NIA First Report : ಶಿವಮೊಗ್ಗ ಹರ್ಷ ಕೊಲೆ ಪ್ರಕರಣ : ಕೋಮು ಗಲಭೆ ಸೃಷ್ಟಿಸುವ ಹುನ್ನಾರ : ಎನ್‌ಐಎ ವರದಿ

ಶಿವಮೊಗ್ಗ : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA First Report) ಕೈಗೆತ್ತಿಕೊಂಡಿದೆ. ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಬದಲಾಗಿ ಕೋಮು ಗಲಭೆಯನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿದೆ ಎನ್ನುವ ಅಂಶ ಇದೀಗ ಬಯಲಾಗಿದೆ. ಈ ಕುರಿತು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಈ ವಿವರ ಅಡಕವಾಗಿದೆ ಎಂದು ರಾಜ್ಯದ ಪ್ರತಿಷ್ಠಿತ ಸುದ್ದಿವಾಹಿನಿ ಟಿವಿ 9 ವರದಿ ಮಾಡಿದೆ.

NIA First Report Shivamogga bhajarangadal activist Harsha Murder case
ಶಿವಮೊಗ್ಗದಲ್ಲಿ ಕೊಲೆಯಾಗಿರುವ ಭಜರಂಗದಳ ಕಾರ್ಯಕರ್ತ ಹರ್ಷ

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು ಮಂದಿ ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು, ಜೈಲಿನಲ್ಲಿ ಇರಿಸಲಾಗಿದೆ. ಹರ್ಷ ಕೊಲೆಯ ಮೂಲಕ ಮಾರಕಾಸ್ತ್ರಗಳನ್ನು ಜಳಪಿಸಿ ಸಮಾಜದಲ್ಲಿ ಭಯ ಹುಟ್ಟಿಸುವುದು ಆರೋಪಿಗಳ ಉದ್ದೇಶವಾಗಿತ್ತು. ಅಲ್ಲದೇ ಆರೋಪಿಗಳಿಗೆ ಹಾಗೂ ಹರ್ಷ ನಡುವೆ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ. ಬದಲಾಗಿ ಯಾವುದೇ ಹಳೆಯ ಗಲಾಟೆಯ ವಿಚಾರಕ್ಕೆ ಕೂಡ ಈ ಕೊಲೆ ನಡೆದಿಲ್ಲ ಅನ್ನೋದು ಬಯಲಾಗಿದೆ.

NIA First Report Shivamogga bhajarangadal activist Harsha Murder case

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸಂಚಲನವನ್ನು ಉಂಟು ಮಾಡಿತ್ತು. ಹರ್ಷ ಕೊಲೆಯ ನಂತರ ನಡೆದ ಗಲಾಟೆಗಳು ನಡೆದಿತ್ತು. ಈ ವೇಳೆಯಲ್ಲಿ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂಬ ಕೂಗು ಕೇಳಿಬಂದಿತ್ತು. ಹೀಗಾಗಿಯೇ ಸರಕಾರ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದೆ. ಈಗಾಗಲೇ ರಾಷ್ಟ್ರೀತ ತನಿಖಾ ದಳ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಆರಂಭಿಸಿದೆ.

NIA First Report Shivamogga bhajarangadal activist Harsha Murder case

ಎನ್‌ಐಎಗೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮೂಲಕ ಹಸ್ತಾಂತರ ಮಾಡಲು ಶಿವಮೊಗ್ಗ ಪೊಲೀಸರು ಮುಂದಾಗಿದ್ದಾರೆ ಎಂದು ಶಿವಮೊಗ್ಗ ಎಸ್‌ಪಿ ಲಕ್ಷ್ಮೀ ಪ್ರಸಾದ್‌ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್‌ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.

ಇದನ್ನೂ ಓದಿ : ಹರ್ಷ ನಿವಾಸಕ್ಕೆ ಭೇಟಿ ನೀಡಿ 25 ಲಕ್ಷ ರೂ. ನೀಡಿದ ಯಡಿಯೂರಪ್ಪ

ಇದನ್ನೂ ಓದಿ : ಶಿವಮೊಗ್ಗದ ಹಿಂದೂ ಹರ್ಷ ಕೊಲೆ ಪ್ರಕರಣ : NIA ತನಿಖೆ

(NIA First Report Shivamogga bhajarangadal activist Harsha Murder case)

Comments are closed.