Ambatanaya mudradi : ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ವಿಧಿವಶ

ಉಡುಪಿ : ಹಿರಿಯ ಸಾಹಿತಿ ಹಾಗೂ ಯಕ್ಷಗಾನ ಕಲಾವಿದ ಅಂಬಾತಯ ಮುದ್ರಾಡಿ (Ambatanaya mudradi) ವಿಧಿವಶರಾಗಿದ್ದಾರೆ. ರಾಜ್ಯೋತ್ಸವ, ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿಯವರಾದ ಇವರು ಶಿಕ್ಷಕರಾಗಿದ್ದುಕೊಂಡು ಯಕ್ಷಗಾನ, ನಾಟಕ, ಸಾಹಿತ್ಯ ಹೀಗೆ ಹಲವು ಆಯಾಮಗಳಲ್ಲಿ ಖ್ಯಾತರಾಗಿದ್ದರು. ಸಾತ್ವಿಕ ಮನೋಭಾವದ ಸಹೃದಯಿಯಾದ ಅಂಬಾತನಯ ಮುದ್ರಾಡಿ (88 ವರ್ಷ) ಇವರು ಮಂಗಳವಾರ ಮುಂಜಾನೆ ಅಗಲಿದ್ದಾರೆ

ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಸಾಹಿತಿ ಹೀಗೆ ಎಲ್ಲಾ ವಿಭಾಗದಲ್ಲಿ ವೈಶಿಷ್ಟ ಪೂರ್ಣವಾದ ಸಾಧನೆಯನ್ನು ಮಾಡಿದ್ದ ಅವರು, ಸಮಾಜದ ಎಲ್ಲರೊಂದಿಗೂ ಮನೆಯ ಸದಸ್ಯನಂತೆ ಇದ್ದು ಮಾರ್ಗದರ್ಶನ ನೀಡಿದ್ದರು. ಸಾರ್ಥಕವಾಗಿ ಬದುಕನ್ನು ಪೂರೈಸಿದ ಅಂಬಾತನಯರದ್ದು ಆದರ್ಶ ಜೀವನ ಎಂದು ಅವರ ಹಿತೈಶಿಗಳು ಮನದಾಳದಿಂದ ಹೇಳಿದ್ದಾರೆ. ಖ್ಯಾತ ಸಾಹಿತಿ, ಕವಿ, ಹರಿದಾಸ, ತಾಳಮದ್ದಳೆ ಅರ್ಥದಾರಿ, ಕನ್ನಡ ನಾಡು ನುಡಿ ಜನಪದದ ಸಂರಕ್ಷಣೆ ಮತ್ತು ಸಂವರ್ಧನೆಗೆ ಶ್ರೇಷ್ಠ ಕೊಡುಗೆ ನೀಡಿದ, ಕನ್ನಡ ಸಾಹಿತ್ಯಲೋಕದ ಮರೆಯಲಾಗದ ರತ್ನ, ಕನ್ನಡ ಕನ್ಮಣಿ ಅಜಾತಶತ್ರು ಅಂಬಾತನಯ ಮುದ್ರಾಡಿಯವರು ಇಂದು ಅಗಲಿದ್ದಾರೆ.

ಕಳೆದ ವಾರ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದು, ಇದು ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ ಪುಸ್ತಕವನ್ನು ಪ್ರಕಟಿಸಲಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅವರಿಗೆ ಪ್ರಾಪ್ತಿಯಾಗಿವೆ. ಅಲ್ಲದೇ ಇವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.

ಇದನ್ನೂ ಓದಿ : Vijayalakshmi Darshan : ಸತ್ಯ ಸಿಂಹ ಇದ್ದ ಹಾಗೆ, ಯಾರೂ ರಕ್ಷಿಸಬೇಕಾಗಿಲ್ಲ ಎಂದ ವಿಜಯಲಕ್ಷ್ಮಿ ದರ್ಶನ್!

ಇದನ್ನೂ ಓದಿ : Kranti Movie OTT : ಸಿನಿಮಾ ಬಿಡುಗಡೆಯಾದ ಒಂದು ತಿಂಗಳಿಗೆ ಓಟಿಟಿಗೆ ಲಗ್ಗೆ ಇಟ್ಟ “ಕ್ರಾಂತಿ”

ಇದನ್ನೂ ಓದಿ : Director Bhagwan : ದೊರೈ, ಅಣ್ಣಾವ್ರು, ವರದಪ್ಪ ಉದಯಶಂಕರ್‌ ಕಳಕೊಂಡು ಒಂಟಿಯಾಗಿದ್ದ ನಿರ್ದೇಶಕ ಭಗವಾನ್

ಇವರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗವು ಅವರನ್ನು ಗೌರವಿಸಿದ್ದು, ಸಂಸ್ಥೆಗೆ ಸದಾ ಮಾರ್ಗದರ್ಶನ ನೀಡುತ್ತಾ ಬಂದ ಅಂಬಾತನಯರ ಅಗಲುವಿಕೆಗೆ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಬದುಕಿನ ಆದರ್ಶ, ಕ್ರಿಯಾಶೀಲತೆ ಎಲ್ಲರ ಬದುಕಿನಲ್ಲಿ ಸ್ಫೂರ್ತಿ ನೀಡಲಿ ಎಂದು ಉಡುಪಿಯ ಕಲಾ ಪೋಷಕ ಸುಬ್ರಹ್ಮಣ್ಯ ಬಾಸ್ರಿ ಕೆ ಎಸ್ ಶ್ರದ್ಧಾಂಜಲಿ ಸಲ್ಲಿಸಿದರು.

Veteran poet, Yakshagana artist Ambatanaya mudradi passed away

Comments are closed.