Mexico bus accident: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿ: 17 ಮಂದಿ ಸಾವು

ಮೆಕ್ಸಿಕೋ: (Mexico bus accident) ವೆನೆಜುವೆಲಾ, ಕೊಲಂಬಿಯಾ ಮತ್ತು ಮಧ್ಯ ಅಮೆರಿಕದಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಮಧ್ಯ ಮೆಕ್ಸಿಕೊದಲ್ಲಿ ಪಲ್ಟಿಯಾಗಿ 17 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪ್ಯೂಬ್ಲಾ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಹೆದ್ದಾರಿಯಲ್ಲಿ 45 ಪ್ರಯಾಣಿಕರಿದ್ದ ಬಸ್ ಉತ್ತರಕ್ಕೆ ತೆರಳಿದಾಗ ಅಪಘಾತ ಸಂಭವಿಸಿದೆ ಎಂದು ಪ್ಯೂಬ್ಲಾ ಆಂತರಿಕ ಸಚಿವ ಜೂಲಿಯೊ ಹುಯೆರ್ಟಾ ಹೇಳಿದ್ದಾರೆ. ಅಪಘಾತದ ಪರಿಣಾಮ ಹದಿನೈದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ 15 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಇಬ್ಬರು ಚಿಕಿತ್ಸೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಸ್ಥಳೀಯ ಪ್ರಾಸಿಕ್ಯೂಟರ್ ಕಚೇರಿಯ ಪ್ರಕಾರ, ದಕ್ಷಿಣ ಮೆಕ್ಸಿಕನ್ ಗಡಿ ನಗರವಾದ ತಪಾಚುಲಾದಿಂದ ಮೆಕ್ಸಿಕೋ ನಗರಕ್ಕೆ ತೆರಳುತ್ತಿದ್ದಾಗ ಟೂರ್ಸ್ ಟುರಿಸ್ಟಿಕೋಸ್ ಮದೀನಾ ಎಂಬ ಖಾಸಗಿ ಬಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದ 17 ವ್ಯಕ್ತಿಗಳಲ್ಲಿ ಬಸ್ ಚಾಲಕ ಮತ್ತು ಸಹಾಯಕ ಕೂಡ ಸೇರಿದ್ದಾರೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ವಲಸಿಗರ ನಿಖರವಾದ ಸಂಖ್ಯೆಯನ್ನು ಪ್ಯೂಬ್ಲಾ ರಾಜ್ಯ ಅಧಿಕಾರಿಗಳು ನಿರ್ದಿಷ್ಟಪಡಿಸಲಿಲ್ಲ.

ಬಸ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಮೆಕ್ಸಿಕನ್ ಮಾಧ್ಯಮಗಳು ವರದಿ ಮಾಡಿವೆ. ಮಿಲೆನಿಯೊ ಟೆಲಿವಿಷನ್ ಸ್ಟೇಷನ್ ಹಂಚಿಕೊಂಡ ಚಿತ್ರಗಳು ಬಸ್‌ನ ತೀವ್ರವಾಗಿ ಹಾನಿಗೊಳಗಾದ ಭಾಗಗಳನ್ನು ತೋರಿಸಿವೆ.

ಇದನ್ನೂ ಓದಿ : Kolara students ill: ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು ಮತ್ತೊಮ್ಮೆ ಅಸ್ವಸ್ಥ

ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು ಮತ್ತೊಮ್ಮೆ ಅಸ್ವಸ್ಥ

ಕೋಲಾರ: ಚಿತ್ರಾನ್ನ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದು ಬಂದಿದ್ದ ಮಕ್ಕಳು ಮತ್ತೊಮ್ಮೆ ಅಸ್ವಸ್ಥರಾಗಿರುವ ಘಟನೆ ಕೋಲಾರದ ಕ್ಲಾಕ್‌ ಟವರ್‌ ಬಳಿಯ ಉರ್ದು ಶಾಲೆಯಲ್ಲಿ ನಡೆದಿದೆ. ಫೆ.17 ರಂದು ಚಿತ್ರಾನ್ನ ಸೇವಿಸಿ ಎಂಟು ಮಕ್ಕಳು ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ಎಂಟು ಮಕ್ಕಳು ಇಂದು ಶಾಲೆಗೆ ಬಂದಿದ್ದು, ನಂತರ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಂಬುಲೆನ್ಸ್‌ ಮೂಲಕ ವಿದ್ಯಾರ್ಥಿಗಳನ್ನು ಎಸ್‌ ಎನ್‌ ಆರ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ : Guwahati crime: ಪತಿ, ಅತ್ತೆಯನ್ನು ಕೊಂದು ದೇಹದ ಭಾಗಗಳನ್ನು ಎಸೆದ ಮಹಿಳೆ

ಇದನ್ನೂ ಓದಿ : Wild elephant attack: ದಕ್ಷಿಣ ಕನ್ನಡ: ಕಾಡಾನೆ ದಾಳಿಗೆ ಇಬ್ಬರು ಬಲಿ

Mexico bus accident: The bus carrying migrants overturned: 17 people died

Comments are closed.