ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ : ಆಭರಣ ಪ್ರಿಯರೇ! ಚಿನ್ನ ಖರೀದಿಸಲು ಇದೇ ಸೂಕ್ತ ಸಮಯ

Gold Prices: ಗಗನಕ್ಕೇರಿದ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ವ್ಯತ್ಯಾಸ ಕಂಡಿದೆ. ಚಿನ್ನದ ಬೆಲೆಯ ಮಿಂಚಿನ ವೇಗದ ಏರಿಕೆಗೆ ಕೊಂಚ ಬ್ರೇಕ್​ ಬಿದ್ದಿದೆ. 24 ಕ್ಯಾರೆಟ್​ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,202 ರೂಪಾಯಿ ಆಗಿದೆ.

ಗುರುವಾರಕ್ಕೆ ಹೋಲಿಕೆ ಮಾಡಿದರೆ ಚಿನ್ನ ಬೆಲೆಯಲ್ಲಿ 55 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಇಳಿಕೆ ಕಂಡಿದ್ದು 1,22,020 ರೂಪಾಯಿ ಆಗಿದೆ.

ಇನ್ನು ಆಭರಣ ತಯಾರಿಕೆಗೆ ಬಳಕೆ ಮಾಡುವ 22 ಕ್ಯಾರಟ್​ ಚಿನ್ನ ಬೆಲೆ 1 ಗ್ರಾಂಗೆ 11585 ರೂಪಾಯಿಯಾಗಿದ್ದು 50 ರೂಪಾಯಿ ಇಳಿಕೆ ಕಂಡಿದೆ.

10 ಗ್ರಾಂ ಚಿನ್ನದ ಬೆಲೆಯಲ್ಲಿ 500 ಇಳಿಕೆ ಕಂಡಿದ್ದು 1,11,850 ರೂಪಾಯಿ ಆಗಿದೆ . ಚಿನ್ನಾಭರಣ ಖರೀದಿಗೆ ಇದು ಸರಿಯಾದ ಸಮಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಬೆಳ್ಳಿಯ ದರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಒಂದು ಗ್ರಾಂಗೆ 152.50 ರೂ ಆಗಿದ್ದು ಕೆಜಿಗೆ 1,52,500 ರೂ ಆಗಿದೆ. ಡಾಲರ್​ ಸೂಚ್ಯಂಕದಲ್ಲಿ ಉಂಟಾಗಿರುವ ವ್ಯತ್ಯಾಸದಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ.

ಇದನ್ನೂ ಓದಿ: Money To Mothers: ತಾಯಂದಿರ ಕೈಗೆ ಹಣ: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ವಿವರ ಇಲ್ಲಿದೆ

ಡಾಲರ್ ದುರ್ಬಲಗೊಂಡಾಗ, ವಿದೇಶಿ ಕರೆನ್ಸಿಗಳಲ್ಲಿ ಚಿನ್ನ ಅಗ್ಗವಾಗುತ್ತದೆ. ಇದರಿಂದ ಬೇಡಿಕೆ ಹೆಚ್ಚುತ್ತದೆ. ಒಂದೇ ಸಮನೆ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಕಂಡು ಮಧ್ಯಮ ವರ್ಗದ ಜನತೆ ಇನ್ನು ಚಿನ್ನ ಖರೀದಿ ಮಾಡುವುದು ಹೇಗಪ್ಪಾ ಎಂದು ಯೋಚಿಸಿದ್ದರು.

ಆದರೆ, ಇದೀಗ ಚಿನ್ನ ಇಳಿಮುಖದ ದಾರಿಯನ್ನು ಕಂಡಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Central Government Scheme: ಮನೆ ಕಟ್ಟಲು ಸಿಗುತ್ತೆ 25 ಲಕ್ಷ! ಜಸ್ಟ್ ಹೀಗೆ ಅಪ್ಪೆ ಮಾಡಿ

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories