ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ಧಿ : ಶೇ. 41ರಷ್ಟು ತುಟಿಭತ್ಯೆ ಹೆಚ್ಚಳ

ನವದೆಹಲಿ : ಕೇಂದ್ರ ಸರಕಾರ 2023ರ ಕೇಂದ್ರ ಬಜೆಟ್‌ ಮಂಡನೆಗೂ ಮೊದಲೇ ಸರಕಾರಿ ನೌಕರರಿಗೆ ಸಿಹಿ ಸುದ್ಧಿ ನೀಡಿದೆ. ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ (DA)ಯನ್ನು (Central Government Employees DA Allowance) ಶೇಕಡಾ 38 ರಿಂದ ಶೇಕಡಾ 41 ಕ್ಕೆ ಹೆಚ್ಚಿಸುವ ಸಾಧ್ಯತೆ.ಭವಿಷ್ಯದ ಸೂಚ್ಯಂಕವು (ಡಿಸೆಂಬರ್ 2022 ಕ್ಕೆ) ಒಂದೇ ಆಗಿದ್ದರೆ ತುಟ್ಟಿಭತ್ಯೆ 3% ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಶೇ. 3 ಡಿಎ (DA) ಹೆಚ್ಚಳದ ನಂತರ ಸಂಬಳ ಹೆಚ್ಚಳದ ವಿವರ :

  • ನೌಕರರ ಮೂಲ ವೇತನ ಅಥವಾ ಪಿಂಚಣಿ ರೂ 18,000 ಆಗಿದ್ದರೆ, 41% ದರದಲ್ಲಿ ಅಂದಾಜು ಡಿಎ/ಡಿಆರ್ ಸಂಬಳಕ್ಕೆ ಸೇರಿಸಿದಾಗ ಪ್ರತಿ ತಿಂಗಳಿಗೆ ರೂ. 7,380ರಷ್ಟು ಸಂಬಳ ಹೆಚ್ಚಳ ಸಿಗುತ್ತದೆ.
  • ನೌಕರರಿಗೆ ಶೇ. 38 ದರದಲ್ಲಿ, ಡಿಎ/ಡಿಆರ್ ಮೊತ್ತವು ತಿಂಗಳಿಗೆ 6,840 ರೂ. ಸಿಗುತ್ತದೆ. ಇದರರ್ಥ ಸಂಬಳವು ತಿಂಗಳಿಗೆ 900 ರೂಪಾಯಿಗಳಷ್ಟು ಹೆಚ್ಚಾಗುತ್ತದೆ.
  • ನೌಕರರ ವಾರ್ಷಿಕ ವೇತನದಲ್ಲಿ 900X12 = 10,800 ರೂ. ಹೆಚ್ಚಳ ಆಗಿರುತ್ತದೆ.
  • ಅಂದರೆ ಶೇಕಡಾ 18,000 ಮೂಲ ವೇತನವನ್ನು ಪಡೆಯುವ ಸರಕಾರಿ ನೌಕರನ ವೇತನವು 2023 ರಲ್ಲಿ ತುಟಿಭತ್ಯೆ (DA) ಹೆಚ್ಚಳದೊಂದಿಗೆ ತಿಂಗಳಿಗೆ ಹೆಚ್ಚುವರಿ 900 ರೂ.ಗಳನ್ನು ಪಡೆಯಬಹುದು. ವಾರ್ಷಿಕ ಆಧಾರದ ಮೇಲೆ ಇದು 6480 ರೂ. ಮೊತ್ತ ಆಗಿರುತ್ತದೆ.

ಇದನ್ನೂ ಓದಿ : ಸ್ವಿಗ್ಗಿಗೂ ತಟ್ಟಿದ ಉದ್ಯೋಗ ಕಡಿತದ ಭೀತಿ : 600 ಉದ್ಯೋಗಳು ವಜಾ ಸಾಧ್ಯತೆ

ಇದನ್ನೂ ಓದಿ : ಎಸ್‌ಬಿಐ ಗ್ರಾಹಕರೇ ಗಮನಕ್ಕೆ : ನಿಮ್ಮ ಬ್ಯಾಂಕ್‌ ಖಾತೆಯ ಹಣಕ್ಕೆ ಕನ್ನ ಬೀಳಬಹುದು ಎಚ್ಚರ !

ಇದನ್ನೂ ಓದಿ : ಪಿಂಚಣಿದಾರರ ಗಮನಕ್ಕೆ : ನಿಮ್ಮ ಸಮಸ್ಯೆಗಳಿಗೆ ಇಪಿಎಫ್ಒ ಪೋರ್ಟಲ್‌ನಿಂದ ಪರಿಹಾರ ಲಭ್ಯ

ಕಳೆದ ವರ್ಷದ ಆರಂಭದಲ್ಲಿ, ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯನ್ನು ಶೇಕಡಾ 4 ರಿಂದ 38 ರಷ್ಟು ಹೆಚ್ಚಿಸಿತ್ತು. ಆ ಭತ್ಯೆಗಳ ಪಾವತಿಗೆ ಬೊಕ್ಕಸಕ್ಕೆ ಒಟ್ಟು 12,852 ಕೋಟಿ ರೂಪಾಯಿ ಹೊರೆಯಾಗಿದೆ. ಈ ಕ್ರಮವು (4% ಡಿಎ ಹೆಚ್ಚಳ) ಸುಮಾರು 47.68 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಿದೆ. ಮಾರ್ಚ್ 2022 ರಲ್ಲಿ, ಕ್ಯಾಬಿನೆಟ್ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DR) ಅನ್ನು ಈ ಹಿಂದೆ ಇದ್ದ ಶೇಕಡಾ 31 ರಿಂದ ಶೇಕಡಾ 3 ರಿಂದ 34 ಕ್ಕೆ ಹೆಚ್ಚಿಸಿತು. ಇದು ಜನವರಿ 1, 2022 ರಿಂದ ಜಾರಿಗೆ ಬಂದಿರುತ್ತದೆ.

ಇದನ್ನೂ ಓದಿ : ಉಬರ್ ಉದ್ಯೋಗಿಗಳಿಗೆ ಗುಡ್‌ ನ್ಯೂಸ್ : ಉದ್ಯೋಗ ಕಡಿತ ಇಲ್ಲ ಎಂದ ಸಿಇಒ ಖೋಸ್ರೋಶಾಹಿ

Central Government Employees DA Allowance: Good news for Central Government Employees: Rs. 41 percent increase in gratuity

Comments are closed.