LPG Cylinder Subsidy : ಎಲ್​ಪಿಜಿ ಸಿಲಿಂಡರ್​ಗೆ ಸಿಗಲಿದೆ 200 ರೂ.ಸಬ್ಸಿಡಿ : ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

LPG Cylinder Subsidy : ಜನಸಾಮಾನ್ಯರಿಗೆ ಬಿಗ್​ ರಿಲೀಫ್​ ಎಂಬಂತೆ ಕಳೆದ ವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಎಲ್​ಪಿಜಿ ಸಬ್ಸಿಡಿ ಘೋಷಣೆ ಮಾಡಿದ್ದರು. ಇದು ನಿರಂತರವಾಗಿ ಏರುತ್ತಿರುವ ಹಣದುಬ್ಬರ ನಡುವೆ ಕೋಟಿಗಟ್ಟಲೇ ಭಾರತೀಯ ಕುಟುಂಬಗಳಿಗೆ ಗುಡ್​ ನ್ಯೂಸ್​ ನೀಡಿದಂತಾಗಿತ್ತು. ಕೇಂದ್ರದ ಈ ಯೋಜನೆಯು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಕುಟುಂಬಗಳಿಗೆ ಸಹಾಯ ಮಾಡುತ್ತದೆ.


ಮೇ 21ರಂದು ಸರಣಿ ಘೋಷಣೆಯನ್ನು ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಗ್ಯಾಸ್​ ಸಿಲಿಂಡರ್​​ಗೆ (12 ಸಿಲಿಂಡರ್​ಗಳವರೆಗೆ) 200 ರೂಪಾಯಿ ಸಬ್ಸಿಡಿಯನ್ನು ನೀಡುತ್ತೇವೆ. ಇದು ನಮ್ಮ ದೇಶದ ಎಲ್ಲಾ ತಾಯಂದಿರು ಹಾಗೂ ಸಹೋದರಿಯರಿಗೆ ನೆರವಾಗಲಿದೆ. ಇದು ವರ್ಷಕ್ಕೆ 6100 ಕೋಟಿ ರೂಪಾಯಿಗಳ ಆದಾಯದ ಪ್ರಭಾವವನ್ನು ಹೊಂದಿರುತ್ತದೆ ಎಂದು ಹೇಳಿದರು.


ಕೋವಿಡ್​ ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳಿಂದಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು 2020ರ ಜೂನ್​ನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ನಿರ್ಮಲಾ ಸೀತಾರಾಮನ್​ ಈ ಘೋಷಣೆ ಮಾಡಿದ ಬಳಿಕ ಶ್ರೀ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.


ಪ್ರಸ್ತುತ ಎಲ್​ಪಿಜಿ ಸಿಲಿಂಡರ್​ಗಳ ಬೆಲೆ ಎಷ್ಟು?
ಕಳೆದ ಕೆಲವು ತಿಂಗಳಿಂದ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆ ಏರಿಕೆ ಕಾಣುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ 1003 ರೂಪಾಯಿ ನಿಗದಿಯಾಗಿದೆ. ಇದೀಗ ಕೇಂದ್ರ ಘೋಷಣೆಯ ಬಳಿಕ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್​ ಖಾತೆಗೆ ಪ್ರತಿ ಸಿಲಿಂಡರ್​ಗೆ 200 ರೂಪಾಯಿ ಸಿಲಿಂಡರ್​ ಸಬ್ಸಿಡಿ ಸಿಗಲಿದೆ. ಈ ಸಬ್ಸಿಡಿಯ ಬಳಿಕ ಎಲ್​ಪಿಜಿ ಸಿಲಿಂಡರ್​ಗೆ 803 ರೂಪಾಯಿ ಆಗಲಿದೆ.

ಇದನ್ನು ಓದಿ : acid attack victim : ಆ್ಯಸಿಡ್​ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್​

ಇದನ್ನೂ ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

Eligibility For LPG Cylinder Subsidy Changes. Check New Rules Here

Comments are closed.