Truck-pickup accident: ಟ್ರಕ್‌ಗೆ ಪಿಕಪ್ ವಾಹನ ಢಿಕ್ಕಿ: 11 ಮಂದಿ ಸಾವು, ಹಲವರಿಗೆ ಗಾಯ

ಛತ್ತೀಸ್‌ಗಢ: (Truck-pickup accident) ಟ್ರಕ್‌ಗೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಪಿಕಪ್‌ ನಲ್ಲಿದ್ದ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಬಲೋಡಾ ಬಜಾರ್ ಜಿಲ್ಲೆಯಲ್ಲಿ ನಡೆದಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಇನ್ನೂ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ರಾಯ್‌ಪುರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಕಾರ್ಯಕ್ರಮವೊಂದನ್ನು ಮುಗಿಸಿ ಪಿಕಪ್‌ ವಾಹನದಲ್ಲಿ ಹಿಂದಿರುಗುತ್ತಿದ್ದಾಗ, ಟ್ರಕ್‌ ಗೆ ಪಿಕಪ್‌ ವಾಹನ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮ ಪಿಕಪ್‌ ನಲ್ಲಿ ಪ್ರಯಾಣಿಸುತ್ತಿದ್ದ 11 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸರಿಸುಮಾರು ಎಂಟು ಮಂದಿ ಗಂಭೀವಾಗಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗಂಭೀರ ಗಾಯಗೊಂಡ ಇಬ್ಬರನ್ನು ರಾಯ್‌ ಪುರಕ್ಕೆ ಕಳುಹಿಸಲಾಗಿದೆ.

” ಪಿಕಪ್ ವಾಹನವು ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಅರ್ಜುನಿಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದು 11 ಜನರು ಸಾವನ್ನಪ್ಪಿದರು ಮತ್ತು ಸುಮಾರು ಎಂಟು ಜನರು ಗಾಯಗೊಂಡರು.” ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (SDOP) ಭಟಪರಾ ಸಿದ್ಧಾರ್ಥ ಬಘೇಲ್ ತಿಳಿಸಿದರು. “ಪಿಕಪ್ ವಾಹನವು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಭಟಪಾರಾ (ಗ್ರಾಮೀಣ) ಪೊಲೀಸ್ ಠಾಣೆ ವ್ಯಾಪ್ತಿಯ ಖಮಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಎಸ್‌ಡಿಒಪಿ ಎಎನ್‌ಐಗೆ ತಿಳಿಸಿದೆ.

ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ರಾಯ್‌ಪುರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. “ಸ್ಥಳೀಯರ ಸಹಾಯದಿಂದ, ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅವರಲ್ಲಿ ಕೆಲವರನ್ನು ಉತ್ತಮ ವೈದ್ಯಕೀಯ ಸಹಾಯಕ್ಕಾಗಿ ರಾಯ್‌ಪುರಕ್ಕೆ ಕಳುಹಿಸಲಾಗಿದೆ ” ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ : Manipal drug case: ಝೋಮೆಟೋದಲ್ಲಿ ಊಟ ಆರ್ಡ್‌ರ್‌ ಮಾಡಿದ್ರೆ ರಾತ್ರೋರಾತ್ರಿ ಬರ್ತಾ ಇತ್ತು ಡ್ರಗ್ಸ್‌

ಇದನ್ನೂ ಓದಿ : Car-bike accident: ಬೈಕ್‌ಗೆ ಏಸ್‌ಯುವಿ ಕಾರು ಢಿಕ್ಕಿ: 4 ಮಂದಿ ಸಾವು, ಇಬ್ಬರಿಗೆ ಗಾಯ

ಇದನ್ನೂ ಓದಿ : Prostitution-attack on hotel: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಒಯೋ ಹೋಟೆಲ್ ಮೇಲೆ ದಾಳಿ: 7 ಮಹಿಳೆಯರ ರಕ್ಷಣೆ

Truck-pickup accident: Pickup vehicle collides with truck: 11 dead, many injured

Comments are closed.