PM Awas Yojana : 2022-23ನೇ ಸಾಲಿನ ಪಿಎಂ ಆವಾಸ್ ಯೋಜನೆ ಬಗ್ಗೆ ನಿಮಗೆ ಗೊತ್ತಾ ? ಯೋಜನೆಯಲ್ಲಿ ಸಿಗುವ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ

ನವದೆಹಲಿ : ದೇಶದ ಜನರು ಕನಸಿನ ಮನೆಯೊಂದನ್ನು ನಿರ್ಮಿಸಿಲು ಸಹಾಯ ಮಾಡಲು ಕೇಂದ್ರ ಸರಕಾರ ಈಗಾಗಲೇ ಯೋಜನೆಯೊಂದು ಜಾರಿ ಆಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ (PM Awas Yojana) ಯಲ್ಲಿ ಸರಕಾರವು ಬಡ ಜನರಿಗೆ ಮನೆ ನಿರ್ಮಿಸಲು ಸಾಲದ ಮೇಲೆ ಸಬ್ಸಿಡಿ ನೀಡುತ್ತದೆ.

ಈ ಯೋಜನೆ ಅಡಿಯಲ್ಲಿ ಈಗಾಗಲೇ ಅನೇಕ ಬಾರಿ ಮನೆ ನಿರ್ಮಾಣವಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಸಾಲ ನೀಡಿದ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯು ನಿಮ್ಮಿಂದ ನಿಯಮಿತವಾಗಿ ಸಾಲದ ಕಂತನ್ನು ಸಂಗ್ರಹಿಸುತ್ತದೆ. ಅದರಂತೆ ಈ ಯೋಜನೆ ಅಡಿಯಲ್ಲಿ ಸಾಲ ಪಡೆದು ನಿರ್ಮಾಣ ಮಾಡಿದರೆ ಸರಕಾರದಿಂದ ಸಬ್ಸಿಡಿ ನೀಡುತ್ತದೆ. ನೀವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ 2022-23ರ ಪಿಎಂ ಆವಾಸ್‌ ಯೋಜನೆಯ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ಬಯಸಿದರೆ, ಪಟ್ಟಿಯನ್ನು ಪರಿಶೀಸುವ ಪ್ರಕ್ರಿಯೆ ಬಗ್ಗೆ ಕೆಲ ಮಾಹಿತಿ ಇಲ್ಲಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗಿದೆ.

2022-23ರ ಪಿಎಂ ಆವಾಸ್‌ ಯೋಜನೆಯ ಪಟ್ಟಿಯನ್ನು ಪರಿಶೀಲಿಸುವ ವಿಧಾನ :
ಪ್ರಧಾನಿಮಂತ್ರಿ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ನೀವು ಆನ್‌ಲೈನ್‌ನಲ್ಲಿ ಅಪ್ಲಿಕೇಶನ್‌ ಸ್ಥಿತಿಯನ್ನು ಪರಿಶೀಲಿಸವುದನ್ನು ತಿಳಿಯೋಣ.
1. ಮೊದಲನೆಯದಾಗಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
2. ಇಲ್ಲಿ “ಸಿಟಿಜನ್‌ ಅಸೆಸ್ಮೆಂಟ್‌” ಆಯ್ಕೆ ಲಭ್ಯವಿರುತ್ತದೆ. ಇದರ ಮೇಲೆ ಕ್ಲಿಕ್‌ ಮಾಡಬೇಕು.
3. ಹೊಸ ಪುಟವು ತೆರೆಯುತ್ತದೆ. ಅದರಲ್ಲಿ “ನಿಮ್ಮ ಮೌಲ್ಯಮಾಪನ ಸ್ಥಿತಿಯನ್ನು ಟ್ರ್ಯಾಕ್‌ ಮಾಡಿ” ಆಯ್ಕೆಯು ಲಭ್ಯವಿರುತ್ತದೆ. ಇದರ ಮೇಲೆ ಕ್ಲಿಕ್‌ ಮಾಡಬೇಕು.
4. ಇದರ ನಂತರ ರಾಜ್ಯ ಜಿಲ್ಲೆ ಮತ್ತು ನಗರ ವನ್ನು ಆಯ್ಕೆ ಮಾಡುವ ಮೂಲಕ ಸಲ್ಲಿಸಬೇಕು. ನಿಮ್ಮ ಅಪ್ಲಿಕೇಶನ್‌ ಸ್ಥಿತಿಯು ನಿಮ್ಮ ಪರದೆಯ ಮೇಲೆ ಇರುತ್ತದೆ.

2022-23ರ ಪಿಎಂ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

  • ಮೊದಲು ಅಧಿಕೃತ ವೆಬ್‌ಸೈಟ್‌ pmaymis.gov.in ಗೆ ಹೋಗಬೇಕು.
  • ವೆಬ್‌ಸೈಟ್‌ನ ಮೇಲ್ಭಾಗದಲ್ಲಿ ನೀವು “ನಾಗರಿಕರ ಮೌಲ್ಯಮಾಪನ” ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು.
  • ಇಲ್ಲಿ ನೀವು ಅನೇಕ ಆಯ್ಕೆಗಳನ್ನು ಪಡೆಯುತ್ತೀರಿ. ನಿಮ್ಮ ವಾಸ್ತವ್ಯ ಪ್ರಕಾರ ನೀವು ಆಯ್ಕೆಯನ್ನು ಆರಿಸಿಕೊಳ್ಳಬೇಕು.
  • ಇದರ ನಂತರ ಆನ್‌ಲೈನ್‌ ಫಾರ್ಮ್‌ ತೆರೆಯುತ್ತದೆ.
  • ಈ ನಮೂನೆಯಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಬೇಕು.
  • ಅರ್ಜಿಯನ್ನು ಭರ್ತಿ ಮಾಡಿದ ನಂತರ, ಸಂಪೂರ್ಣ ಮಾಹಿತಿಯನ್ನು ಮತ್ತೊಮ್ಮೆ ಓದಬೇಕು. ನಿಮಗೆ ಸರಿ ಎನಿಸಿದ್ದರೆ ಓಕೆ ಮಾಡಬೇಕು.
  • ಸಲ್ಲಿಸಿದ ನಂತರ ನಿಮ್ಮ ಪರದೆಯ ಮೇಲೆ ಅಪ್ಲಿಕೇಶನ್‌ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ. ಅದರ ಪ್ರಿಂಟ್‌ ಪ್ರತಿಯನ್ನು ಭವಿಷ್ಯಕ್ಕಾಗಿ ತೆಗೆದುಕೊಳ್ಳಬೇಕು.

ಇದನ್ನೂ ಓದಿ : Digital Rupee : ರಿಟೇಲ್‌ ಡಿಜಿಟಲ್‌ ರೂಪಾಯಿ ಇಂದಿನಿಂದ ಪ್ರಾರಂಭ; ಬೆಂಗಳೂರಿನಲ್ಲೂ ಲಭ್ಯ

ಇದನ್ನೂ ಓದಿ : LPG Price Down : ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ : ಕೇಂದ್ರ ಸರಕಾರದ ಹೊಸ ಸೂತ್ರ

ಇದನ್ನೂ ಓದಿ : Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

2022-23ರ ಪಿಎಂ ಆವಾಸ್‌ ಯೋಜನೆಯ ಅರ್ಹತೆ :
ಈಗಾಗಲೇ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿ ಯಾವುದೇ ಮನೆಯನ್ನು ಹೊಂದಿರಬಾರದು. ಮೂರು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಯಾವುದೇ ವ್ಯಕ್ತಿ ಈ ಯೋಜನೆಯ ಪ್ರಯೋಜನೆಯನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಈ ಯೋಜನೆ ಅಡಿಯಲ್ಲಿ 2.50 ಲಕ್ಷ ನೆರವು ನೀಡಲಾಗುತ್ತದೆ. ಇದರಲ್ಲಿ ಮೂರು ಕಂತುಗಳಲ್ಲಿ ಹಣ ನೀಡಲಾಗುತ್ತದೆ. ಈ ಯೋಜನೆ ಮೊದಲ ಕಂತಿನಲ್ಲಿ ರೂ. 50 ಸಾವಿರ. ಎರಡನೇ ಕಂತಿನಲ್ಲಿ ರೂ. 1.50 ಲಕ್ಷ ಹಾಗೆ ಕೊನೆಯ ಕಂತು ಮೂರನೆ ಕಂತಿನಲ್ಲಿ ರೂ. 50 ಸಾವಿರ ನೀಡಲಾಗುತ್ತದೆ. ರಾಜ್ಯ ಸರಕಾರ ಒಟ್ಟು 2.50ಲಕ್ಷ ರೂಪಾಯಿಗಳಲ್ಲಿ ಒಂದು ಲಕ್ಷ ಅನುದಾನ ನೀಡುತ್ತದೆ. ಇದೇ ವೇಳೆ ಕೇಂದ್ರ ಸರಕಾರದಿಂದ 1.50 ಲಕ್ಷ ಅನುದಾನ ನೀಡಲಾಗುತ್ತದೆ.

Do you know about PM Awas Yojana 2022-23? Here is the information about the subsidy available under the scheme

Comments are closed.