ICICI Bank Interest Rates : ಐಸಿಐಸಿಐ ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಎಫ್‌ಡಿಗಳ ಮೇಲೆ ಶೇ. 7.15ರಷ್ಟು ಬಡ್ಡಿದರ ಏರಿಕೆ

ನವದೆಹಲಿ : ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯಲ್ಲಿ ಹಣ ಇಡುವುದಕ್ಕಿಂತ ಹೆಚ್ಚಾಗಿ ಠೇವಣಿಗಳ ರೂಪದಲ್ಲಿ ಹೂಡಿಕೆ ಮಾಡಲು ಜನರು ಇಷ್ಟ ಪಡುತ್ತಾರೆ. ಹಾಗೆಯೇ ಬ್ಯಾಂಕ್‌ಗಳು ಕೂಡ ಗ್ರಾಹಕರನ್ನು ಆಕರ್ಷಿಸಲು ಠೇವಣಿಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಹೆಚ್ಚಿನ ಬಡ್ಡಿದರವನ್ನು ನೀಡಲು ಶುರು ಮಾಡಿದ್ದಾರೆ. ಇತ್ತೀಚೆಗೆ ಖಾಸಗಿ ವಲಯದ ಬ್ಯಾಂಕ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುವ ಸಲುವಾಗಿ ಉಳಿತಾಯ ಖಾತೆ ಹಾಗೂ ಠೇವಣಿಗಳ ಮೇಲೆ ವಿಶೇಷ ಬಡ್ಡಿದರವನ್ನು ನೀಡಲು ಪ್ರಾರಂಭಿಸಿದೆ. ಇದೀಗ ಖಾಸಗಿ ವಲಯದ ಸಾಲದಾತ ಐಸಿಐಸಿಐ ಬ್ಯಾಂಕ್ ರೂ. 2 ಕೋಟಿಗಿಂತ ಹೆಚ್ಚಿನ ಮತ್ತು ರೂ 5 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (ICICI Bank Interest Rates) ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಈಗ, ಹಿರಿಯ ನಾಗರಿಕರು ಮತ್ತು ಸಾಮಾನ್ಯ ಠೇವಣಿದಾರರು 7.15 ಶೇಕಡಾ ಬಡ್ಡಿಯನ್ನು ಗಳಿಸಬಹುದು. ಇನ್ನು ಅವಧಿಗೆ ಅನುಸಾರವಾಗಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಈ ಕೆಳಗೆ ತಿಳಿಸಲಾಗಿದೆ.

ರೂ. 2 ಕೋಟಿಗಿಂತ ಹೆಚ್ಚಿನ ಮತ್ತು ರೂ 5 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಾಗಿ, 7 ದಿನದಿಂದ 14 ದಿನಗಳ ಅವಧಿ ಅಥವಾ 15 ದಿನದಿಂದ 29 ದಿನಗಳ ಅವಧಿಗೆ, ಸಾಮಾನ್ಯ ವರ್ಗ ಮತ್ತು ಹಿರಿಯ ನಾಗರಿಕರು ಇಬ್ಬರೂ ಶೇಕಡಾ 4.75 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಯಾವುದೇ ವರ್ಗದ ಠೇವಣಿದಾರರು 30 ದಿನದಿಂದ 45 ದಿನಗಳ ಅವಧಿಗೆ ಮೇಲಿನ ಮೊತ್ತವನ್ನು ಠೇವಣಿ ಮಾಡಲು ಆಯ್ಕೆ ಮಾಡಿದರೆ, ಗ್ರಾಹಕರು ಶೇಕಡಾ 5.50 ರ ದರದಲ್ಲಿ ಬಡ್ಡಿಯನ್ನು ಗಳಿಸಬಹುದು.

ಶೇ. 5.75 ರಷ್ಟು ಬಡ್ಡಿಯನ್ನು ಗಳಿಸಲು, ನಿಶ್ಚಿತ ಠೇವಣಿಯ ಮುಕ್ತಾಯದ ಅವಧಿಯು 46 ದಿನದಿಂದ 60 ದಿನಗಳ ನಡುವೆ ಇರಬೇಕು. ಶೇ. 6ರಷ್ಟು ಬಡ್ಡಿಯನ್ನು ಗಳಿಸಲು, ಮೆಚ್ಯೂರಿಟಿ ಅವಧಿಯು 61 ದಿನದಿಂದ 90 ದಿನಗಳ ನಡುವೆ ಇರಬೇಕು. 91 ರಿಂದ 120 ದಿನಗಳು, 121 ರಿಂದ 150 ದಿನಗಳು ಮತ್ತು 151 ರಿಂದ 184 ದಿನಗಳು ಶೇ. 6.50ರಷ್ಟು ಬಡ್ಡಿ ದರವನ್ನು ನೀಡುವ ಮೂರು ಅವಧಿಗಳನ್ನು ಒಳಗೊಂಡಿದೆ. ಶೇಕಡಾ 6.65 ರ ಬಡ್ಡಿ ದರವನ್ನು ನೀಡುವ ಎರಡು ಅವಧಿಗಳು 185 ರಿಂದ 210 ದಿನಗಳು ಮತ್ತು 211 ರಿಂದ 270 ದಿನಗಳು ಮತ್ತು ಶೇಕಡಾ 6.75 ರ ಬಡ್ಡಿ ದರವನ್ನು ನೀಡುವ ಎರಡು ಅವಧಿಗಳು 271 ರಿಂದ 289 ದಿನಗಳು ಮತ್ತು 290 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಆಗಿರುತ್ತದೆ.

ಇದನ್ನೂ ಓದಿ : LIC Special Revival Campaign : ಎಲ್‌ಐಸಿ ಪಾಲಿಸಿದಾರರು ನಿಮ್ಮ ಪಾಲಿಸಿಯನ್ನು ಉಳಿಸಲು ಮಾರ್ಚ್ 24 ರ ಮೊದಲು ಹೀಗೆ ಮಾಡಿ

ಇದನ್ನೂ ಓದಿ : YES Bank FD Interest Rate Hike : ಎಫ್‌ಡಿ ಹೂಡಿಕೆದಾರರ ಗಮನಕ್ಕೆ : ಈ ಬ್ಯಾಂಕ್‌ ಸ್ಥಿರ ಠೇವಣಿಗಳ ಬಡ್ಡಿದರ ಶೇ. 6ಕ್ಕೆ ಹೆಚ್ಚಳ

ಇದನ್ನೂ ಓದಿ : Aadhaar registration for own land: ಸ್ವಂತ ಭೂಮಿಗೂ ಆಧಾರ್‌ ನೊಂದಣಿ ಅಗತ್ಯ: ಕೆಂದ್ರ ಸರಕಾರದ ಮಹತ್ವದ ಘೋಷಣೆ

ಸಾಮಾನ್ಯ ವರ್ಗ ಮತ್ತು ಹಿರಿಯ ನಾಗರಿಕರಿಗೆ ಗರಿಷ್ಠ 7.15 ಶೇಕಡಾ ಬಡ್ಡಿ ದರವನ್ನು ನೀಡುವ ನಾಲ್ಕು ಅವಧಿಗಳಿವೆ. ಅವುಗಳೆಂದರೆ 1 ವರ್ಷದಿಂದ 389 ದಿನಗಳು, 390 ದಿನಗಳಿಂದ 15 ತಿಂಗಳಿಗಿಂತ ಕಡಿಮೆ, 15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ, ಮತ್ತು 18 ತಿಂಗಳಿಂದ 2 ವರ್ಷಗಳು ಆಗಿರುತ್ತದೆ. 2 ವರ್ಷ 1 ದಿನದಿಂದ 3 ವರ್ಷಗಳ ಅವಧಿಯ ಬಡ್ಡಿ ದರವು ಶೇ.7ರಷ್ಟು ಮತ್ತು 3 ವರ್ಷ 1 ದಿನದಿಂದ 10 ವರ್ಷಗಳವರೆಗೆ ಶೇ. 6.75ರಷ್ಟು ಆಗಿರುತ್ತದೆ.

ICICI Bank Interest Rates: ICICI Bank Customers Notice 7.15 percent interest rate rise

Comments are closed.