chicken rate increased : ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಗಗನಕ್ಕೇರುತ್ತಿದೆ ಕೋಳಿ ಮಾಂಸದ ದರ

chicken rate increased : ಅಗತ್ಯ ವಸ್ತುಗಳ ದರವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಅಡುಗೆ ಎಣ್ಣೆ, ಗೋಧಿ, ಅಕ್ಕಿ ಹೀಗೆ ದಿನಸಿ ವಸ್ತುಗಳ ಬೆಲೆ ಏರಿಕೆ ಒಂದೆಡೆಯಾದರೆ ಮತ್ತೊಂದೆಡೆ ವಿದ್ಯುತ್​ ದರ ಏರಿಕೆ ಕೂಡ ಜೀವ ಹಿಂಡುತಿದೆ. ಇವೆಲ್ಲದರ ಜೊತೆ ಪೆಟ್ರೋಲ್​ – ಡೀಸೆಲ್​ ದರ ಗಗನಕ್ಕೇರಿದೆ. ಇವೆಲ್ಲವೂ ಸಾಲದು ಎಂಬಂತೆ ಎಲ್​ಪಿಜಿ ಸಿಲಿಂಡರ್​ಗಳ ದರವು 1000 ರೂಪಾಯಿ ಗಡಿ ದಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಮಾಂಸ ಪ್ರಿಯರಿಗೆ ಮತ್ತೊಂದು ಶಾಕ್​ ಎದುರಾಗಿದೆ.


ಕೊರೊನಾ ಸೋಂಕು ಬಂದ ಬಳಿಕ ಸಾಕಷ್ಟು ಮದುವೆ ಸೇರಿದಂತೆ ವಿವಿಧ ಕಾರ್ಯಗಳು ಮುಂದೂಡಿಕೆಯಾಗಿದ್ದವು. ಆದರೆ ಇದೀಗ ಸಾಲು ಸಾಲು ಸಮಾರಂಭಗಳು ನಡೆಯುತ್ತಿದೆ. ಹೀಗಾಗಿ ಚಿಕನ್​ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ನೆರೆಯ ತೆಲಂಗಾಣ ಹಾಗೂ ಆಂಧ್ರ ಪ್ರದೇಶಗಳಲ್ಲಿ ಒಂದು ಕೆಜಿ ಚಿಕನ್​ ದರವು ಬರೋಬ್ಬರಿ 300 ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಈ ಬೆಲೆಯು ಇನ್ನಷ್ಟು ಹೆಚ್ಚಲಿದೆ ಎಂದು ಚಿಕನ್​ ಸೆಂಟರ್​ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಸ್ಕಿನ್​ ಲೆಸ್​ ಚಿಕನ್​ ಮಾಂಸದ ದರವು ಪ್ರತಿ ಕೆಜಿಗೆ 300 ರೂಪಾಯಿ ಆಗಿದ್ದರೆ ಸ್ಕಿನ್​ ಇರುವ ಕೋಳಿ ಮಾಂಸದ ದರವು ಪ್ರತಿ ಕೆಜಿಗೆ 280 ರೂಪಾಯಿ ಆಗಿದೆ. ನೆರೆಯ ರಾಜ್ಯಗಳಲ್ಲಿ ಕೋಳಿ ಮಾಂಸದ ಬೆಲೆಯಲ್ಲಿ ಆಗಿರುವ ಗಣನೀಯ ಏರಿಕೆಯು ಕರ್ನಾಟಕದ ಮೇಲೆಯೂ ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ಇನ್ನು ಇವುಗಳನ್ನು ಹೊರತುಪಡಿಸಿ ಬೇಸಿಗೆ ತಿಂಗಳಲ್ಲಿ ಅತಿಯಾದ ಧಗೆಯಿಂದಾಗಿ ಕೋಳಿಗಳ ಉತ್ಪಾದನೆಯು ಕುಂಠಿತಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಅಡಿಯಲ್ಲಿ ಬರುವ ಕೋಳಿ ಫಾರಂಗಳಲ್ಲಿ ಬೇಕಂತಲೇ ಕೋಳಿ ಉತ್ಪಾದನೆಗಳನ್ನು ತಗ್ಗಿಸಿ ಬೇಡಿಕೆಯನ್ನು ಹೆಚ್ಚಿಸುವುದರ ಮೂಲಕ ಶ್ರೀಸಾಮಾನ್ಯನ ಜೇಬಿಗೆ ಬರೆ ಎಳೆಯುವಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಇದನ್ನು ಓದಿ : Cabinet expansion : ಸಚಿವ ಸಂಪುಟ ವಿಸ್ತರಣೆಗೆ ಮುಗಿಯದ ಕಂಟಕ : ಈಗ ಬಿಬಿಎಂಪಿ ಎಲೆಕ್ಷನ್ ಅಡ್ಡಿ

ಇದನ್ನೂ ಓದಿ : School Reopen : ಮೇ 16 ರಿಂದ ಶಾಲೆಗಳು ಆರಂಭವಾಗುತ್ತಾ ? ಖಾಸಗಿ ಒತ್ತಡಕ್ಕೆ ಮಣಿಯುತ್ತಾ ಸರಕಾರ

chicken rate increased in telangana hyderabad

Comments are closed.