ದಿನಭವಿಷ್ಯ 01 ಡಿಸೆಂಬರ್ 2023 : ಪುನರ್ವಸು ನಕ್ಷತ್ರದ ಪ್ರಭಾವ 3 ರಾಶಿಗಳಿಗೆ ಬಾರೀ ಅದೃಷ್ಟ

Horoscope Today : ದಿನಭವಿಷ್ಯ 01 ಡಿಸೆಂಬರ್ 2023 ಶುಕ್ರವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಶುಕ್ಲ ಯೋಗದಿಂದ ಮೇಷರಾಶಿ, ಮಿಥುನರಾಶಿ ಮತ್ತು ಕರ್ಕಾಟಕ ರಾಶಿಯವರು ವಿಶೇಷ ಫಲಿತಾಂಶವನ್ನು ಪಡೆಯುತ್ತಾರೆ.

Horoscope Today : ದಿನಭವಿಷ್ಯ 01 ಡಿಸೆಂಬರ್ 2023 ಶುಕ್ರವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಶುಕ್ಲ ಯೋಗದಿಂದ ಮೇಷರಾಶಿ, ಮಿಥುನರಾಶಿ ಮತ್ತು ಕರ್ಕಾಟಕ ರಾಶಿಯವರು ವಿಶೇಷ ಫಲಿತಾಂಶವನ್ನು ಪಡೆಯುತ್ತಾರೆ. ಮೇಷ ರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಉದ್ಯೋಗದ ವಿಚಾರದಲ್ಲಿ ಜಾಗರೂಕರಾಗಿ ಇರಬೇಕು. ಕೆಲಸ ಕಾರ್ಯಗಳನ್ನು ಬಹಳ ಕಾಳಜಿಯಿಂದ ಮಾಡಿ. ಇಂದು ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ, ಅದು ಸುಲಭವಾಗಿ ದೊರೆಯುತ್ತದೆ. ಕುಟುಂಬ ಸದಸ್ಯರ ಜೊತೆಗೆ ಇಂದು ಸಮಯವನ್ನು ಕಳೆಯುವಿರಿ.

ವೃಷಭ ರಾಶಿ ದಿನಭವಿಷ್ಯ
ಮದುವೆಗೆ ಇನ್ನಿಲ್ಲದ ಅಡ್ಡಿ ಆತಂಕಗಳು ಎದುರಾಗಲಿದೆ. ಕುಟುಂಬ ಸದಸ್ಯರ ಸಹಾಯದಿಂದ ಸಮಸ್ಯೆಗಳು ಪರಿಹಾರವಾಗಲಿದೆ. ಮಕ್ಕಳು ಇಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಕೆಲಸದ ನಿಮಿತ್ತ ದೂರ ಪ್ರಯಾಣ ಸಾಧ್ಯತೆ.

ಮಿಥುನ ರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದಲ್ಲಿ ಇಂದು ನೆಮ್ಮದಿಯ ದಿನ. ಸಂಪತ್ತನ್ನು ಹೆಚ್ಚಿಸುವ ಮಾರ್ಗಗಳು ಗೋಚರವಾಗಲಿದೆ. ಸಾಮಾಜಿಕ ವಲಯದ ಜನರು ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ದುಂದು ವೆಚ್ಚವನ್ನು ಕಡಿಮೆ ಮಾಡಿ. ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿ ಆಗುತ್ತೀರಿ.

ಕರ್ಕಾಟಕ ರಾಶಿ ದಿನಭವಿಷ್ಯ
ಶ್ರಮಕ್ಕೆ ತಕ್ಕ ಫಲಿತಾಂಶದಿಂದ ನೆಮ್ಮದಿ. ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ. ಐಷಾರಾಮಿ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡುವಿರಿ. ಶತ್ರುಗಳು ನಿಮ್ಮ ಕೆಲಸದ ಬಗ್ಗೆ ಹೊಟ್ಟೆ ಕಿಚ್ಚು ಪಡುತ್ತಾರೆ. ಉದ್ಯೋಗಿಗಳಿಗೆ ವೇತನ ಹೆಚ್ಚಳ ಸಾಧ್ಯತೆಯಿದೆ.

ಇದನ್ನೂ ಓದಿ : ಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

ಸಿಂಹ ರಾಶಿ ದಿನಭವಿಷ್ಯ
ಪೋಷಕರ ಬೆಂಬಲ, ಆಶೀರ್ವಾದ ನಿಮಗೆ ದೊರಕಲಿದೆ. ಕುಟುಂಬದ ಸದಸ್ಯರ ಜೊತೆಗೆ ವಾದ ವಿವಾದ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಮನಸ್ಸು ವಿಚಲಿತವಾಗುತ್ತದೆ. ಯಾವುದೇ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಿ. ದೈಹಿಕ ಸಮಸ್ಯೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ.

ಕನ್ಯಾ ರಾಶಿ ದಿನಭವಿಷ್ಯ
ಧೀರ್ಘ ಕಾಲದಿಂದ ಬಾಕಿ ಉಳಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತದೆ. ನೀವು ಇಂದು ಸಂತೋಷವಾಗಿ ಇರುತ್ತೀರಿ. ಕೆಲಸ ಕಾರ್ಯಗಳನ್ನು ಧೈರ್ಯದಿಂದ ಪೂರ್ಣಗೊಳಿಸಿ. ಸಂಗಾತಿಯ ಆರೋಗ್ಯ ಕ್ಷೀಣಿಸುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ತುಲಾ ರಾಶಿ ದಿನಭವಿಷ್ಯ
ಸಂಗಾತಿಯ ಜೊತೆಗಿನ ವಿವಾದಗಳು ಇಂದೇ ಕೊನೆಯಾಗಲಿದೆ. ಸಂಗಾತಿಯ ಜೊತೆಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ವ್ಯವಹಾರಿಕವಾಗಿ ಅಭಿವೃದ್ದಿ, ಪ್ರೀತಿಯ ಜೀವನವು ಸಂತೋಷವನ್ನು ತರಲಿದೆ. ಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ಆಲಿಸುವುದು ಉತ್ತಮ.

Horoscope Today 01 December 2023 Zodiac Sign 
Image Credit to Original Source

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಬಾಕಿ ಮೊತ್ತ ಬಿಡುಗಡೆ : ನಿಮಗೂ ಬಂದಿದ್ಯಾ ಒಮ್ಮೆ ಚೆಕ್‌ ಮಾಡಿ

ವೃಶ್ಚಿಕ ರಾಶಿ ದಿನಭವಿಷ್ಯ
ಯಾವುದೇ ವಿವಾದಗಳು ಇಂದು ಕೊನೆಯಾಗಲಿದೆ. ಸರಕಾರಿ ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಕುಟುಂಬ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಹಲವು ಬಾರಿ ಯೋಚಿಸುವುದು ಉತ್ತಮ. ನಿರ್ಲಕ್ಷ್ಯತನ ಮಾಡಿದ್ರೆ ಪಶ್ಚಾತಾಪ ಪಡಬೇಕಾಗಿ ಬರುವ ಸಾಧ್ಯತೆಯಿದೆ.

ಧನಸ್ಸು ರಾಶಿ ದಿನಭವಿಷ್ಯ
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಿಸುತ್ತಾರೆ. ಶಿಕ್ಷಕರು ಬೆಂಬಲವನ್ನು ನೀಡುತ್ತಾರೆ. ನಿರ್ಗತಿಕರಿಗೆ ಇಂದು ದಾನ ಮಾಡುವಿರಿ. ಆದರೂ ನಿಮ್ಮ ಆದಾಯವು ವೃದ್ದಿಸಲಿದೆ. ಹೊಟ್ಟೆ ನೋವು, ತಲೆ ನೋವಿನಂತಹ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಲಿದೆ.

ಮಕರ ರಾಶಿ ದಿನಭವಿಷ್ಯ
ಸಂಬಂಧಿಕರಿಂದ ನೀವಿಂದು ಗೌರವ ಪಡೆಯುವ ಸಾಧ್ಯತೆಯಿದೆ. ಆದಾಯವನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ, ವ್ಯಾಪಾರಿಗಳು ಅನೇಕ ವಿಚಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಸಹೋದರರ ನಡುವೆ ಬಹಳ ದಿನಗಳಿಂದ ಎದುರಾಗಿದ್ದ ವಿವಾದ ಇಂದೇ ಕೊನೆಯಾಗಲಿದೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ಪ್ರವಾಸ ಏಕದಿನ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ : ರಹಾನೆ, ಪೂಜಾರಾ ಔಟ್‌

ಕುಂಭ ರಾಶಿ ದಿನಭವಿಷ್ಯ
ಹೊಸ ಕೆಲಸ ಕಾರ್ಯಗಳಲ್ಲಿ ಅದೃಷ್ಟ ನಿಮ್ಮದಾಗಲಿದೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದೇ ಕೊನೆಯಾಗಲಿದೆ. ಲೌಕಿಕ ಸುಖದ ಅನುಭವವನ್ನು ನೀವು ಇಂದು ಪಡೆಯುತ್ತೀರಿ. ಸಂಜೆಯ ವೇಳೆಗೆ ನೀವು ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಮೀನ ರಾಶಿ ದಿನಭವಿಷ್ಯ
ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಇದರಿಂದ ಮನಸಿಗೆ ಸಂತೋಷವಾಗಲಿದೆ. ಮಕ್ಕಳಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ. ಸಾಮಾಜಿಕವಾಗಿ ಗೌರವ ಹೆಚ್ಚಳವಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಸಮಯವನ್ನು ಕಳೆಯುವಿರಿ. ದೂರ ಪ್ರಯಾಣದಿಂದ ಅಧಿಕ ಲಾಭವಿದೆ.

Horoscope Today 01 December 2023 Zodiac Sign

 

Comments are closed.