FD In Post Office : ಪೋಸ್ಟ್‌ ಆಫೀಸ್‌ನಲ್ಲಿ FD ಮಾಡುವುದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತೇ?

ಪೋಸ್ಟ್‌ ಆಫೀಸ್‌ನಲ್ಲಿ ಹೂಡಿಕೆಯು(FD In Post Office) ಅತ್ಯಂತ ಲಾಭದಾಯಕ ಮತ್ತು ಸುರಕ್ಷಿತ ಹೂಡಿಕೆಯಾಗಿದೆ. ನೀವು ಹೂಡಿಕೆ ಮಾಡುವುದರಿಂದ ಹೆಚ್ಚು ಹಣ ಗಳಿಸಬೇಕೆಂದುಕೊಂಡಿದ್ದರೆ ನೀವು ಪೋಸ್ಟ್‌ ಆಫೀಸ್‌(Post Office) ನಲ್ಲಿ ಸ್ಥಿರ ಠೇವಣಿ ಖಾತೆಗಳಲ್ಲಿ ಹೂಡಿಕೆ ಮಾಡಬಹುದು. ನೀವು ಪೋಸ್ಟ್‌ ಆಫೀಸ್‌ನಲ್ಲಿ FD (ಸ್ಠಿರ ಠೇವಣಿ) ಹಾಕುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಇದು ನಿಮಗೆ ಉತ್ತಮ ಆದಾಯದ ಜೊತೆಗೆ ಸರ್ಕಾರದ ಗ್ಯಾರಂಟೀಯನ್ನು ನೀಡುತ್ತದೆ. ನೀವು ಇಟ್ಟ ಹಣಕ್ಕೆ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಪೋಸ್ಟ್‌ ಆಫೀಸ್‌ (Post Office Interest Rate 2022) ನೀಡುತ್ತದೆ.

ಪೋಸ್ಟ್‌ ಆಫೀಸ್‌ನಲ್ಲಿ FD ಹಾಕುವುದು ಬಹಳ ಸರಳವಾಗಿದೆ. ಇದರ ಮಾಹಿತಿಯು ಪೋಸ್ಟ್‌ ಆಫೀಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಮಾಹಿತಿಯ ಪ್ರಕಾರ, ನೀವು 1, 2, 3, ಅಥವಾ 5 ವರ್ಷಗಳ ಕಾಲ ಪೋಸ್ಟ್‌ ಆಫೀಸ್‌ನಿಂದ FD ನಿಂದ ಪಡೆಯಬಹುದಾಗಿದೆ. ಈ ಯೋಜನೆಯಡಿ ಲಭ್ಯವಿರುವ ಪ್ರಯೋಜನಗಳು ಹೀಗಿವೆ :

  • ಪೋಸ್ಟ್‌ ಆಫೀಸ್‌ನಲ್ಲಿ ಮಾಡಿದ FD ಗೆ ಭಾರತ ಸರ್ಕಾರವು ಗ್ಯಾರಂಟೀಯನ್ನು ನೀಡುತ್ತದೆ.
  • ಹೂಡಿಕೆದಾರರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎನ್ನಲಾಗಿದೆ.
  • FD ಗಳನ್ನು ಆಫ್‌ಲೈನ್‌ (ನಗದು, ಚೆಕ್‌) ಅಥವಾ ಆನ್‌ಲೈನ್‌ (ನೆಟ್‌ ಬ್ಯಾಂಕಿಂಗ್‌/ ಮೊಬೈಲ್‌ ಬ್ಯಾಂಕಿಂಗ್‌) ಅಲ್ಲಿಯೂ ಮಾಡಬಹುದಾಗಿದೆ.
  • ಒಂದು ವ್ಯಕ್ತಿ ಒಂದಕ್ಕಿಂತ ಹೆಚ್ಚು FD ಹೊಂದಬಹುದಾಗಿದೆ.
  • ಅದಲ್ಲದೇ FD ಖಾತೆಯನ್ನು ಜಂಟಿ ಖಾತೆ(joint Account)ಯಲ್ಲಿಯೂ ಮಾಡಬಹುದಾಗಿದೆ.
  • ನೀವು 5 ವರ್ಷಗಳ FD ಮಾಡಿದ್ದರೆ, ನೀವು ಆ ಅವಧಿಯಲ್ಲಿ ITR ಸಲ್ಲಿಸಿದಾಗ ನಿಮಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
  • FD ಅನ್ನು ಒಂದು ಪೋಸ್ಟ್‌ ಆಫೀಸ್‌ ನಿಂದ ಮತ್ತೊಂದು ಪೋಸ್ಟ ಆಫೀಸ್‌ಗೆ ಸುಲಭವಾಗು ವರ್ಗಾಯಿಸಬಹುದಾಗಿದೆ.
  • ನೀವು ಪೋಸ್ಟ್‌ ಆಫೀಸ್‌ನಲ್ಲಿ ನಗದು ಅಥವಾ ಚೆಕ್‌ ನೀಡುವುದರ ಮೂಲಕ ಖಾತೆ ತೆರಯಬಹುದು. ಕನಿಷ್ಟ 1000 ರೂಪಾಯಿಗಳ ಠೇವಣಿಯಿಂದ ಖಾತೆ ತೆರೆಯಬಹುದು.

FD ಮೇಲಿನ ಬಡ್ಡಿ ದರ :

– ಯೋಜನೆಯಡಿಯಲ್ಲಿ, 7 ದಿನದಿಂದ ಒಂದು ವರ್ಷದ FD ಗಳಿಗೆ 5.50 ಪ್ರತಿಶತ ಬಡ್ಡಿಯನ್ನು ನೀಡಲಾಗುತ್ತದೆ.
– ಒಂದು ದಿನದಿಂದ ಎರಡು ವರ್ಷಗಳ FD ಗಳಿಗೂ ಅದೇ ಬಡ್ಡಿ ದರ ನೀಡಲಾಗುವುದು.
– ಮೂರು ವರ್ಷಗಳ ಅವಧಿಯ FD ಗಳು ಸಹ 5.50 ಶೇಕಡಾ ಬಡ್ಡಿ ಗಳಿಸಬಹುದು.
–ಒಂದು ದಿನದಿಂದ 5 ವರ್ಷಗಳವರೆಗಿನ FD ಗಳಿಗೆ 6.70 ಪ್ರತಿಶತ ಬಡ್ಡಿ ಗಳಿಸಬಹುದು.

ಇದನ್ನೂ ಓದಿ : How to Download Aadhar Card: ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ಇದನ್ನೂ ಓದಿ : PAN Card Online Download: ಮೊಬೈಲಲ್ಲಿ ಪಾನ್ ಕಾರ್ಡ್ ಡೌನ್ಲೋಡ್ ಮಾಡಬಹುದು, ಹೇಗೆ ಎಂಬ ವಿವರ ಇಲ್ಲಿದೆ ನೋಡಿ

(FD In Post Office Know the interest and benefits)

Comments are closed.