Upcoming Smartphone in December 2022 : ಬಿ–ರೆಡಿ; ಈ ಸ್ಮಾರ್ಟ್‌ಫೋನ್‌ಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬಹುದು

ಕಳೆದ ತಿಂಗಳು ಸ್ಮಾರ್ಟ್‌ಫೋನ್‌ (Smartphone) ಗಳ ಬಂಪರ್ ಮಾರಾಟವಾಗಿತ್ತು. ಅದಕ್ಕೆ ಕಾರಣ ಆನ್‌ಲೈನ್‌ (Online) ಖರೀದಿಯಲ್ಲಿ ನೀಡಲಾದ ಹಬ್ಬದ ಕೊಡುಗೆಗಳಾಗಿದ್ದವು (Festival Offer). ಇದಾದ ನಂತರ ಮಾರಾಟದಲ್ಲಿ ಸಣ್ಣ ವಿರಾಮ ಕಂಡುಬಂದಿದೆ. ಈಗ ಡಿಸೆಂಬರ್‌ನಲ್ಲಿ ಕಂಪನಿಗಳು ಮತ್ತೆ ಧೂಳೆಬ್ಬಿಸುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಮತ್ತೆ ಸಿದ್ಧವಾಗಿವೆ. ಡಿಸೆಂಬರ್‌ನಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ (Upcoming Smartphone in December 2022) ನಿರೀಕ್ಷೆಯಿದೆ. ಅವುಗಳಲ್ಲಿ ಕೆಲವು ಪ್ರಮುಖವಾದವುಗಳ ಪಟ್ಟಿ ಇಲ್ಲಿದೆ.

ಶಿಯೋಮಿ:
ಶಿಯೋಮಿ ಕಂಪನಿಯು ಪ್ರಮುಖವಾದ ಶಿಯೋಮಿ 13 ಸರಣಿಯನ್ನು ಚೀನಾದಲ್ಲಿ ಪ್ರಾರಂಭಿಸಲಿದೆ ಎಂದು ಖಚಿತಪಡಿಸಿದೆ. ಇದರೊಂದಿಗೆ, ರೆಡ್ಮಿ ನೋಟ್‌ 12 ಶ್ರೇಣಿಯನ್ನು ಈ ವಾರ ಭಾರತದಲ್ಲಿ ಬಿಡುಗಡೆಮಾಡಲಿದೆ. ಡೈಮೆನ್ಸಿಟಿ 1080 ಚಿಪ್‌ಸೆಟ್‌ ಮತ್ತು 210 W ಫಾಸ್ಟ್‌ ಚಾರ್ಚಿಂಗ್‌ ಹೊಂದಿರಬಹುದೆಂಬ ನಿರೀಕ್ಷೆಯಿದೆ.

ಮೊಟೊ X40:
ಮೊಟೊರೋಲಾ ಕಂಪನಿಯು ಮೊಟೊ X40 ಕುರಿತು ಇನ್ನೂ ಯಾವುದೇ ಅಧಿಕೃತವಾಗಿ ಬಿಡುಗಡೆಯಾಗುವ ಪ್ರಕಟಣೆಯನ್ನು ಮಾಡಿಲ್ಲ. ಆದರೆ ಟೀಸರ್‌ನ ಪ್ರಕಾರ, ಮೊಟೊ X40 ಅನ್ನು ಮೊದಲು ಚೀನಾದಲ್ಲಿ ನಂತರ ಭಾರತದಲ್ಲಿ ಶೀಘ್ರದಲ್ಲೇ ನೋಡಬಹುದು.

ಒನ್‌ಪ್ಲಸ್‌ ನೊರ್ಡ್‌ 3:
ಒನ್‌ಪ್ಲಸ್‌ ನೊರ್ಡ್‌ 3 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನೊರ್ಡ್‌ 3, 150W ವೇಗದ ಚಾರ್ಜಿಂಗ್ ಬೆಂಬಲ ಮತ್ತು 120Hz AMOLED ಡಿಸ್ಪ್ಲೇ ಮತ್ತು ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್‌ನೊಂದಿಗೆ ಬರಬಹುದು. ನೊರ್ಡ್‌ 3 ಯು ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 ಚಿಪ್‌ಸೆಟ್‌ನಲ್ಲಿ ಕಾರ್ಯ ನಿರ್ವಹಿಸಬಹುದು.

ಒನ್‌ಪ್ಲಸ್‌ 11:
ಒನ್‌ಪ್ಲಸ್‌ ನ ಮುಂದಿನ ಫ್ಲ್ಯಾಗ್‌ಶಿಪ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಹ್ಯಾಂಡ್‌ಸೆಟ್ ತಯಾರಕರು ಒನ್‌ಪ್ಸ್‌ 11 ಅನ್ನು ಭಾರತವೂ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಪ್ರಾರಂಭಿಸುವ ಮೊದಲು ಚೀನಾದಲ್ಲಿ ಪರಿಚಯಿಸಬಹುದು. ಒನ್‌ಪ್ಲಸ್‌ 11 ಅನ್ನು ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಕನಿಷ್ಠ ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಬಣ್ಣಗಳಲ್ಲಿ ಮ್ಯಾಟ್ ಕಪ್ಪು ಮತ್ತು ಗ್ಲಾಸಿ ಹಸಿರು ಸೇರಿವೆ.

ಇನ್ಫಿನಿಕ್ಸ್‌ Hot 20:
ಇನ್ಫಿನಿಕ್ಸ್‌ ಇತ್ತೀಚೆಗೆ ಭಾರತದಲ್ಲಿ ಬಜೆಟ್ 5G ಸ್ಮಾರ್ಟ್‌ಫೋನ್ ಬಿಡುಗಡೆಮಾಡುವುದಾಗಿ ಖಚಿತಪಡಿಸಿತ್ತು. ಅದರಂತೆ ಇನ್ಫಿನಿಕ್ಸ್‌ Hot 20 ಅನ್ನು ಡಿಸೆಂಬರ್ 01 ರಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ವರದಿಯ ಪ್ರಕಾರ, ವೆನಿಲ್ಲಾ ಇನ್ಫಿನಿಕ್ಸ್ ಹಾಟ್‌ 20 5G ಯ ಬೆಲೆಯು ಭಾರತದಲ್ಲಿ 12,000 ರೂ. ಗಳು ಎಂದು ನಿಗದಿಪಡಿಸಿದೆ.

ಇದನ್ನೂ ಓದಿ :ASUS ROG Phone 6 Series : ಈಗ ಭಾರತದಲ್ಲೂ ಲಭ್ಯ ಆಸಸ್‌ ROG ಫೋನ್‌ 6 ಮತ್ತು ROG ಫೋನ್‌ 6 ಪ್ರೋ; ಬೆಲೆ ಮತ್ತು ವೈಶಿಷ್ಟ್ಯ

ಇದನ್ನೂ ಓದಿ : Smart footwear: ಮಹಿಳೆಯರ ಸಂರಕ್ಷಣೆಗಾಗಿ ಸ್ಮಾರ್ಟ್‌ ಚಪ್ಪಲಿ ಆವಿಷ್ಕರಿಸಿದ ಹತ್ತನೆ ತರಗತಿ ವಿದ್ಯಾರ್ಥಿನಿ

(Upcoming new Smartphones in December 2022. Details inside)

Comments are closed.