Gold and silver prices down : ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿಯ ದರ ಇಳಿಕೆ

ಬೆಂಗಳೂರು : (Gold and silver prices down) ಕಳೆದ ಕೆಲ ದಿನಗಳಿಂದಲೂ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಅದರಲ್ಲೂ ಈ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಚಿನ್ನಾಭರಣ ಪ್ರಿಯರಿಗೆ ಇದು ಸುವರ್ಣಾವಕಾಶ ಆಗಿದೆ. ಸದ್ಯ ಮದುವೆ ಸಮಾರಂಭಗಳು ಕಡಿಮೆ ಆಗುತ್ತಿದ್ದಂತೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಾಣುತ್ತಿದೆ. ಮುಂದಿನ ಭವಿಷ್ಯಕ್ಕಾಗಿ ತಮ್ಮ ಆದಾಯ ಸ್ವಲ್ಪ ಭಾಗವನ್ನು ಚಿನ್ನದಲ್ಲಿ ಹೂಡಿಕೆ ಮಾಡುವವರಿಗೆ ಸಹಾಯವಾಗಲಿದೆ.

ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 55,000 ರೂ.ಆಗಿದೆ. 24 ಕ್ಯಾರೆಟ್‌ನ ಚಿನ್ನದ ಬೆಲೆ 60,000 ರೂ.ಆಗಿದೆ. ಇನ್ನು 100 ಗ್ರಾಮ್‌ ಬೆಳ್ಳಿ ಬೆಲೆ 7,400 ರೂ. ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 55,000 ರೂ. ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಂಗೆ 7,475 ರೂ.ಗಳಲ್ಲಿ ಲಭ್ಯವಿದೆ. ಸದ್ಯ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಮುಂದಿನ ದಿನಗಳಲ್ಲಿ ಏರಿಕೆ ಆಗುವ ಸಾಧ್ಯತೆ ಕೂಡ ಇರುತ್ತದೆ. ಇನ್ನುಳಿದಂತೆ ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿರುವ 22 ಕ್ಯಾರೆಟ್‌ ಚಿನ್ನದ ಬೆಲೆ (10 ಗ್ರಾಂ) ವಿವರ :

  • ಬೆಂಗಳೂರು : ರೂ. 55,000
  • ಚೆನ್ನೈ : ರೂ. 55,350
  • ಮುಂಬೈ : ರೂ. 55,000
  • ದೆಹಲಿ : ರೂ. 55,150
  • ಕೋಲ್ಕತ್ತಾ : ರೂ. 55,000
  • ಕೇರಳ : ರೂ. 55,000
  • ಅಹಮದಾಬಾದ್‌ : ರೂ. 55,000
  • ಜೈಪುರ : ರೂ. 55,150
  • ಲಕ್ನೋ : ರೂ. 55,150
  • ಭುವನೇಶ್ವರ್‌ : ರೂ. 55,000

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂ)‌ ವಿವರ :

  • ಬೆಂಗಳೂರು : ರೂ. 7,475
  • ಚೆನ್ನೈ : ರೂ. 7,860
  • ಮುಂಬೈ : ರೂ. 7,400
  • ದೆಹಲಿ : ರೂ. 7,400
  • ಕೋಲ್ಕತ್ತಾ : ರೂ. 7,400
  • ಕೇರಳ : ರೂ. 7,860
  • ಅಹ್ಮದಾಬಾದ್‌ : ರೂ. 7,400
  • ಜೈಪುರ : ರೂ. 7,400
  • ಲಕ್ನೋ : ರೂ. 7,400
  • ಭುವನೇಶ್ವರ್‌ : ರೂ.7,860

ಇದನ್ನೂ ಓದಿ : Balika Samriddhi Yojana : ಬಾಲಿಕಾ ಸಮೃದ್ಧಿ ಯೋಜನೆ : ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವಿನ ಶಿಕ್ಷಣಕ್ಕಾಗಿ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

ಇದನ್ನೂ ಓದಿ : PM Modi-Elon Musk meeting : ಪ್ರಧಾನಿ ಮೋದಿ-ಎಲೋನ್ ಮಸ್ಕ್ ಭೇಟಿ : ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಟೆಸ್ಲಾ ಕಾರ್‌

ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

Gold and silver prices down : Good news for jewelery lovers: Gold and silver prices have come down in the market

Comments are closed.