Elon Musk : ಡೊನಾಲ್ಡ್​​ ಟ್ರಂಪ್​ ನಿಷೇಧಿತ ಟ್ವಿಟರ್​ ಖಾತೆಗೆ ಮರುಜೀವ ಕೊಡುತ್ತೇನೆಂದ ಎಲಾನ್​ ಮಸ್ಕ್​

Elon Musk : ಸಾಮಾಜಿಕ ಜಾಲತಾಣದ ದೈತ್ಯ ವೇದಿಕೆ ಟ್ವಿಟರ್​ ಖರೀದಿ ಪ್ರಕ್ರಿಯೆಯನ್ನು ನಡೆಸುತ್ತಿರುವ ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಟ್ವಿಟರ್ ಖಾತೆಯ ಮೇಲೆ ವಿಧಿಸಲಾಗಿರುವ ಶಾಶ್ವತ ನಿಷೇಧದಿಂದ ಮುಕ್ತಿ ನೀಡುವುದಾಗಿ ಹೇಳಿದ್ದಾರೆ. ಎಲಾನ್​ ಮಸ್ಕ್​ ಟ್ವಿಟರ್​ ಖರೀದಿಗೆ ಆಸಕ್ತಿ ತೋರಿದ ಆರಂಭದ ದಿನಗಳಲ್ಲಿಯೇ ಟ್ವಿಟರ್​ ಎಲಾನ್​ ಮಸ್ಕ್​ ತೆಕ್ಕೆಗೆ ಬಿದ್ದರೆ ಡೊನಾಲ್ಡ್​ ಟ್ರಂಪ್​ಗೆ ಟ್ವಿಟರ್​ ಬ್ಯಾನ್​ನಿಂದ ಮುಕ್ತಿ ಸಿಗಬಹುದು ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಅದರಂತೆ ಇದೀಗ ಎಲಾನ್​ ಮಸ್ಕ್​ ಡೊನಾಲ್ಡ್​ ಟ್ರಂಪ್​ ಟ್ವಿಟರ್ ಖಾತೆಗೆ ಮರು ಜೀವ ನೀಡುವ ಮಾತುಗಳನ್ನಾಡಿದ್ದಾರೆ.


ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್ ಟ್ವಿಟರ್ ಅನ್ನು $44 ಮಿಲಿಯನ್ (€41 ಮಿಲಿಯನ್) ಗೆ ಖರೀದಿಸಲು ಮುಂದಾಗಿದ್ದಾರೆ, ಆದರೆ ಒಪ್ಪಂದವು ಇನ್ನೂ ಷೇರುದಾರರು ಮತ್ತು ಹಣಕಾಸು ನಿಯಂತ್ರಕರ ಬೆಂಬಲವನ್ನು ಪಡೆಯಬೇಕಾಗಿದೆ.


ಫೈನಾನ್ಶಿಯಲ್ ಟೈಮ್ಸ್ ಆಯೋಜಿಸಿದ್ದ ಫ್ಯೂಚರ್ ಆಫ್ ದಿ ಕಾರ್ ಶೃಂಗಸಭೆಯ ಸಂದರ್ಭದಲ್ಲಿ, ಮಸ್ಕ್ ನಿಷೇಧವನ್ನು “ನೈತಿಕವಾಗಿ ಕೆಟ್ಟ ನಿರ್ಧಾರ” ಮತ್ತು “ತೀವ್ರವಾಗಿ ಮೂರ್ಖತನ” ಎಂದು ಜರಿದಿದ್ದಾರೆ .
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ರ ಟ್ವಿಟರ್​ ಖಾತೆಯ ಮೇಲೆ ಶಾಶ್ವತ ನಿಷೇಧವನ್ನು ಹೇರಿರುವ ನಿರ್ಧಾರವನ್ನು ನಾನು ತಪ್ಪು ಎಂದು ಭಾವಿಸಿದ್ದೇನೆ. ಡೊನಾಲ್ಡ್​ ಟ್ರಂಪ್​ ಟ್ವಿಟರ್​ನಲ್ಲಿ 80 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ. ಶಾಶ್ವತ ನಿಷೇಧದಿಂದಾಗಿ ದೇಶದ ಬಹುಪಾಲು ಭಾಗವನ್ನು ದೂರವಿಟ್ಟಂತಾಗಿದೆ. ಇದೊಂದು ಚರ್ಚೆ ನಡೆಸುವ ವೇದಿಕೆ.ಹೀಗಾಗಿ ಟ್ರಂಪ್​ ಖಾತೆ ಮೇಲಿನ ಶಾಶ್ವತ ನಿರ್ಬಂಧವನ್ನು ನಾನು ಹಿಂಪಡೆಯುತ್ತೇನೆ ಎಂದು ಹೇಳಿದರು.

2021 ರ ಜನವರಿಯಲ್ಲಿ ಅಮೆರಿಕದ ಕ್ಯಾಪಿಟಲ್‌ನಲ್ಲಿ ನಡೆದ ಗಲಭೆಯ ನಂತರ ಟ್ವಿಟರ್​ನಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಶಾಶ್ವತ ನಿರ್ಬಂಧ ಹೇರಲಾಗಿತ್ತು. ಟ್ರಂಪ್​ ಬೆಂಬಲಿಗರು 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಪ್ರಮಾಣೀಕರಿಸುವುದನ್ನು ತಡೆಯಲು ಕೊನೆಯ ಪ್ರಯತ್ನ ಎಂಬಂತೆ ಕಟ್ಟಡದ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದ್ದರು.

ಇದನ್ನು ಓದಿ : woman kills 4-year-old girl : ಕಾಲ್ಗೆಜ್ಜೆ ಕದ್ದಳೆಂದು ನೆರೆಮನೆಯ ಬಾಲಕಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಪಾಪಿ ಮಹಿಳೆ

ಇದನ್ನೂ ಓದಿ : Gold Silver Prices Today : ಚಿನ್ನಾಭರಣ ಪ್ರಿಯರಿಗೆ ಬಿಗ್​ ರಿಲೀಫ್​ : ಚಿನ್ನ, ಬೆಳ್ಳಿ ದರಗಳಲ್ಲಿ ಇಳಿಕೆ

Elon Musk Pledges to Reverse Donald Trump’s Permanent Twitter Ban

Comments are closed.