ಗ್ರಾಹಕರಿಗೆ ಇಲ್ಲ ‘ಗ್ಯಾಸ್​ ಟ್ರಬಲ್​’ : ಹೋಟೆಲ್ ಮಾಲೀಕರಿಗೆ ಕೇಂದ್ರದಿಂದ ಖಡಕ್ ಆದೇಶ – ತಪ್ಪಿದರೆ ಬೀಳುತ್ತೆ ಭಾರಿ ದಂಡ!

ಆಹಾರದ ಮೊತ್ತ ಹಾಗೂ ಜಿಎಸ್​ಟಿ ಮಾತ್ರವನ್ನೇ ಗ್ರಾಹಕರ ಬಳಿಯಿಂದ ಹೋಟೆಲ್​ ಮಾಲೀಕರು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ತಿಳಿಯದಂತೆ ಇಂತಹ ಚಾರ್ಜ್‌ಗಳನ್ನು ಬಿಲ್‌ನಲ್ಲಿ ಸೇರಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದಲ್ಲಿ ವಾಣಿಜ್ಯ ಸಿಲಿಂಡರ್​ಗೆ ಅಭಾವ ಉಂಟಾಗಿರುವುದು ಹೊಸ ವಿಚಾರವೇನಲ್ಲ. ಆದರೆ ಇದೇ ಅಭಾವವನ್ನು ಬಂಡವಾಳವಾಗಿಟ್ಟುಕೊಂಡು ಗ್ರಾಹಕರ ಜೇಬು ( ಸುಡುವ (hotel gas service charges ) ಯತ್ನ ಮಾಡುವ ಹೋಟೆಲ್​ ಹಾಗೂ ರೆಸ್ಟಾರೆಂಟ್​ ಮಾಲೀಕರಿಗೆಂದೇ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.

ಈ ನಿಯಮಾವಳಿಯ ಪ್ರಕಾರ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ತಾಕೀತು ಮಾಡಲಾಗಿದೆ.
ಯಾವುದೇ ಹೋಟೆಲ್​ಗಳಲ್ಲಿ ಗ್ರಾಹಕರಿಗೆ ನೀಡುವ ಬಿಲ್​ನಲ್ಲಿ ಗ್ಯಾಸ್​ ಸರ್​ಚಾರ್ಜ್ ಅಥವಾ ಇಂಧನ ರಿಕವರಿ ಶುಲ್ಕ ಎಂಬ ಹೆಸರಿನಲ್ಲಿ ಹೆಚ್ಚುವರಿ ಹಣವನ್ನು ಕೇಳುವಂತಿಲ್ಲ.

ಆಹಾರದ ಮೊತ್ತ ಹಾಗೂ ಜಿಎಸ್​ಟಿ ಮಾತ್ರವನ್ನೇ ಗ್ರಾಹಕರ ಬಳಿಯಿಂದ ಹೋಟೆಲ್​ ಮಾಲೀಕರು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರಿಗೆ ತಿಳಿಯದಂತೆ ಇಂತಹ ಚಾರ್ಜ್‌ಗಳನ್ನು ಬಿಲ್‌ನಲ್ಲಿ ಸೇರಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Also Read : ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ : ಇನ್ಫೋಸಿಸ್ ಮತ್ತು ಎಲ್‌ಆಂಡ್‌ಟಿ ಷೇರು ಖರೀದಿಸಲು ಇದು ಸಕಾಲವೇ? ತಜ್ಞರ ಸಲಹೆ 

ಇದಾದ ಬಳಿಕವೂ ಯಾವುದೇ ಹೋಟೆಲ್​ಗಳಲ್ಲಿ ಈ ರೀತಿಯ ಚಾರ್ಜ್ ವಿಧಿಸುತ್ತಿರುವುದು ಗ್ರಾಹಕರ ಗಮನಕ್ಕೆ ಬಂದರೆ ಅದನ್ನು ನೇರವಾಗಿ ಪ್ರಶ್ನಿಸುವ ಹಾಗೂ ಈ ಬಿಲ್​ನ್ನು ಪಾವತಿ ಮಾಡದೇ ಇರುವ ಅಧಿಕಾರವನ್ನು ಗ್ರಾಹಕರು ಹೊಂದಿರುತ್ತಾರೆ.

ಅಲ್ಲದೇ ಸಹಾಯಕ್ಕಾಗಿ ಗ್ರಾಹಕರು 1915 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೋಟೆಲ್​ ಮಾಲೀಕರ ವಿರುದ್ಧ ದೂರು ಸಲ್ಲಿಸಬಹುದಾಗಿದೆ. ಇದರ ಜೊತೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಿಸಿಪಿಎ ಅವರಿಗೆ ಇ-ಮೇಲ್​ ಮೂಲಕ ಸೂಕ್ತ ದಾಖಲೆಗಳೊಂದಿಗೆ ದೂರು ನೀಡಬಹುದಾಗಿದೆ.

Also Read : ಉಡುಪಿ : ಗ್ಯಾಸ್​ ಅಭಾವ.. ಸಂಕಷ್ಟದಲ್ಲಿ ಚಿನ್ನಾಭರಣ ತಯಾರಕರು..!

central government order hotel gas service charges relief to customers

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories