Kantara Rishabh Shetty: ಸಿದ್ದಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಕಾಂತಾರ ಹೀರೋ ರಿಷಬ್‌ ಶೆಟ್ಟಿ

(Kantara Rishabh Shetty) ಆಳಂದ ತಾಲೂಕಿನಲ್ಲಿರುವ ಜಿಡಗಾ ಸಿದ್ದರಾಮೇಶ್ವರ ಶಿವಯೋಗಿಗಳ ನವ ಕಲ್ಯಾಣ ಮಠದಲ್ಲಿ ನಿನ್ನೆ ಸಂಜೆ ನಡೆದ 38ನೆಯ ಗುರು ವಂದನಾ ಸಮಾರಂಭದಲ್ಲಿ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್‌ ಶೆಟ್ಟಿಇವರಿಗೆ ಸಿದ್ದಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜಿಡಗಾ, ಮುಗುಳಖೋಡದ ಮುರುಘರಾಜೇಂದ್ರ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ನಡೆದ ಸಮಾರಂಭದಲ್ಲಿ ರಿಷಬ್‌ ಶೆಟ್ಟಿ (Kantara Rishabh Shetty)ಯವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಣ, 2 ತೊಲೆ ಬಂಗಾರವನ್ನು ಒಳಗೊಂಡಿದೆ. ಡಾ. ಮುರುಘರಾಜೇಂದ್ರ ಸ್ವಾಮಿಗಳು, ದಾಸೋಹ ಪೀಠದ 9 ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಹಾರಕೂಡ ಶ್ರೀಗಳು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ರಿಷಬ್‌ ಶೆಟ್ಟಿಯವರಿಗೆ ಆಶಿರ್ವಾದ ಮಾಡಿದರು. ಅಲ್ಲದೆ ಗುರುವಂದನಾ ಕಾರ್ಯಕ್ರಮದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಿಯೋಜಿಸಲಾಗಿದ್ದು, ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಗೂ ಅನುರಾಧಾ ಭಟ್‌ ಅವರಿಂದ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು ಮೂಡಿ ಬಂದಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಚಪ್ಪಾಳೆಯ ಮೂಲಕ ಅವರ ಸಂಗೀತಕ್ಕೆ ಪ್ರಶಂಸೆ ನೀಡಿದರು.

ಗುರುವಂದನಾ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಅಪ್ಪು ಸ್ಮರಣೆ ಕೂಡ ನಡೆಯಿತು. ನೀನೆ ರಾಜಕುಮಾರ ಹಾಡನ್ನು ಹಾಡಿ ಅಪ್ಪುವನ್ನು ಸ್ಮರಿಸಿದ ಗಾಯಕರೊಂದಿಗೆ ಕಾರ್ಯಕ್ರಮದಲ್ಲಿ ಸೇರಿದ್ದ ಜನಸ್ತೋಮ ನೀನೆ ರಾಜಕುಮಾರ ಹಾಡಿಗೆ ಸಾಥ್‌ ನೀಡಿತು. ಇನ್ನೂ ಜನಪ್ರೀಯ ನಿರೂಪಕಿ ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ರಿಷಬ್‌ ಶೆಟ್ಟಿ “ಕಾಂತಾರ ಚಿತ್ರಕ್ಕೆ ಮಠದವತಿಯಿಂದ ಮೋದಲ ಪ್ರಶಸ್ತಿ ಪಡೆದುಕೊಂಡಿರುವುದು ನನ್ನ ಬದುಕಿನ ಸಾರ್ಥಕ ಕ್ಷಣ. ದೈವ ನರ್ತಕರ ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಅರ್ಪಣೆ ಮಾಡುತ್ತೇನೆ. ನನ್ನ ಬದುಕಿಗೆ ಪ್ರೇರಣೆಯಾದ, ಸ್ಪೂರ್ತಿ ನೀಡಿದ ಪುನೀತ್‌ ರಾಜ್‌ ಕುಮಾರವರಿಗೆ ಸಮರ್ಪಣೆ ಮಾಡಲು ಇಷ್ಟ ಪಡುತ್ತೇನೆ. ಪೂಜ್ಯ ಶ್ರೀಗಳಿಗೆ ನನ್ನ ಭಕ್ತಿಪೂರ್ವಕವಾಗದ ನಮನ.” ಎಂದರು.

ಇದನ್ನೂ ಓದಿ : Ayra Yash : ಐರಾ ಯಶ್‌ಗೆ 4ನೇ ವರ್ಷದ ಹುಟ್ಟುಹಬ್ಬ : ಐರಾಗೆ ಸ್ಪೆಷಲ್ ವಿಶ್ ಮಾಡಿದ ಅಮ್ಮ ರಾಧಿಕಾ ಪಂಡಿತ್

ಇದನ್ನೂ ಓದಿ : Sreeleela : 7 ತೆಲುಗು ಸಿನಿಮಾಕ್ಕೆ ಸಹಿ ಹಾಕಿದ ಭರಾಟೆ ಬೆಡಗಿ ಶ್ರೀಲೀಲಾ

ಡಾ. ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡುತ್ತ ಕಾಂತಾರ ಚಲನ ಚಿತ್ರವು ಇಡಿ ವಿಶ್ವಕ್ಕೆ ದೈವತ್ವದ ಶಕ್ತಿಯನ್ನು ಪರೀಚಯಿಸಿಕೊಟ್ಟಿದೆ. ಈ ವೇದಿಕೆಗೆ ರಿಷಬ್‌ ಶೆಟ್ಟಿ ಅವರನ್ನು ನಾವು ಆಹ್ವಾನ ಮಾಡಬೇಕಾದರೆ ಶ್ರೀಮಠದಲ್ಲಿ ಒಂದು ಪವಾಡ ನಡೆಯಿತು. ರಿಷಬ್‌ ಶೆಟ್ಟಿಗೆ ಆಹ್ವಾನಿಸುತ್ತಿದ್ದೇವೆಂದು ಸಂಕಲ್ಪಿಸಿ ಗುರುಗಳ ಗದ್ದುಗೆಯ ಮುಂದೆ ಪ್ರಾರ್ಥಿಸಿದಾಗ ಶ್ರೀಗಳವರ ಜಾಗೃತ ಗದ್ದುಗೆಯ ಬಲಭಾಗದಿಂದ ಹೂ ಉರಳಿತು ಎಂದರು. ತಮ್ಮ ಜೀವನದ ಇತಿಹಾಸದಲ್ಲಿ ನೋಡಿರುವ ಚಿತ್ರ ಯಾವುದಾದರೂ ಇದ್ದರೆ ಅದು ಕಾಂತಾರ ಎಂದು ಶ್ರೀಗಳು ರಿಷಬ್‌ ಶೆಟ್ಟಿಯವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿದರು.

(Kantara Rishabh Shetty) Kantara movie actor and director Rishabh Shetty was awarded the Siddhashree award at the 38th Guru Vandana ceremony held yesterday evening at Jidaga Siddarameshwar Shivayogi’s Nava Kalyana Math in Aland taluk.

Comments are closed.