ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಾ ಇದ್ಯಾ ? ಪತ್ತೆ ಹಚ್ಚುವುದು ಬಹಳ ಸುಲಭ, ಯಾವುದಕ್ಕೂ ಒಮ್ಮೆ ಚೆಕ್‌ ಮಾಡಿ

Aadhaar Card Missused : ಆಧಾರ್‌ ಕಾರ್ಡ್‌ ಭಾರತೀಯರಾದ ಪ್ರತಿಯೊಬ್ಬರೂ ಹೊಂದಿರಲೇ ಬೇಕಾದ ದಾಖಲೆ. ಆದರೆ ಸೈಬರ್‌ ವಂಚಕರು (Cyber frauds)  ಈ ಆಧಾರ್‌ ಕಾರ್ಡ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ

Aadhaar Card Missused : ಆಧಾರ್‌ ಕಾರ್ಡ್‌ ಭಾರತೀಯರಾದ ಪ್ರತಿಯೊಬ್ಬರೂ ಹೊಂದಿರಲೇ ಬೇಕಾದ ದಾಖಲೆ. ಆದರೆ ಸೈಬರ್‌ ವಂಚಕರು (Cyber frauds)  ಈ ಆಧಾರ್‌ ಕಾರ್ಡ್‌ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ನಿಮಗೂ ನಿಮ್ಮ ಆಧಾರ್‌ ಕಾರ್ಡ್‌ ದುರ್ಬಳಕೆ ಆಗ್ತಿದ್ಯಾ ಅನ್ನೋ ಅನುಮಾನವೂ ಕಾಡುತ್ತಿರಬಹುದು.

ಆಧಾರ್‌ ಕಾರ್ಡ್‌ ಬ್ಯಾಂಕ್‌ ಖಾತೆ (Bank Account), ಪಾಸ್‌ಪೋರ್ಟ್‌ (Passport) , ರೇಷನ್‌ ಕಾರ್ಡ್‌ (Ration Card), ಓಟರ್‌ ಐಡಿ (Voter Id) ಸೇರಿದಂತೆ ಎಲ್ಲಾ ದಾಖಲೆಗಳ ಜೊತೆಗೂ ಲಿಂಕ್‌ (Aadhaar Card Link) ಮಾಡಬೇಕು. ಕೇವಲ ಆಧಾರ್‌ ಕಾರ್ಡ್‌ ನಿಂದಲೇ ಒಬ್ಬ ವ್ಯಕ್ತಿಯ ಎಲ್ಲಾ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಾಗುತ್ತಿದೆ. ಹೀಗಾಗಿ ಆಧಾರ್‌ ಕಾರ್ಡ್‌ ಬಳಸಿಕೊಂಡು ವಂಚಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

Your Aadhaar Card Missused How To check
Image Credit to Original Source

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಸೈಬರ್‌ ವಂಚಕರಿಂದ ನಮ್ಮ ಆಧಾರ್‌ ಕಾರ್ಡ್‌ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಹೇಗೆ ಅನ್ನುವ ಪ್ರಶ್ನೆ ಹಲವರನ್ನು ಕಾಡುತ್ತದೆ. ಆಧಾರ್‌ ಕಾರ್ಡ್‌ ಸುರಕ್ಷಿತವಾಗಿ ಇರಿಸಿಕೊಳ್ಳುವುದು ಬಹು ಸುಲಭ. ನೀವು ಮನೆಯಲ್ಲಿಯೇ ಕುಳಿತು ಆಧಾರ್‌ ಕಾರ್ಡ್‌ ಸುರಕ್ಷಿತವಾಗಿ ಇಡುವುದರ ಜೊತೆಗೆ ನಿಮ್ಮ ಕಾರ್ಡ್‌ ದುರ್ಬಳಕೆ ಆಗುತ್ತಿದ್ಯಾ ಅನ್ನೋದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಆಧಾರ್‌ ಕಾರ್ಡ್‌ ವಂಚನೆಯನ್ನು ತಡೆಯಲು ನೀವು ಮಾಡಬೇಕಾಗಿರುವುದು ಇಷ್ಟೆ. ಯುಐಡಿಎಐ (UIDAI ) https://uidai.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಕಾಣಿಸಿರುವ ಆಧಾರ್‌ ಧೃಢೀಕರಣ ಇತಿಹಾಸ ಆಯ್ಕೆಯನ್ನು ಕ್ಲಿಕ್‌ ಮಾಡುವ ಮೂಲಕ ನೀವು ಮೈ ಆಧಾರ್‌ ವಿಭಾಗದಲ್ಲಿ ಪರಿಶೀಲನೆಯನ್ನು ನಡೆಸಬಹುದಾಗಿದೆ.

ಇದನ್ನೂ ಓದಿ : ಭರ್ಜರಿ ಡಿಸ್ಕೌಟ್‌ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್‌

ಇಲ್ಲವಾದ್ರೆ ನಾವು ನೀಡಿರುವ ಈ ಲಿಂಕ್‌ – https://resident.uidai.gov.in/aadhaar-auth-history ಬಳಸಿ ನೇರವಾಗಿಯೇ ನಿಮ್ಮ ಖಾತೆಯ ದುರ್ಬಳಕೆಯನ್ನು ಪತ್ತೆ ಹಚ್ಚಬಹುದಾಗಿದೆ. ಆಧಾರ್‌ ವೆಬ್‌ಸೈಟ್‌ನಲ್ಲಿ ನಿಮ್ಮ ಮಾಹಿತಿಯನ್ನು ಪರಿಶೀಲನೆ ನಡೆಸುವ ಮೊದಲು ಕಡ್ಡಾಯವಾಗಿ ನಿಮ್ಮ 12  ಅಂಕಿಯ ಆಧಾರ್‌ ಸಂಖ್ಯೆಯನ್ನು ನಮೋದಿಸಬೇಕಾಗುತ್ತದೆ. ಅಲ್ಲದೇ ಭದ್ರತಾ ಕ್ಯಾಪ್ಚಾವಾನ್ನು ನಮೋದಿಸಿ ಓಟಿಪಿಯನ್ನು ಸಲ್ಲಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ.

Your Aadhaar Card Missused How To check
Image Credit to Original Source

ಇದನ್ನೂ ಓದಿ : 50MP ಕ್ಯಾಮೆರಾ, 5,000mAh ಬ್ಯಾಟರಿ : ಕೇವಲ 6,799 ರೂ.ಗೆ ಸಿಗುತ್ತೆ ರೆಡ್‌ಮೀ 12C ಸ್ಮಾರ್ಟ್‌ಫೋನ್

ಇನ್ನು ನೀವೇನಾದ್ರೂ ಆಧಾರ್‌ ಕಾರ್ಡ್‌ ಮಾಡಿಸಿ ೧೦ ವರ್ಷಗಳು ಕಳೆದಿದ್ರೆ ನೀವು ನಿಮ್ಮ ಆಧಾರ್‌ ಕಾರ್ಡ್‌ ಅನ್ನು ಅಪ್ಡೇಟ್ಸ್‌ ಮಾಡಬೇಕಾಗಿದೆ. ಡಿಸೆಂಬರ್‌ 14ರ ಒಳಗಾಗಿ ನೀವು ಉಚಿತವಾಗಿ ಆಧಾರ್‌ ಕಾರ್ಡ್‌ನ ಕೆಲವೊಂದು ಮಾಹಿತಿಯನ್ನು ಅಪ್ಡೇಟ್ಸ್‌ ಮಾಡಿಸಿಕೊಳ್ಳಬಹುದಾಗಿದೆ. ಅವಧಿ ಮುಕ್ತಾಯದ ಬಳಿಕ ನೀವು ಹಣ ಪಾವತಿಸಿ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

Your Aadhaar Card Missused How To check

Comments are closed.