HDFC ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ಬಿಡುಗಡೆ : ಯಾರೆಲ್ಲಾ ಪಡೆಯಬಹುದು ಈ ಕಾರ್ಡ್‌ ? ಇಲ್ಲಿದೆ ಮಾಹಿತಿ

HDFC Bank Tata Neu Credit Card  : ಭಾರತ ಪ್ರಮುಖ ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಇದೀಗ ಟಾಟಾ ನ್ಯೂ ಸಹಭಾಗಿತ್ವದಲ್ಲಿ HDFC ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ಬಿಡುಗಡೆ ಮಾಡಿದೆ.

HDFC Bank Tata Neu Credit Card  : ಭಾರತ ಪ್ರಮುಖ ಖಾಸಗಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ ಇದೀಗ ಟಾಟಾ ನ್ಯೂ ಸಹಭಾಗಿತ್ವದಲ್ಲಿ HDFC ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಈ ಕಾರ್ಡ್‌ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಮಾತ್ರವಲ್ಲ ಯುಪಿಐ ಬಳಕೆಗೂ ಕೂಡ ಅವಕಾಶವನ್ನು ಕಲ್ಪಿಸಿದೆ.

Tata Neu HDFC ಬ್ಯಾಂಕ್ ಇನ್ಫಿನಿಟಿ ಕ್ರೆಡಿಟ್ ಕಾರ್ಡ್ ಮತ್ತು Tata Neu HDFC ಪ್ಲಸ್ ಕ್ರೆಡಿಟ್ ಕಾರ್ಡ್ ಅನ್ನು HDFC ಬ್ಯಾಂಕ್ ಟಾಟಾ Neu ಸಹಯೋಗದೊಂದಿಗೆ ಹಲವು ಹೊಸ ಪ್ರಯೋಜನಗಳನ್ನು ಪರಿಚಯಿಸಿದೆ. ಆರ್‌ಬಿಐ ನಿಷೇಧವನ್ನು ತೆಗೆದುಹಾಕಿದ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಹೊರ ತರಲು ಯತ್ನಿಸುತ್ತಲೇ ಇತ್ತು. ಇದೀಗ ಟಾಟಾ ಜೊತೆಗೂಡಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಮುಂದಾಗಿದೆ.

HDFC Bank Tata Neu Credit Card launched rewards and eligibility
Image Credit : Tata Digital

ಯಾರಿಗೆಲ್ಲಾ ಸಿಗುತ್ತೆ ಎಚ್‌ಡಿಎಫ್‌ಸಿ ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ?

ಕನಿಷ್ಠ 21 ವರ್ಷ ಮತ್ತು ಗರಿಷ್ಠ 60 ವರ್ಷದ ವಯೋಮಿತಿಯ ಎಲ್ಲರೂ ಕೂಡ ಈ ಕಾರ್ಡ್‌ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ನಿವ್ವಳ ಮಾಸಿಕ ಆದಾಯ ₹ 25,000 ಕ್ಕಿಂತ ಹೆಚ್ಚು ಇರಬೇಕು. ಅಥವಾ ₹1 ಲಕ್ಷಕ್ಕಿಂತ ಹೆಚ್ಚು ನಿವ್ವಳ ಮಾಸಿಕ ಆದಾಯ ಹೊಂದಿರಬೇಕು. ಉದ್ಯೋಗಿಗಳು ಮಾತ್ರವಲ್ಲದೇ ಸ್ವಯಂ ಉದ್ಯೋಗ ಮಾಡುವವರು ಕೂಡ ಈ ಕಾರ್ಡ್‌ ಹೊಂದಬಹುದು.

ಇದನ್ನೂ ಓದಿ : Atal Pension Yojana : ಅಟಲ್ ಪಿಂಚಣಿ ಯೋಜನೆ : ವೃದ್ದಾಪ್ಯದಲ್ಲಿ ತಿಂಗಳಿಗೆ ಸಿಗಲಿದೆ 5000 ರೂ. ಪಿಂಚಣಿ, ಅರ್ಜಿ ಸಲ್ಲಿಸುವುದು ಹೇಗೆ ?

ಸ್ವಯಂ ಉದ್ಯೋಗಿಗಳು ಭಾರತೀಯ ಪ್ರಜೆ ಆಗಿದ್ದು, ಕನಿಷ್ಠ 21 ವರ್ಷ ಮತ್ತು ಗರಿಷ್ಠ 65 ವರ್ಷದ ಒಳಗಿನವರಿಗೆ ಅವಕಾಶವಿದೆ. ಆದರೆ ವಾರ್ಷಿಕ ₹ 6 ಲಕ್ಷಕ್ಕಿಂತ ಹೆಚ್ಚು ಆದಾಯ ತೆರಿಗೆ ರಿಟರ್ನ್ ಮಾಡಿರಬೇಕು. ಅಥವಾ ವಾರ್ಷಿಕ ₹12 ಲಕ್ಷಕ್ಕಿಂತ ಹೆಚ್ಚಿನ ಆದಾಯ ತೆರಿಗೆ ರಿಟರ್ನ್ ಮಾಡಿದವರಿಗೆ ಮಾತ್ರವೇ ಈ ಕಾರ್ಡ್‌ ಪಡೆಯ ಬಹುದಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ವಾರ್ಷಿಕ ಶುಲ್ಕ :

Tata Neu ಎಚ್‌ಡಿಎಫ್‌ಸಿ‌ ಪ್ಲಸ್ ಕ್ರೆಡಿಟ್ ಕಾರ್ಡ್ ಟಾಟಾ Neu ಎಚ್‌ಡಿಎಫ್‌ಸಿ ಬ್ಯಾಂಕ್ ಇನ್ಫಿನಿಟಿ ಕ್ರೆಡಿಟ್ ಕಾರ್ಡ್ ಪಡೆದು ಕೊಳ್ಳುವವರು ವಾರ್ಷಿಕವಾಗಿ ₹ 499+GST ಪಾವತಿಸಬೇಕಾಗುತ್ತದೆ. ಅಥವಾ ₹1,499+GST ಪಾವತಿಸುವ ಮೂಲಕ ಹೆಚ್ಚಿನ ಸಾಲದ ಮಿತಿಯ ಕಾರ್ಡ್‌ ಹೊಂದಬಹುದಾಗಿದೆ. ಕಾರ್ಡುದಾರರಿಗೆ 1 ದಿಂದ 3 ಲಕ್ಷ ರೂಪಾಯಿಯ ವರೆಗೆ ಸಾಲದ ಮಿತಿಯನ್ನು ನೀಡಲಾಗುತ್ತದೆ.

HDFC Bank Tata Neu Credit Card launched rewards and eligibility
Image Credit to Original Source

ಇದನ್ನೂ ಓದಿ : ಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

ಆದರೆ ವಿದೇಶಿ ವಹಿವಾಟಿನ ಮೊತ್ತದ ಮೇಲೆ 3.5% + GST ಪಾವತಿಸಬೇಕಾಗುತ್ತದೆ. ₹ 400 ರಿಂದ ₹ 5,000ದ ವರೆಗೆ ನಡೆಸುವ ಇಂಧನ ವಹಿವಾಟಿನ ಮೇಲೆ 1% ಇಂಧನ ಸರ್ಚಾರ್ಜ್ ಮನ್ನಾ ಆಗಲಿದೆ. ಅಲ್ಲದೇ ಗರಿಷ್ಠ ಮನ್ನಾವನ್ನು ತಿಂಗಳಿಗೆ ₹ 250 ಕ್ಕೆ ಮಿತಿಗೊಳಿಸಲಾಗಿದೆ. ಗ್ರಾಹಕರಿಗೆ ವೆಲ್‌ಕಮ್‌ ಬೋನಸ್‌ ಘೋಷಣೆ ಮಾಡಲಾಗಿದೆ.

ಈ ವೆಲ್‌ಕಂ ಬೋನಸ್‌ ಮೊದಲ ವರ್ಷ ಉಚಿತವಾಗಿ ಇರಲಿದೆ. ಆದರೆ ಜೀವಮಾನದ ಕ್ರಿಡಿಟ್‌ ಕಾರ್ಡ್‌ಗಳಿಗೆ ಇದು ಅನ್ವಯ ಆಗುವುದಿಲ್ಲ. ಸ್ವಾಗತಾರ್ಹ ಪ್ರಯೋಜನವನ್ನು ಪಡೆಯಲು ನೀವು ಕಾರ್ಡ್ ಅನ್ನು ಪಡೆದ 30 ದಿನಗಳಲ್ಲಿ ಏನನ್ನಾದರೂ ಖರೀದಿಸಲು ಬಳಸಬೇಕು.

ವೀಸಾ ಮತ್ತು ರುಪೇ ಕಾರ್ಡ್‌ ಲಭ್ಯ :

ಎಚ್‌ಡಿಎಫ್‌ಸಿ ಟಾಟಾ ನ್ಯೂ ಕ್ರೆಡಿಟ್ ಕಾರ್ಡ್‌ ಎರಡು ವಿಧಗಳಲ್ಲಿ ಲಭ್ಯವಿದೆ. ಗ್ರಾಹಕರು ವೀಸಾ ಹಾಗೂ ರುಪೇ ಕಾರ್ಡುಗಳನ್ನು ಪಡೆದುಕೊಳ್ಳಬಹುದಾಗಿದೆ. ಕ್ರಿಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಯಾವ ಕಾರ್ಡ್‌ ಬೇಕು ಅನ್ನೋದನ್ನು ನಮೂದಿಸಬೇಕು. ರುಪೇ ಕಾರ್ಡ್‌ ಪಡೆದುಕೊಳ್ಳುವುದರಿಂದ ನೀವು ಯುಪಿಐ ವೆಚ್ಚಕ್ಕಾಗಿ ಈ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಬಹುದಾಗಿದೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

ಟಾಟಾ ನ್ಯೂ ಅಪ್ಲಿಕೇಶನ್ ಹೊಂದಿದ್ದರೆ, ನೀವು ಟಾಟಾ ನ್ಯೂ ಕ್ರೆಡಿಟ್ ಕಾರ್ಡ್ ಅನ್ನು ಯಾವುದೇ ಶುಲ್ಕವಿಲ್ಲದೆ ಪಡೆಯ ಬಹುದಾಗಿದೆ. Tata Neu ಅಪ್ಲಿಕೇಶನ್ ಮತ್ತು/ಅಥವಾ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಟಾಟಾ ಬ್ರಾಂಡ್ ಪಾಲುದಾರರಲ್ಲಿ ಟಾಟಾ 1MG, ಬಿಗ್‌ಬಾಸ್ಕೆಟ್, ಕ್ರೋಮಾ, ಏರ್ ಏಷ್ಯಾ, ಟಾಟಾ CLiQ, IHCL, ವೆಸ್ಟ್‌ಸೈಡ್, Qmin, ಟಾಟಾ ಪ್ಲೇ, ಟಾಟಾ ಪೇ, ಟೈಟಾನ್, ತನಿಷ್ಕ್ ಮತ್ತು ಕಲ್ಟ್ ಉತ್ಪನ್ನಗಳ ಮೇಲೆ ಹೆಚ್ಚಿನ ಆಫರ್‌ ಪಡೆಯಬಹುದಾಗಿದೆ

ಕ್ರೆಡಿಟ್‌ ಕಾರ್ಡ್‌ದಾರರಿಗೆ ವಿಮಾ ಸೌಲಭ್ಯ :

ಇನ್ನು ಟಾಟಾ Neu ಎಚ್‌ಡಿಎಫ್‌ಸಿ ಪ್ಲಸ್ ಕ್ರೆಡಿಟ್ ಕಾರ್ಡ್ ಮತ್ತು Tata Neu HDFC ಬ್ಯಾಂಕ್ ಇನ್ಫಿನಿಟಿ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ₹1 ಕೋಟಿ ವರೆಗೆ ಅಪಘಾತದ ಏರ್‌ ಡೆತ್‌ ಕವರ್‌ ನೀಡಲಾಗುತ್ತಿದೆ. ₹15 ಲಕ್ಷದವರೆಗೆ ಆಸ್ಪತ್ರೆಯ ವೆಚ್ಚ, ₹9 ಲಕ್ಷದವರೆಗೆ ಲಾಸ್ಟ್ ಕಾರ್ಡ್ ಹೊಣೆಗಾರಿಕೆ ಕವರ್‌ ನೀಡಲಾಗುತ್ತದೆ. ವೀಸಾ ಹಾಗೂ ರುಪೇ ಕಾರ್ಡುಗಳನ್ನು ಬಳಕೆ ಮಾಡುವ ಮೂಲಕ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಲಾಭ ಪಡೆಯಬಹುದು.

HDFC Bank Tata Neu Credit Card launched rewards and eligibility

Comments are closed.