Debit Credit Card Rules : ರಿಸರ್ವ್ ಬ್ಯಾಂಕ್‌ನಿಂದ ಹೊಸ ನಿಯಮ; ಡೆಬಿಟ್, ಕ್ರೆಡಿಟ್ ಕಾರ್ಡ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಆನ್‌ಲೈನ್ ಪೇಮೆಂಟ್‌ಗೆ ಸಂಬಂಧಿಸಿದಂತೆ ಹೊಸ ಕ್ರೆಡಿಟ್ ಕಾರ್ಡ್ (Credit Card) ಮತ್ತು ಡೆಬಿಟ್ ಕಾರ್ಡ್‌ಗಳ (Debit Card) ಕುರಿತು ಆನ್‌ಲೈನ್ ಪಾವತಿಯನ್ನು (Online Payments) ಇನ್ನಷ್ಟು ಸುರಕ್ಷಿತಗೊಳಿಸಲು ವ್ಯಾಪಾರಿಗಳು ಮತ್ತು ಆನ್‌ಲೈನ್ ಪೇಮೆಂಟ್ ಗೇಟ್‌ವೇಗಳ ಬಳಿ ಪಾವತಿದಾರರ ಸೂಕ್ಷ್ಮ ಎನಿಸಿದ ದತ್ತಾಂಶಗಳನ್ನು ಅಳಿಸಿಹಾಕಲು ಸೂಚಿಸಿದೆ. 2022ರ ಜನವರಿ 1ರಿಂದ ಹೊಸ ನಿಯಮವೊಂದು (Debit Credit Card Rules) ಜಾರಿಯಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾಹಿತಿ ನೀಡಿದೆ.

ಈಗಾಗಲೇ ಹಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಈಕುರಿತು ಸಂದೇಶವನ್ನು ಕಳಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಆರಂಭಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2020ರಲ್ಲಿಯೇ ಹೊರಡಿಸಿದ ಮಾರ್ಗಸೂಚಿಯ ಪ್ರಕಾರ ವ್ಯಾಪಾರಿಗಳು  ತಮ್ಮ ಮೂಲಕ ವಹಿವಾಟು ನಡೆಸುವ ಗ್ರಾಹಕರ ಕಾರ್ಡ್‌ಗಳ ಮಾಹಿತಿಯನ್ನು ದತ್ತಾಂಶದ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುವಂತಿಲ್ಲ ಎಂದು ತಿಳಿಸಿತ್ತು. 2021 ಕಂಪನಿಗಳಿಗೆ ವರ್ಷಾಂತ್ಯದವರೆಗೆ ಹೊಸ ನಿಯಮಾವಳಿಗಳನ್ನು ಅನುಸರಿಸಲು ಅವಕಾಶ ನೀಡುತ್ತದೆ ಮತ್ತು ಟೋಕನೈಸ್ ಮಾಡುವ ಆಯ್ಕೆಯನ್ನು ಅವರಿಗೆ ನೀಡುತ್ತದೆ.  

ತನ್ನ ಹಳೆಯ ಮಾರ್ಗಸೂಚಿಯನ್ನು ಮತ್ತೊಮ್ಮೆ ಹೊಸದಾಗಿ ಪರಿಷ್ಕರಿಸಿ ಬಿಡುಗಡೆಗೊಳಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ  ಜನವರಿ 1, 2022 ರಿಂದ ತಮ್ಮ ಸಿಸ್ಟಮ್‌ಗಳಿಂದ ಉಳಿಸಿದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಡೇಟಾವನ್ನು ಶುದ್ಧೀಕರಿಸಲು ಆರ್‌ಬಿಐ ಭಾರತದ ಎಲ್ಲಾ ಕಂಪನಿಗಳಿಗೆ ಆದೇಶಿಸಿದೆ.

ಒಮ್ಮೆ ಗ್ರಾಹಕರು ಯಾವುದೇ ವ್ಯಾಪಾರಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಿ ವ್ಯವಹಾರ ಆರಂಭಿಸಿದ ನಂತರ ಟೋಕನೈಸೇಶನ್ ಎಂಬ ಈ ಪ್ರಕ್ರಿಯೆ ಆರಂಭವಾಗುತ್ತದೆ. ಟೋಕನೈಸೇಶನ್ ಪ್ರಕ್ರಿಯೆಯಲ್ಲಿ ಕಾರ್ಡ್‌ಗಾಗಿ ಗ್ರಾಹಕ ಅನುಮತಿಯನ್ನು  ಮೊದಲು ಕೇಳಲಾಗುತ್ತದೆ. ಒಮ್ಮೆ ಗ್ರಾಹಕರು ತಮ್ಮ ಒಪ್ಪಿಗೆಯನ್ನು ಕೊಟ್ಟ ನಂತರ ಕಾರ್ಡ್​ ನೆಟ್​ವರ್ಕ್​ ಮಾಡಿಸಲು ಟೋಕನೈಸೇಷನ್ ಮನವಿಯನ್ನು ವ್ಯಾಪಾರಿಗಳು ಬ್ಯಾಂಕ್‌ಗಳಿಗೆ ಕಳುಹಿಸುತ್ತಾರೆ. ಕಾರ್ಡ್​ ನೆಟ್​ವರ್ಕ್​ ಮುಂದಿನ ಹಂತದಲ್ಲಿ ಟೋಕನ್ ರೂಪಿಸುತ್ತದೆ. ಗ್ರಾಹಕರ 16- ಅಂಕಿಯ ಕಾರ್ಡ್‌ಆಗಿ ಕೆಲಸ ಮಾಡುತ್ತದೆ. ಮುಂದೆ ಯಾವುದೇ ಹಂತದಲ್ಲಿ ಗ್ರಾಹಕರು ವ್ಯವಹಾರ ಮಾಡಬಯಸುವಾಗ ಇದೇ ರೀತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: ನೀವು ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಸ್ತಿರಾ…? ಹಾಗಿದ್ದರೇ ನಿಮಗೂ ಕಾದಿದೆ ಅಪಾಯ…!

(Credit Card debit card rules for online payments from January 2022 Online Payments )

Comments are closed.