೂಡ ಸೇರಿದ್ದು ಧೂಮಪಾನಿಗಳ ಜೇಬಿಗೆ ಭರ್ಜರಿ ಕತ್ತರಿಯೇ ಬಿದ್ದಿದೆ. ಕೇಂದ್ರ ಸರ್ಕಾರವು ಇತ್ತೀಚಿಗೆ ಅಬಕಾರಿ ಸುಂಕದಲ್ಲಿ ಏರಿಕೆ ಮಾಡಿದ್ದು, ಪರಿಣಾಮವಾಗಿ ದೇಶದಲ್ಲಿ ಸಿಗರೇಟ್​ ದರ ಶೇಕಡಾ 21ರಷ್ಟು ಏರಿಕೆ ಮಾಡಲಾಗಿದೆ.

ಪ್ರಮುಖ ಸಿಗರೇಟ್​ ತಯಾರಿಕಾ ಕಂಪನಿಗಳಾದ ಐಟಿಸಿ ಇಂಡಿಯಾ, ಗಾಡ್‌ಫ್ರೇ ಫಿಲಿಪ್ಸ್ ಸೇರಿದಂತೆ ವಿವಿಧ ಬ್ರ್ಯಾಂಡ್​ಗಳ ಸಿಗರೇಟ್​ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹೊಸ ಅಬಕಾರಿ ಸುಂಕ ಜಾರಿಗೆ ಬಂದ ಬೆನ್ನಲ್ಲೇ ಕಂಪನಿಗಳು ಈ ನಿರ್ಧಾರ ಕೈಗೊಂಡಿದ್ದು, ಇದರಿಂದಾಗಿ ಸಿಗರೇಟ್​ ಪ್ರಿಯರು ಇನ್ಮೇಲೆ ದುಬಾರಿ ಹೊಗೆ ಬಿಡಬೇಕಿದೆ.

ಇದನ್ನೂ ಓದಿ : ಸಾರಿಗೆ ಸಂಘಟನೆಗಳಿಗೆ ಬಿಗ್ ಶಾಕ್ : ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ

ಗಾಡ್‌ಫ್ರೇ ಫಿಲಿಪ್ಸ್ ಕಂಪನಿಯ ಪ್ರಸಿದ್ಧ ಪ್ರೀಮಿಯಂ ಬ್ರ್ಯಾಂಡ್ ಮಾರ್ಲ್‌ಬೋರೋ ಸಿಗರೇಟ್ ಪ್ಯಾಕೆಟ್ ಬೆಲೆಯನ್ನು 70 ರೂಪಾಯಿಯಿಂದ 85 ರೂಪಾಯಿಗೆ ಏರಿಕೆ ಮಾಡಲಾಗಿದೆ. ಐಟಿಸಿ ಕಂಪನಿಯ Gold Flake ‘ಗೋಲ್ಡ್ ಫ್ಲೇಕ್ ಸೂಪರ್‌ಸ್ಟಾರ್’ ಪ್ಯಾಕೆಟ್ ದರವೂ 70 ರೂಪಾಯಿಯಿಂದ 79 ರೂಪಾಯಿಗೆ ಹೆಚ್ಚಳವಾಗಿದೆ..ಸಿಗರೇಟ್ ಉತ್ಪನ್ನಗಳ ಒಟ್ಟು ಮಾರಾಟದಲ್ಲಿ ಸುಮಾರು 8 ರಿಂದ 12 ಶೇಕಡಾ ಪಾಲು ಹೊಂದಿರುವ ಈ ಬ್ರ್ಯಾಂಡ್‌ಗಳ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ ಬಿದ್ದಂತಾಗಿದೆ.

ಕೇವಲ ಅಬಕಾರಿ ಸುಂಕ ಮಾತ್ರವಲ್ಲದೇ, ಷೇರು ಮಾರುಕಟ್ಟೆಯ ದರವೂ ಈ ಬೆಲೆ ಏರಿಕೆಗೆ ಕಾರಣವಾಗಿದೆ. ಮಂಗಳವಾರದ ಷೇರು ವ್ಯವಹಾರದಲ್ಲಿ ಗಾಡ್‌ಫ್ರೇ ಫಿಲಿಪ್ಸ್ ಕಂಪನಿಯ ಷೇರುಗಳು ಸುಮಾರು 1.5 ಶೇಕಡಾ ಏರಿಕೆ ಕಂಡಿದೆ, ಪ್ರತಿ ಷೇರಿನ ಬೆಲೆ 2,347 ರೂಪಾಯಿಗಳ ಮಟ್ಟ ತಲುಪಿತ್ತು. ಇತ್ತ ಐಟಿಸಿ ಕಂಪನಿಯ ಷೇರುಗಳಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಷೇರು 312 ರೂಪಾಯಿಗಳ ಸುತ್ತಮುತ್ತ ವಹಿವಾಟು ನಡೆಸಿದೆ. ಕಂಪನಿಗಳ ಆದಾಯ ಹೆಚ್ಚುವ ನಿರೀಕ್ಷೆಯಿಂದ ಹೂಡಿಕೆದಾರರು ಕೂಡ ಈ ಷೇರುಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories