IPL Star ಅಪ್ಪಾ ಕ್ಷೌರಿಕ ಮಗ ಐಪಿಎಲ್ ಸ್ಟಾರ್!

ಭಾರತದ ಕ್ರಿಕೇಟ್ ಹಬ್ಬವಾದ ಐಪಿಎಲ್‌ನಲ್ಲಿ ಅದೇಷ್ಟೋ ಆಟಗಾರರು ತಮ್ಮ ಬಿರುಸಿನ ಆಟದ ಮೂಲಕ ಜನಮನಗೆದ್ದಿದ್ದಾರೆ. ಕ್ರಿಕೇಟ್ ಮೂಲಕವೆ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಇಂತಹ ಕ್ರಿಕೇಟ್ ಆಟಗಾರರು ತಮ್ಮ ಆಟದ ಜೊತೆ ಜೊತೆಗೆ ತಮ್ಮ ಕಷ್ಟಗಳ ಬಗ್ಗೆ ಹಾಗೂ ಯಶಸ್ಸನ್ನು ಗಳಸುವ ಮುನ್ನ ಎದುರಿಸಿದ ಸವಾಲುಗಳ ಬಗ್ಗೆಯು ತಿಳಿಸಿಕೊಟ್ಟಿದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಯುವ ಆಟಗಾರರು ಕ್ರಿಕೇಟ್ ಲೋಕದಲ್ಲಿ ಇಂದು ನೆಲೆ ಕಂಡುಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬಡತನದ ಮೂಲಕವೇ ಕ್ರಿಕೇಟ್ ಲೋಕಕ್ಕೆ ಆಗಮಿಸಿದ ಅದೇಷ್ಟೋ ಆಟಗಾರರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಆದರೂ ಛಲ ಬಿಡದೆ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ. ಇದೀಗ ಅಂಥಹವರ ಸಾಲಿಗೆ ಸೇರುವವರು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ವೇಗದ ಬೌಲರ್ ಕುಲ್ದೀಪ್ ಸೇನ್.


ಮಧ್ಯಪ್ರದೇಶದ ಹರಿಹರ ಮೂಲದ ಕುಲ್ದೀಪ್ ಅವರ ತಂದೆ ಒರ್ವ ಸಾಮಾನ್ಯ ಕ್ಷೌರಿಕ. ದಿನನಿತ್ಯದ ಖರ್ಚಿಗಷ್ಟೇ ಅವರ ಸಂಪಾದನೆಯಾಗಿರುತಿತ್ತು. ಹಾಗಾಗಿ ಕುಲ್ದೀಪ್‌ಗೆ ಬಡತನದ ಅರಿವಿತ್ತು. ಮಗ ಐಪಿಎಲ್‌ನಲ್ಲಿ ಮಿಂಚುತ್ತಿದ್ದರೂ ಈಗಲೂ ಕ್ಷೌರ ಮಾಡುತ್ತಿದ್ದಾರೆ. ಟಿವಿಯಲ್ಲೇ ಮಗನ ಆಟವನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.


೮ನೇ ವಯಸ್ಸಿಗೆ ಕ್ರಿಕೇಟ್ ಆಡಲು ಆರಂಭಿಸಿ ಪ್ರಸಿದ್ದ ಕ್ರಿಕೇಟಿಗನಾಗುವ ಕನಸಿನೊಂದಿಗೆ ಪರಿಶ್ರಮ ಪಟ್ಟ ಫಲವಾಗಿ ೨೦೧೮ರಲ್ಲಿ ಕುಲ್ದೀಪ್ ಮಧ್ಯಪ್ರದೇಶದ ರಣಜಿತಂಡಕ್ಕೆ ಆಯ್ಕೆಯಾದರು. ಗಂಟೆಗೆ ೧೪೦ ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಈತ ಪಂಜಾಬ್ ವಿರುದ್ದದ ಮೊದಲ ಪಂದ್ಯದಲ್ಲೆ ಐದು ವಿಕೆಟ್‌ಗಳನ್ನು ಬಾಚಿಕೊಂಡಿದ್ದರು. ತನ್ನ ಶರವೇಗದ ಬೌಲಿಂಗ್ ನಿಂದ ಎದುರಾಳಿಯನ್ನು ಸುಲಭವಾಗಿ ಬಗ್ಗು ಬಡಿಯುತ್ತಿದ್ದ ಕುಲ್ದೀಪ್ ಮೊದಲ ರಣಜಿ ಆವೃತ್ತಿಯ ಎಂಟು ಪಂದ್ಯಗಳಲ್ಲಿ ೨೫ ವಿಕೇಟ್‌ಗಳನ್ನು ಕಬಳಿಸಿದ್ದಾರೆ.


ಸತತ ಮೂರು ವರ್ಷಗಳ ಕಾಯುವಿಕೆಯ ನಂತರ ದೇಸಿ ಟೂರ್ನಿಗಳಲ್ಲಿ ಕುಲ್ದೀಪ್ ಆಟವನ್ನು ಕಂಡು ರಾಜಸ್ಥಾನ್ ರಾಯಲ್ಸ್ ತಂಡ ೨೦ ಲಕ್ಷ ರೂ.ಗಳಿಗೆ ಖರೀದಿಸಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಮೊದಲ ಪಂದ್ಯದಲ್ಲೆ ಕೊನೆಯ ಓವರ್‌ನಲ್ಲಿ ೧೫ ರನ್‌ಗಳ ಅವಶ್ಯಕತೆ ಇದ್ದಾಗ ಎದುರಾಳಿ ತಂಡವನ್ನು ತನ್ನ ರಣವೇಗದ ಬೌಲಿಂಗ್ ನಿಂದ ಕಟ್ಟಿ ಹಾಕಿದರು. ಇವರ ಬೌಲಿಂಗ್ ನಿಂದ ರಾಜಸ್ಥಾನ್ ರಾಯಲ್ಸ್ ಅಂದು ಗೆಲುವನ್ನು ಕಂಡಿತು. ಮಾಲಿಂಗ, ಸಂಗಕ್ಕಾರ, ಬೌಲ್ಟರ್, ಸಂಜು ಸಾಮ್ಸನ್ ರಂತಹ ಘಟಾನುಘಟಿ ಕ್ರಿಕೇಟಿಗರಿಂದ ಮೆಚ್ಚುಗೆ ಗಳಿಸಿಕೊಂಡರು.


ತನ್ನ ಶರವೇಗದ ಬೌಲಿಂಗ್ ಮೂಲಕವೇ ಐಪಿಎಲ್ ಅಂಗಳದಲ್ಲಿ ಚಾಪು ಮೂಡಿಸಿರುವ ಕುಲ್ದೀಪ್ ರಾಜಸ್ಥಾನ್ ರಾಯಲ್ಸ್ನ ಗೆಲುವಿನ ಸಾರಥಿಯಾಗಿ ಕ್ರಿಕೇಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಭವಿಷ್ಯದ ಶ್ರೇಷ್ಠ ಪ್ರತಿಭೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.


ಇದನ್ನೂ ಓದಿ: Facebook ಫೇಸ್‌ಬುಕ್ ಇನ್ನು ಔಟ್‌ಆಫ್ ಟ್ರೆಂಡ್ !


ಇದನ್ನೂ ಓದಿ: Cabinet Expansion : ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ Or ಪುನಾರಚನೆ : ಗ್ರೀನ್ ಸಿಗ್ನಲ್ ನಿರಾಕರಿಸಿದ BJP ಹೈಕಮಾಂಡ್

Father Runs Hair Salon, Son now IPL Star

Comments are closed.