Holi 2023 : ಕೇಂದ್ರ ಸರಕಾರಿ ನೌಕರರಿಗೆ ಸಿಹಿಸುದ್ದಿ : ಮುಂದಿನ 15 ದಿನಗಳಲ್ಲಿ ತುಟ್ಟಿಭತ್ಯೆ ಹೆಚ್ಚಳ ಸಾಧ್ಯತೆ

ನವದೆಹಲಿ : ಹೋಳಿ ಹಬ್ಬದ (Holi 2023) ಮುನ್ನ ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಸಿಗಲಿದೆ. ಮುಂದಿನ 15 ದಿನಗಳಲ್ಲಿ ಕೇಂದ್ರ ಸರಕಾರವು ಅವರ ತುಟ್ಟಿಭತ್ಯೆಯನ್ನು ಹೆಚ್ಚಿಸಬಹುದು ಮತ್ತು ನೌಕರರ ಬಾಕಿ ಇರುವ ಬೇಡಿಕೆಗಳ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಆಗಿದೆ.

ಮಾರ್ಚ್ 1 ರಂದು ದೊಡ್ಡ ಘೋಷಣೆ ಸಾಧ್ಯತೆ:
ಮಾರ್ಚ್ 1 ರಂದು ನಡೆಯಲಿರುವ ಮುಂದಿನ ಕೇಂದ್ರ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳದ ನಿರ್ಧಾರವನ್ನು ಅನುಮೋದಿಸಬಹುದು ಎಂದು ವರದಿ ತಿಳಿಸಿದೆ. ಇದು ಅನುಮೋದನೆಯಾದರೆ, 2023 ರ ಹೋಳಿ ಹಬ್ಬದಂದು ಅಥವಾ ಅದಕ್ಕೂ ಮೊದಲು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಕೇಂದ್ರ ಸರಕಾರವು ನಿರ್ಧಾರವನ್ನು ಪ್ರಕಟಿಸಬಹುದು. ಕಳೆದ ಸುಮಾರು ತಿಂಗಳಿಂದ ಸರಕಾರಿ ನೌಕರರು ಡಿಎ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದಾರೆ. ಸಾಮಾನ್ಯವಾಗಿ, ಕೇಂದ್ರವು ಸರಕಾರಿ ನೌಕರರ ಡಿಎ ಮತ್ತು ಡಿಆರ್ ಅನ್ನು ಎರಡು ಬಾರಿ ಹೆಚ್ಚಿಸಲಾಗುತ್ತದೆ. ಅಂದರೆ ಮೊದಲು ಜನವರಿಯಲ್ಲಿ ಮತ್ತು ನಂತರ ಜುಲೈನಲ್ಲಿ ಹೆಚ್ಚಿಸಲಾಗಿತ್ತು. ಕೇಂದ್ರ ಸರಕಾರವು ಕಳೆದ ವರ್ಷ ಮಾರ್ಚ್‌ನಲ್ಲಿ 7 ನೇ ಸಿಪಿಸಿ ಅಡಿಯಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಿ ನಂತರ ಸೆಪ್ಟೆಂಬರ್‌ನಲ್ಲಿ ಹೆಚ್ಚಿಸಿತ್ತು. ಅದೇ ಟ್ರೆಂಡ್‌ನಲ್ಲಿ ಕೇಂದ್ರವು 2023ರ ಮಾಚ್‌ನಲ್ಲಿ ಡಿಎಯನ್ನು ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯಿದೆ.

ಎಷ್ಟು ಡಿಎ ಹೆಚ್ಚಿಸಲಾಗುವುದು?
ಕೇಂದ್ರ ಸರಕಾರವು ಸೆಪ್ಟೆಂಬರ್ 2022 ರಲ್ಲಿ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಇದನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿತು. ವರದಿಗಳ ಪ್ರಕಾರ, ಕೇಂದ್ರ ಸರಕಾರಿ ನೌಕರರು ಈ ಬಾರಿಯೂ ಶೇ. 4ರಷ್ಟು ಡಿಎ ಹೆಚ್ಚಳವನ್ನು ಪಡೆಯಬಹುದು. ಆದರೆ, ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿರುವುದಿಲ್ಲ. ಡಿಎ ಬೇಡಿಕೆಯನ್ನು ನೀಡಿದರೆ, 7 ನೇ ಸಿಪಿಸಿ ಅಡಿಯಲ್ಲಿ ಸರಕಾರಿ ನೌಕರರಿಗೆ ಸಂಬಳವು ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಶೇ.4ರಷ್ಟು ಡಿಎ ಹೆಚ್ಚಳವು ಪ್ರಸ್ತುತ ಡಿಎಯನ್ನು ಶೇ. 38 ರಿಂದ 42ಕ್ಕೆ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ : Air India Vistara Merger : ಶೀಘ್ರದಲ್ಲೇ ವಿಲೀನಗೊಳ್ಳಲಿದೆ ಏರ್ ಇಂಡಿಯಾ, ವಿಸ್ತಾರಾ ಏರ್‌ಲೈನ್ಸ್

ಇದನ್ನೂ ಓದಿ : Gold Rates Today : ಮಾರುಕಟ್ಟೆಯಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ

ಇದನ್ನೂ ಓದಿ : Lost Pan Card : ನಿಮ್ಮ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದೀರಾ? ಮರು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ ?

ಈ ಮಧ್ಯೆ ಇತರ ಕೆಲವು ವರದಿಗಳು ಕೇಂದ್ರವು ಹೊಸ ಆಯೋಗವನ್ನು ಜಾರಿಗೆ ತರಬಹುದು ಎಂದು ಸೂಚಿಸಿದೆ. ಆದರೆ ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ 8 ನೇ ವೇತನ ಆಯೋಗದ ಪ್ರಸ್ತಾಪ ಇರುವುದಿಲ್ಲ. 2023ರ ಹೋಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಕೇಂದ್ರ ಸರಕಾರಿ ನೌಕರರು ಡಿಎ ಹೆಚ್ಚಳದ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಡಿಎ ಮತ್ತು ಡಿಆರ್ ಹೆಚ್ಚಳದಿಂದ ಈ ಬಾರಿ 48 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

Holi 2023 : Good news for central government employees: There is a possibility of increase in gratuity allowance in the next 15 days.

Comments are closed.