summons to dk shivakumar : ಡಿ.ಕೆ ಶಿವಕುಮಾರ್​ಗೆ ಮತ್ತೊಂದು ಸಂಕಷ್ಟ : ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ನಿಂದ ನೋಟಿಸ್​

ಬೆಂಗಳೂರು :summons to dk shivakumar : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ಐದು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ ಬೆನ್ನಲ್ಲೇ ಇದೀಗ ದೆಹಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಡಿ.ಕೆಶಿವಕುಮಾರ್​ , ಸುನೀಲ್​ ಕುಮಾರ್​ ಶರ್ಮಾ, ಆಂಜನೇಯ ಹನುಮಂತಯ್ಯ, ಸಚಿನ್​ ನಾರಾಯಣ್​ ಹಾಗೂ ರಾಜೇಂದ್ರಗೆ ಸಮನ್ಸ್​ ಜಾರಿ ಮಾಡಿದೆ. ಐವರಿಗೂ ಜುಲೈ 1ರಂದು ಕೋರ್ಟ್​ಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಕೋರ್ಟ್​ನ ನ್ಯಾಯಮೂರ್ತಿ ವಿಕಾಸ್​ ದುಲ್​ ನೇತೃತ್ವದ ಪೀಠವು ಮೇ 28ರಂದು ವಿಚಾರಣೆ ನಡೆಸಿತ್ತು. ಇದಾದ ಬಳಿಕ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಅದರಂತೆ ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು ಬೇಸಿಗೆ ರಜೆ ಬಳಿಕ ಪ್ರಕರಣದ ವಿಸ್ತೃತ ವಿಚಾರಣೆ ನಡೆಸಬೇಕೆಂದು ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಐವರಿಗೆ ಸಮನ್ಸ್​ ಜಾರಿ ಮಾಡಿದೆ.


ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್​ ನಿವಾಸದ ಮೇಲೆ 2019ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 8 ಕೋಟಿ ರೂಪಾಯಿ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ಎಂಟ್ರಿ ನೀಡಿತ್ತು. ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್​ ಜೈಲಿನಲ್ಲಿದ್ದ ಡಿ.ಕೆ ಶಿವಕುಮಾರ್​​ ಸದ್ಯ ಜಾಮೀನಿನ ಮೂಲಕ ಹೊರಗಿದ್ದಾರೆ. ಇದೀಗ ಇದೇ ಪ್ರಕರಣದ ಮುಂದುವರಿದ ಭಾಗವಾಗಿ ಡಿ.ಕೆ ಶಿವಕುಮಾರ್​ ಮತ್ತವರ ಆಪ್ತರಿಗೆ ಸಮನ್ಸ್​ ನೀಡಲಾಗಿದೆ .

ಇದನ್ನು ಓದಿ : yenapoya collage at mangaluru : ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಯೂನಿಯರ್ಸ್ -ಸೀನಿಯರ್ಸ್ ಗಲಾಟೆ : 8 ಮಂದಿ ವಿದ್ಯಾರ್ಥಿಗಳ ಬಂಧನ

ಇದನ್ನೂ ಓದಿ : Glucose Mixed With Red Medicine : ರಕ್ತದ ಬದಲು ರೋಗಿಯ ದೇಹಕ್ಕೆ ಗ್ಲುಕೋಸ್​ ಹಾಕಿದ ಆಸ್ಪತ್ರೆ ಸಿಬ್ಬಂದಿ

delhi ed court given a summons to dk shivakumar in illegal money transfers case

Comments are closed.