Digital Currency: ಭಾರತದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾದ ಡಿಜಿಟಲ್‌ ರೂಪಾಯಿ; ಇದರಿಂದಾಗುವ ಲಾಭವೇನು…

ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ಮಂಗಳವಾರದಿಂದ ಡಿಜಿಟಲ್ ಕರೆನ್ಸಿ (Digital Currency) ಯನ್ನು ಅಂದರೆ ಭಾರತೀಯ ರೂಪಾಯಿಯನ್ನು ಪ್ರಾರಂಭಿಸಿದೆ. ಸದ್ಯ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಇದಕ್ಕಾಗಿ, ರಿಸರ್ವ್ ಬ್ಯಾಂಕ್ ಪ್ರಾಯೋಗಿಕ ಯೋಜನೆಯಡಿಯಲ್ಲಿ ಒಂಬತ್ತು ಬ್ಯಾಂಕ್‌ಗಳಿಗೆ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಗೆ ನೀಡಿದೆ.

ಡಿಜಿಟಲ್ ರೂಪಾಯಿ ಮೂಲಕ, ನಗದು ಮೇಲಿನ ಜನರ ಅವಲಂಬನೆಯು ಇನ್ನು ಕಡಿಮೆಯಾಗುತ್ತದೆ. ಒಂದು ರೀತಿಯಲ್ಲಿ ಸಗಟು ವಹಿವಾಟಿಗೆ ಇದು ಉತ್ತಮ ಆಯ್ಕೆಯಾಗಬಹುದು. ಸದ್ಯ ಎಲ್ಲಾ ವಹಿವಾಟುಗಳು ಕರೆನ್ಸಿ, ರೂಪಾಯಿ, ಚೆಕ್ ಅಥವಾ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಆದರೆ ಡಿಜಿಟಲ್ ನೋಟುಗಳಲ್ಲಿ ಯಾವುದೇ ಹಾರ್ಡ್ ಕರೆನ್ಸಿ ಅಗತ್ಯವಿಲ್ಲ. ವ್ಯಾಲೆಟ್ ಟು ವ್ಯಾಲೆಟ್ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.

ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್ ಕರೆನ್ಸಿ ಹೇಗೆ ಭಿನ್ನವಾಗಿದೆ?
ಡಿಜಿಟಲ್‌ ಕರೆನ್ಸಿಯು ರೂಪಾಯಿಯಿಂದ ರೂಪಾಯಿ ವಹಿವಾಟಿನ ಮೇಲೆ ಆಧಾರಿತವಾಗಿದೆ. ಆದರೆ ಕ್ರಿಪ್ಟೋ ಕರೆನ್ಸಿಯು ಮಾರುಕಟ್ಟೆಯ ಏರಿಳಿತಗಳ ಮೇಲೂ ಅವಲಂಬಿತವಾಗಿದೆ. ಡಿಜಿಟಲ್‌ ಕರೆನ್ಸಿಯನ್ನು ಆರ್‌ಬಿಐ ಅಂದರೆ ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಕ್ರಿಪ್ಟೋ ಅವರಿಂದಲೇ ನಿಯಂತ್ರಿಸಲ್ಪಡುತ್ತದೆ. ಮತ್ತೊಂದೆಡೆ, ಕ್ರಿಪ್ಟೋ ಖಾಸಗಿ ಉದ್ಯಮವಾಗಿದೆ. ಇದರಿಂದಾಗಿ ಅದರಲ್ಲಿ ಸಾಕಷ್ಟು ಅಪಾಯವೂ ಇದೆ. ಇಲ್ಲಿ ಆರ್‌ಬಿಐ 9 ಬ್ಯಾಂಕ್‌ಗಳನ್ನು ಒಳಗೊಂಡಿದೆ. ಇದರಿಂದ ಹಣವು ಸುರಕ್ಷಿತವಾಗಿರುತ್ತದೆ.

ಕರೆನ್ಸಿ ನೋಟುಗಳ ಅವಧಿ ಮುಗಿಯುವುದೇ?
ಇಲ್ಲ, ಕರೆನ್ಸಿ ನೋಟುಗಳ ಬಳಕೆ ಮುಗಿಯುವುದಿಲ್ಲ. ಆದರೆ ಡಿಜಿಟಲ್‌ ಕರೆನ್ಸಿ ಅನುಕೂಲಕರವಾಗಿರುತ್ತದೆ. ಈಗ ನಿಮ್ಮ ನೋಟುಗಳು ಹರಿದರೆ ಅಥವಾ ಕಳ್ಳತನವಾದರೆ ಸಮಸ್ಯೆಯಾಗುತ್ತದೆ. ಆದರೆ ಡಿಜಿಟಲ್ ಕರೆನ್ಸಿಯಲ್ಲಿ ಈ ರೀತಿಯ ಸಮಸ್ಯೆಗಳಾಗುವುದಿಲ್ಲ. ಈಗ ಎರಡು ಲಕ್ಷ, ಐದು ಲಕ್ಷ ಗಳಂತಹ ದೊಡ್ಟ ಮೊತ್ತದ ನಗದು ಹಣ ವರ್ಗಾವಣೆ ಮಾಡುವುದು ಕಷ್ಟ. ಅದಕ್ಕೆ ಇದು ಪರ್ಯಾಯ ವ್ಯವಸ್ಥೆಯಾಗಬಲ್ಲದು.

Paytm, Google Pay, UPI ನಂತಹ ಇ-ವ್ಯಾಲೆಟ್‌ಗಳಿಗಿಂತ ಡಿಜಿಟಲ್‌ ಕರೆನ್ಸಿ ಹೇಗೆ ಭಿನ್ನವಾಗಿದೆ?
ಇ-ವ್ಯಾಲೆಟ್‌ನಲ್ಲಿ ಮಿತಿ ಇದೆ, ಆದರೆ ಇದರಲ್ಲಿ ದೊಡ್ಡ ಮೊತ್ತವನ್ನು ವರ್ಗಾಯಿಸಬಹುದಾಗಿದೆ. ಇದರಲ್ಲಿ ಭದ್ರತೆಯ ದೊಡ್ಡ ಕಾಳಜಿಯೂ ಇರುತ್ತದೆ. ಇದರ ವಿವರಗಳನ್ನು ಆರ್‌ಬಿಐ ಕೂಡ ಸ್ಪಷ್ಟಪಡಿಸಲಿದೆ.

ಇದು ಸಾಮಾನ್ಯ ಜನರಿಗೆ ಅಲ್ಲವೇ?
ಸದ್ಯ ಇ-ವ್ಯಾಲೆಟ್ ಹೋಲ್ ಸೇಲ್ ನಲ್ಲಿ ಕೆಲಸ ಮಾಡುತ್ತಿಲ್ಲ. ಅದಕ್ಕಾಗಿ ಈ ಯೋಜನೆಯನ್ನು ತರಲಾಗಿದೆ. ಮದುವೆಯ ಶಾಪಿಂಗ್‌ನಲ್ಲಿ ಆಗುವ ಭಾರಿ ಖರ್ಚು, ಮಾರುಕಟ್ಟೆಯ ಸಗಟಿನಲ್ಲಿ ಮಾಡುವ ಖರ್ಚು ಮುಂತಾದವುಗಳಿಗೆ ಇದು ಸುಲಭವಾಗುತ್ತದೆ.

ನೆಟ್ ಬ್ಯಾಂಕಿಂಗ್‌ಗಿಂತ ಭಿನ್ನವೇ?
ನೆಟ್ ಬ್ಯಾಂಕಿಂಗ್‌ನಲ್ಲಿ ಪಾವತಿ ಶುಲ್ಕವಿದೆ. ಇದರಲ್ಲಿ ಯಾವುದೇ ಶುಲ್ಕ ನೀಡುವ ಅವಶ್ಯಕತೆಯಿಲ್ಲ.

ಆರ್‌ಬಿಐ ಕೇವಲ 9 ಬ್ಯಾಂಕ್‌ಗಳನ್ನು ಮಾತ್ರ ಆಯ್ಕೆ ಮಾಡಿದ್ದೇಕೆ?
ಈ ಯೋಜನೆಗೆ RBI ಆಯ್ಕೆ ಮಾಡಿರುವ ಬ್ಯಾಂಕಿನ ಡಿಜಿಟಲ್ ಮೂಲಸೌಕರ್ಯವು ತುಂಬಾ ಪ್ರಬಲವಾಗಿದೆ. ಅಂದರೆ ಈ ಬ್ಯಾಂಕುಗಳ ಸೈಬರ್ ಭದ್ರತೆಯು ಪ್ರಬಲವಾಗಿದೆ.

ಇದನ್ನೂ ಓದಿ : Top Selling : ಹಬ್ಬಗಳ ಋತುವಿನಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರವಾಹನಗಳು ಯಾವುದು ಗೊತ್ತಾ?

ಇದನ್ನೂ ಓದಿ : WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್‌

(Digital Currency rbi launched digital rupay in India)

Comments are closed.