Gold price down : ಚಿನ್ನದ ಬೆಲೆಯಲ್ಲಿ 4000 ರೂ. ಇಳಿಕೆ : ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್‌

ನವದೆಹಲಿ : ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ದದಿಂದ ದುಬಾರಿಯಾಗಿದ್ದ ಬಂಗಾರ ಬೆಲೆಯಲ್ಲಿ (Gold price down) ಇದೀಗ ಇಳಿಕೆ ಕಾಣುತ್ತಿದೆ. ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆ ಪ್ರಗತಿ ನಡುವಲ್ಲೇ ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಕಳೆದ ವಾರಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರಿ ಚಿನ್ನದ ಬೆಲೆಯಲ್ಲಿ (Gold price) ಕೊಂಚ ಇಳಿಕೆ ಕಂಡಿದ್ದು, ಚಿನ್ನದ ಬೆಲೆ ಇತ್ತೀಚಿನ ಗರಿಷ್ಠ ಮಟ್ಟದಿಂದ 4000 ರೂ. ಇಳಿಕೆ ಕಂಡಂತಾಗಿದೆ.

Gold price down Rs 4000 from recent high. Check latest rate

ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್ ಅಥವಾ ಎಂಸಿಎಕ್ಸ್ ಚಿನ್ನದ ದರವು ಶುಕ್ರವಾರದಂದು 10 ಗ್ರಾಂಗೆ 310 ರೂ.ಗೆ ಇಳಿಕೆಯಾಗಿ 51,275 ರೂಪಾಯಿಯಲ್ಲಿ ಕೊನೆಗೊಂಡಿತ್ತು. ಚಿನ್ನದ ಬೆಲೆಯಲ್ಲಿ (Gold price) ಇತ್ತೀಚಿನ ದಿನಗಳಲ್ಲಿ ಗರಿಷ್ಠ 55,558 ರೂಪಾಯಿಗೆ ಏರಿಕೆಯಾಗಿದ್ದು, 10 ಗ್ರಾಂಗೆ ರೂ.4283 ಇಳಿಕೆಯಾಗಿದೆ. ಶುಕ್ರವಾರದಂದು ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ $ 12 ರಷ್ಟು ಕಡಿಮೆಯಾಗಿದೆ.

Gold price down Rs 4000 from recent high. Check latest rate

ಕಳೆದ 24 ಗಂಟೆಗಳಲ್ಲಿ ಭಾರತದ ವಿವಿಧ ಮೆಟ್ರೋ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ(Gold price) ಅಲ್ಪ ಪ್ರಮಾಣದ ಏರಿಳಿತ ಕಂಡುಬಂದಿದೆ. ಇಂದು ಚೆನ್ನೈನಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 53,440 ರೂ ಆಗಿದ್ದು, 22 ಕ್ಯಾರೆಟ್ (10 ಗ್ರಾಂ) 48,986 ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 52,470 ರೂ ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) ರೂ 48,100 ಆಗಿದೆ. ಕೋಲ್ಕತ್ತಾದಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 52,470 ರೂ ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) 48,100 ರೂ.ಗಳಿಗೆ ಇಳಿಕೆ ಕಂಡಿದೆ.

Gold price down Rs 4000 from recent high. Check latest rate
ಚಿನ್ನದ ದರ

ಮತ್ತೊಂದೆಡೆ, ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 51,470 ರೂ ಆಗಿದ್ದರೆ, 22 ಕ್ಯಾರೆಟ್ ಚಿನ್ನ (10 ಗ್ರಾಂ) 48,100 ರೂ. ಭುವನೇಶ್ವರದಲ್ಲಿರುವಂತೆ, 24 ಕ್ಯಾರೆಟ್ ಚಿನ್ನ (10 ಗ್ರಾಂ) 52,470 ರೂ., 22 ಕ್ಯಾರೆಟ್ ಚಿನ್ನ (10 ಗ್ರಾಂ) 48,100 ರೂಪಾಯಿ ಇದೆ.

ಇದನ್ನೂ ಓದಿ : ಯುಗಾದಿಗೆ ಎಲ್‌ಪಿಜಿ ಶಾಕ್‌ : ಸಿಲಿಂಡರ್ ಬೆಲೆಯಲ್ಲಿ 250 ರೂ. ಹೆಚ್ಚಳ

ಇದನ್ನೂ ಓದಿ : ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ : ಎಷ್ಟಿದೆ ಗೊತ್ತಾ ಇಂದಿನ ದರ

(Gold price down Rs 4000 from recent high. Check latest rate)

Comments are closed.