ICICI Bank Interest Rate : ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ICICI ಬ್ಯಾಂಕ್‌

ಎಸ್‌ಬಿಐ ಮತ್ತು ಎಹ್‌ಡಿಎಫ್‌ಸಿ ಬ್ಯಾಂಕ್‌ ಗಳು ಶುಕ್ರವಾರ 2 ಕೋಟಿಗಂತ ಕಡಿಮೆ ಇರುವ ಸ್ಥಿರ ಠೇವಣಿಗಳ (FD) ಬಡ್ಡಿ ದರವನ್ನು ಹೆಚ್ಚಿಸಿದೆ. ಈಗ ಅದರ ಸಾಲಿಗೆ ICICI ಬ್ಯಾಂಕ್‌ ಕೂಡಾ ಸೇರಿದೆ (ICICI Bank Interest Rate). ICICI ಬ್ಯಾಂಕ್‌ ಬಡ್ಡಿದರವನ್ನು 0.5% (50 bps) ಹೆಚ್ಚಿಸಿದೆ. 46 ದಿನಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲಿನ ದರವನ್ನು 25 ಬೇಸಿಸ್‌ ಪಾಯಿಂಟ್‌ (0.25%) ಹೆಚ್ಚಿಸಿದೆ ಎಂದು ಬ್ಯಾಂಕ್‌ ಹೇಳಿದೆ. ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಫ್‌ಡಿ ಮೇಲಿನ ಬಡ್ಡಿ ದರವನ್ನು 50 ಬೇಸಿಸ್‌ ಪಾಯಿಂಟ್‌ (0.5%) ಅನ್ನು ಬ್ಯಾಂಕ್‌ ಹೆಚ್ಚಿಸಿದೆ.

ಬ್ಯಾಂಕ್‌ ಹೇಳಿರುವ ಪ್ರಕಾರ, ಹಿರಿಯ ನಾಗರಿಕರಲ್ಲದವರೂ ಕೂಡಾ ಈಗ 7.00% ಬಡ್ಡಿ ದರವನ್ನು ಸ್ಥಿರ ಠೇವಣಿಗಳ ಮೇಲೆ ಪಡೆದುಕೊಳ್ಳಬಹುದಾಗಿದೆ. ಮತ್ತು ಹಿರಿಯ ನಾಗರಿಕರು ಸ್ಥಿರ ಠೇವಣಿಗಳ ಮೇಲೆ 7.50% ಬಡ್ಡಿ ದರ ಪಡೆಯಬಹುದಾಗಿದೆ. ಇತ್ತೀಚಿನ ಆರ್‌ಬಿಐನ ರೆಪೋ ದರದಿಂದಾಗಿ ಬ್ಯಾಂಕ್‌ಗಳು ಸ್ಥಿರ ಠೇವಣಿಗಳ ಬಡ್ಡಿದರವನ್ನು ಹೆಚ್ಚಿಸಿವೆ.

ಪರಿಷ್ಕೃತ ಬಡ್ಡಿ ದರಗಳ ಪಟ್ಟಿ :

ದಿನಗಳುಸಾಮಾನ್ಯ ಜನರಿಗೆ    (%)ಹಿರಿಯ ನಾಗರಿಕರಿಗೆ    (%)
7 ದಿನಗಳಿಂದ 14 ದಿನಗಳವರೆಗೆ3.003.50
15 ದಿನಗಳಿಂದ 29 ದಿನಗಳು3.003.50
30 ದಿನಗಳಿಂದ 45 ದಿನಗಳು3.504.0
46 ದಿನಗಳಿಂದ 60 ದಿನಗಳು4.04.5
61 ದಿನಗಳಿಂದ 90 ದಿನಗಳು4.505.0
91 ದಿನಗಳಿಂದ 120 ದಿನಗಳು4.755.25
121 ದಿನಗಳಿಂದ 150 ದಿನಗಳು4.755.25
151 ದಿನಗಳಿಂದ 184 ದಿನಗಳು4.755.25
185 ದಿನಗಳಿಂದ 210 ದಿನಗಳು5.506.0
211 ದಿನಗಳಿಂದ 270 ದಿನಗಳು5.506.0
271 ದಿನಗಳಿಂದ 289 ದಿನಗಳು5.506.0
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ5.756.25
1 ವರ್ಷದಿಂದ 389 ದಿನಗಳು6.607.10
390 ದಿನಗಳಿಂದ 15 ತಿಂಗಳುಗಳಿಗಿಂತ ಕಡಿಮೆ6.67.10
15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ7.07.50
18 ತಿಂಗಳಿಂದ 2 ವರ್ಷಗಳವರೆಗೆ7.07.50
2 ವರ್ಷಗಳು 1 ದಿನದಿಂದ 3 ವರ್ಷಗಳವರೆಗೆ:7.07.50
3 ವರ್ಷಗಳು 1 ದಿನದಿಂದ 5 ವರ್ಷಗಳವರೆಗೆ7.07.50
5 ವರ್ಷಗಳು 1 ದಿನದಿಂದ 10 ವರ್ಷಗಳವರೆಗೆ6.907.50

ಇದನ್ನೂ ಓದಿ : Realme 10 Pro Plus 5G ಇಂದಿನಿಂದ ಭಾರತದಲ್ಲಿ ಮಾರಾಟ ಪ್ರಾರಂಭ; ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳು

ಇದನ್ನೂ ಓದಿ : Karnataka Revenue Department Recruitment:ಕಂದಾಯ ಇಲಾಖೆಯಲ್ಲಿ ಉದ್ಯೋಗಾವಕಾಶ, ವೇತನ 80,000ರೂ

ICICI Bank Interest Rate, bank hikes interest rate on fixed deposits by up to 50 bps

Comments are closed.