Hariyali Egg Curry : ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ

Hariyali Egg Curry : ಮೊಟ್ಟೆ ಶತಶತಮಾನಗಳಿಂದಲೂ ನಮ್ಮ ಆಹಾರದ ಭಾಗವಾಗಿದೆ. ಮೊಟ್ಟೆಗಳು ನಮ್ಮಲ್ಲಿ ಅನೇಕರಿಗೆ ಅಚ್ಚುಮೆಚ್ಚಿನ ಆಹಾರವಾಗಿದೆ. ಉಪಹಾರದ ನಂತರ , ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಹೆಚ್ಚಾಗಿ ಮೊಟ್ಟೆ ಪ್ರೀಯರು ಮೊಟ್ಟೆಯನ್ನು ಸೇವಿಸುತ್ತಾರೆ. ಅಂತಹ ಮೊಟ್ಟೆ ಪ್ರೀಯರಿಗೆ ಇಲ್ಲಿದೆ ಒಂದು ಅದ್ಭುತವಾದ ರೆಸಿಪಿ. ಹಿಂದೆ ನೀವು ಹರಿಯಾಲಿ ಚಿಕನ್, ಹರಿಯಾಲಿ ಮಟನ್ ರೆಸಿಪಿಗಳನ್ನು ನೋಡಿರುತ್ತೀರಿ ಹಾಗೂ ತಿಂದಿರುತ್ತೀರಿ.ಇಂದು ನಾವು ಅದೇ ರೀತಿಯಲ್ಲಿ ರುಚಿಕರವಾದ ಹರಿಯಾಲಿ ಎಗ್ ಕರಿ(Hariyali Egg Curry) ರೆಸಿಪಿಯನ್ನು ಹೇಗೆ ಮಾಡುವುದು ಎಂಬುದನ್ನು ನೋಡೋಣ. ಚಪಾತಿ, ಅನ್ನದೊಂದಿಗೆ ಇದರ ಕಾಂಬಿನೇಷನ್ ಪರ್ಫೆಕ್ಟ್ ಆಗಿದ್ದು, ಒಮ್ಮೆ ಇದರ ರುಚಿ ನೋಡಿದರೆ ಮತ್ತೆ ಮತ್ತೆ ಟ್ರೈ ಮಾಡುತ್ತೀರಿ.

ಹಾಗಿದ್ದರೆ ಹರಿಯಾಲಿ ಮೊಟ್ಟೆ ಕರಿ(Hariyali Egg Curry) ಯನ್ನು ಮಾಡುವ ವಿಧಾನವನ್ನು ತಿಳಿಯೋಣ

ಬೇಕಾಗುವ ಪದಾರ್ಥಗಳು:

ಬೇಯಿಸಿದ ಮೊಟ್ಟೆ – 4
ಅರ್ಧ ಟೀಸ್ಪೂನ್ ಅರಿಶಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು 1 ಕಪ್
ಶುಂಠಿ 1 ಇಂಚು
ಬೆಳ್ಳುಳ್ಳಿ 2
ಹಸಿರು ಮೆಣಸಿನಕಾಯಿ 2
ಹೆಚ್ಚಿದ ಈರುಳ್ಳಿ 1
ಹೆಚ್ಚಿದ ಟೊಮೆಟೊ 1
ಅರ್ಧ ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಗರಂ ಮಸಾಲೆ
ಎಣ್ಣೆ
ನೀರು (ಅಗತ್ಯವಿರುವಂತೆ)

ಇದನ್ನೂ ಓದಿ : Curd Chatney : ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ ಸೂಪರ್‌ ಮೊಸರು ಚಟ್ನಿ

ಇದನ್ನೂ ಓದಿ : Fizza Recipe : ಓವನ್‌ ಇಲ್ಲದೆ ಮನೆಯಲ್ಲೇ ಮಾಡಿ ರುಚಿಯಾದ ಪಿಜ್ಜಾ

ಮಾಡುವ ವಿಧಾನ:
ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ತೊಳೆದು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ ಶುಂಠಿ,ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ನುಣ್ಣಗೆ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ಬಿಸಿಯಾದ ನಂತರ, ಬೇಯಿಸಿದ ಮೊಟ್ಟೆಗಳನ್ನು ಹಾಕಿ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ. ಈಗ ಅದೇ ಎಣ್ಣೆಯಲ್ಲಿ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ ಬಳಿಕ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ.

ಇದನ್ನೂ ಓದಿ : Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ

ಮೊಟ್ಟೆಯಲ್ಲಿ ವಿಟಮಿನ್ ಎ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಲುಟೀನ್‌ನಲ್ಲಿ ಸಮೃದ್ಧವಾಗಿದೆ, ಇದು ಮೆದುಳು ಮತ್ತು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.ಹೆಚ್ಚಿನ ಪ್ರಮಾಣದ ಪ್ರೋಟೀನ್‌ನಿಂದಾಗಿ ಮೊಟ್ಟೆಗಳು ತೂಕ ಇಳಿಕೆಗೆ ಸಹಾಯಕವಾಗಿವೆ.

Hariyali Egg Curry : Eggs have been a part of our diet since centuries. Eggs are a favorite food for many of us. Most egg lovers eat eggs after breakfast, lunch or dinner. Here is a wonderful recipe for such egg lovers. In the past you have seen and eaten Hariyali Chicken, Hariyali Mutton recipes. Today we will see how to make the same delicious Hariyali Egg Curry recipe. Its combination with chapati and rice is perfect and once you taste it, you will try it again and again.

Comments are closed.