India Power Cut : ಮಧ್ಯ ಮಳೆಗಾಲದಲ್ಲಿ ದೇಶಕ್ಕೆ ಕಾದಿಗೆ ಕರೆಂಟ್ ಶಾಕ್ : CREA ವರದಿಯಲ್ಲಿ ಹೊರಬಿತ್ತು ಆತಂಕಕಾರಿ ಸಂಗತಿ

ನವದೆಹಲಿ : ಈಗಾಗಲೇ ಬೆಲೆ ಏರಿಕೆಯಿಂದ ನಲುಗಿ ಹೋಗ್ತಿರೋ ದೇಶವಾಸಿಗಳಿಗೆ ಮಧ್ಯ ಮಳೆಗಾಲದ ಹೊತ್ತಿಗೆ ಪವರ್ ಶಾಕ್ ( India Power Cut ) ಕೂಡ ಕಾದಿದೆ ಎನ್ನಲಾಗುತ್ತಿದೆ. ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದಲು ಸಂಗ್ರಹಿಸಿಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಭಾರತ ವಿದ್ಯುತ್ ಬಿಕ್ಕಟ್ಟು ಎದುರಿಸುವ ದಿನ‌ ದೂರವಿಲ್ಲ ಎಂದು ನೀರಿಕ್ಷಿಸಲಾಗುತ್ತಿದೆ. ಅಗತ್ಯ ಕಲ್ಲಿದ್ದಿಲಿನ ಸಂಗ್ರಹದಲ್ಲಿ ಕೊರತೆ ( Coal Shortage) ಉಂಟಾಗಿರೋದರಿಂದ ಮುಂಬರುವ ಜುಲೈ ಅಗಸ್ಟ್ ತಿಂಗಳಿನಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಉಂಟಾಗಬಹುದು ಎಂದು ಸೆಂಟರ್ ಫಾರ್ ರಿಸರ್ಚ್ ಆಂಡ್ ಎನರ್ಜಿ ಅಂಡ್ ಕ್ಲೀನ್ ಏರ್ಸ್ (CREA Report) ವರದಿ ಮಾಡಿದೆ.

ಸದ್ಯ ದೇಶದ ಪಿಟ್ ಹೆಡ್ ಪವರ್ ಸ್ಟೇಶನ್ ನಲ್ಲಿ 13.5 ದಶಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಾಗಿದೆ. ದೇಶದಾದ್ಯಂತ ಇರುವ ವಿದ್ಯುತ್ ಸ್ಥಾವರದಲ್ಲಿ 20.7 ದಶಲಕ್ಷ ಟನ್ ಕಲ್ಲಿದ್ದಲು ಸಂಗ್ರಹಿಸಲಾಗಿದೆ. ಇನ್ನೂ ಈಗ ಸಂಗ್ರಹಣೆಯಾಗಿರುವ ಕಲ್ಲಿದ್ದಲು ಜುಲೈ ಹಾಗೂ ಅಗಸ್ಟ್ ವರೆಗೂ ಮ್ಯಾನೇಜ್ ಮಾಡುವಂತಿದ್ದು ಬಳಿಕ ವಿದ್ಯುತ್ ಉತ್ಪಾದನೆ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗ್ತಿದೆ.

ಇಂಧನ ಕ್ಷೇತ್ರಗಳ ಸಾಧಕ ಬಾಧಕಗಳ ಬಗ್ಗೆ ಸಂಶೋಧನೆ ನಡೆಸುವ ಸ್ವತಂತ್ರ ಸಂಸ್ಥೆಯಾಗಿರುವ ಸಿಆರ್ ಇ ಎ ,ಇತ್ತೀಚಿನ ತನ್ನ ವರದಿಯಲ್ಲಿ ಈ ಮಹತ್ವದ ಸಂಗತಿಯನ್ನು ಪ್ರಸ್ತಾಪಿಸಿದೆ. ಬರುವ ದಿನಗಳಲ್ಲಿ ದೇಶದಲ್ಲಿ ವಿದ್ಯುತ್ ಕೊಂಚ ವಿದ್ಯುತ್ ಬೇಡಿಕೆ ಹೆಚ್ಚಿದರೂ ವಿದ್ಯುತ್ ಪೊರೈಸುವ ಸ್ಥಿತಿಯಲ್ಲಿ ಸ್ಥಾವರಗಳು ಇಲ್ಲ ಎಂಬ ಆತಂಕಕಾರಿ ಸಂಗತಿಯನ್ನು ಸಿಆರ್ ಇಎ ಹೇಳಿದೆ.

ಇನ್ನೂ ಇತ್ತೀಚಿಗೆ ದೇಶದಲ್ಲಿ ಕಂಡುಬಂದಿದ್ದ ವಿದ್ಯುತ್ ಉತ್ಪಾದನೆ ಸಮಸ್ಯೆಗೆ ಕಲ್ಲಿದ್ದಲು ಕಾರಣವಾಗಿರಲಿಲ್ಲ. ಬದಲಾಗಿ ಕಲ್ಲಿದ್ದಲಿನ ವಿತರಣೆ ಸೇರಿದಂತೆ ವಿವಿಧ ವಿಚಾರದಲ್ಲಿ ನಡೆದ ಆಡಳಿತಾತ್ಮಕ ನಿರ್ಲಕ್ಷ್ಯವೇ ಕಾರಣ ಎಂದು ವರದಿಯಲ್ಲಿ ಸಿಆರ್ ಇಎ ದೂರಿದೆ. ಇದಲ್ಲದೇ, ಮಧ್ಯ ಮಳೆಗಾಲದ ವೇಳೆ ತಲೆದೋರಬಹುದಾದ ವಿದ್ಯುತ್ ಸಮಸ್ಯೆಯನ್ನು ತಪ್ಪಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳುವ ಅಗತ್ಯವಿದೆ. ಮುಂಗಾರಿನ ಆರಂಭದಲ್ಲಿ ಕಲ್ಲಿದ್ದಲು ಸಾಗಾಣಿಕೆ ಕೂಡ ಕಷ್ಟ. ಹೀಗಾಗಿ‌ ಮಳೆಗಾಲದ ಆರಂಭಕ್ಕೂ ಮುನ್ನವೇ ಕಲ್ಲಿದ್ದಲು ಒದಗಿಸಲು ಕ್ರಮಕೈಗೊಳ್ಳಬೇಕೆಂಬ ಆಗ್ರಹವನ್ನು ಸಿಆರ್ಇಎ ತನ್ನ ವರದಿಯಲ್ಲಿ ಮಾಡಿದೆ.

ಹೀಗಾಗಿ ದೇಶದ ಉಷ್ಣ ವಿದ್ಯುತ್ ಸ್ಥಾವರದ ದಾಸ್ತಾನು ಖಾಲಿಯಾಗುವ ಮುನ್ನವೇ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೇ ದೇಶವೇ ಕತ್ತಲಲ್ಲಿ ಮುಳುಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Want to change photo on Aadhaar Card : ಆಧಾರ್ ಕಾರ್ಡ್‌ನಲ್ಲಿ ಫೋಟೋ ಬದಲಾಯಿಸಲು ಬಯಸುವಿರಾ?

ಇದನ್ನೂ ಓದಿ : raja – rani : ಮತ್ತೆ ಶುರುವಾಗ್ತಿದೆ ರಾಜಾ-ರಾಣಿ ರಿಯಾಲಿಟಿ ಶೋ: ಸ್ಪರ್ಧಿಗಳು ಯಾರು, ಈ ಸೀಸನ್​ನ ವಿಶೇಷತೆಯೇನು ಇಲ್ಲಿದೆ ಮಾಹಿತಿ

Coal Shortage India Power Cut in Rainy Season CREA Report

Comments are closed.