Lorry Car Major Accident: ಕಾರು, ಲಾರಿ ನಡುವೆ ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೇ ಸಾವು, 3 ಮಂದಿಗೆ ಗಂಭೀರ ಗಾಯ

ಧಾರವಾಡ: (Lorry Car Major Accident) ಕಾರೊಂದು ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸೇರಿದಂತೆ ಐವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾರವಾಡದ ಸಮೀಪದ ತೇಗೂರು ಕ್ರಾಸ್‌ನಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿಯಿಂದ ಧಾರವಾಡಕ್ಕೆ ಕಾರಿನಲ್ಲಿ ಇಬ್ಬರು ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಲಾರಿಗೆ ಢಿಕ್ಕಿ ಹೊಡೆದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರಿನಲ್ಲಿ ಇಬ್ಬರು ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಪಾದಚಾರಿ ಕಾರಿಗೆ ಅಡ್ಡ ಬಂದಿದ್ದು, ಅವರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರು ಚಾಲಕ ಪ್ರಯತ್ನಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತೇಗೂರು ಕ್ರಾಸ್ ಬಳಿ ನಿಂತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಅಗ್ನಿಪಥದಲ್ಲಿ ಉದ್ಯೋಗದಲ್ಲಿದ್ದ ಮಂಜುನಾಥ ಮುದ್ದೋಜಿ ಹುಬ್ಬಳ್ಳಿಯಿಂದ ವಾಪಸ್ ಬರುತ್ತಿದ್ದ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಕಾರಿನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ನಾಗಪ್ಪ ಈರಪ್ಪ ಮುದ್ದೋಜಿ (29 ವರ್ಷ), ಅವರಾದಿ ಗ್ರಾಮದ ಮಹಾಂತೇಶ ಬಸಪ್ಪ ಮುದ್ದೋಜಿ (40 ವರ್ಷ), ಬಸವರಾಜ ಶಿವಪುತ್ರಪ್ಪ ನರಗುಂದ (35 ವರ್ಷ), ನಿಚ್ಚಣಕಿ ಗ್ರಾಮದ ಶ್ರೀಕುಮಾರ ನರಗುಂದ, ಈರಣ್ಣ ಗುರುಸಿದ್ದಪ್ಪ ರಾಮನಗೌಡರ್ (35 ವರ್ಷ) (ಪಾದಚಾರಿ) ಮೃತ ದುರ್ದೈವಿಗಳು

ಇದನ್ನೂ ಓದಿ : Truck-pickup accident: ಟ್ರಕ್‌ಗೆ ಪಿಕಪ್ ವಾಹನ ಢಿಕ್ಕಿ: 11 ಮಂದಿ ಸಾವು, ಹಲವರಿಗೆ ಗಾಯ

ಶ್ರವಣಕುಮಾರ ಬಸವರಾಜ ನರಗುಂದ, ಮಡಿವಾಳಪ್ಪ ರಾಜು ಅಳ್ನಾವರ (22 ವರ್ಷ), ಪ್ರಕಾಶಗೌಡ ತಂದೆ ಶಂಕರಗೌಡ ಪಾಟೀಲ (22 ವರ್ಷ) ಮೂವರು ಅಪಘಾತದಲ್ಲಿ ಗಾಯಗೊಂಡವರು. ಮೂವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಘಟನೆಯ ಕುರಿತು ಗರಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Lorry Car Major Accident: Horrible accident between car and lorry: 5 killed on the spot, 3 seriously injured

Comments are closed.