ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭಾರತದ ಖಾಸಗಿ ಸ್ವಾಮ್ಯದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ಲಿಮಿಟೆಡ್‌ಗೆ ₹ 12.19 ಕೋಟಿ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ಗೆ ₹ 3.95 ಕೋಟಿ ದಂಡ ವಿಧಿಸಿದೆ.
ಆರ್‌ಬಿಐ ರೂಪಿಸಿರುವ ಕೆಲವು ಬ್ಯಾಂಕಿಂಗ್ ನಿಯಂತ್ರಕ ಮಾನದಂಡಗಳನ್ನು ಅನುಸರಿಸ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ. ಬ್ಯಾಂಕಿಂಗ್ ಸಾಲ ಮತ್ತು ಮುಂಗಡ, ಕಾನೂನುಬದ್ದ ಮತ್ತು ಇತರ ನಿರ್ಬಂಧಗಳ ಕುರಿತು ಆರ್‌ಬಿಐ ನುರ್ದೇಶ ನೀಡುವ ಕುರಿತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನು 1949 (BR ಕಾಯಿದೆ) ಸೆಕ್ಷನ್ 20 ರ ಉಪ-ವಿಭಾಗ (1) ಅನ್ನು ಉಲ್ಲಂಘನೆ ಮಾಡಿವೆ.

BR ಕಾಯಿದೆಯ ಸೆಕ್ಷನ್ 6 ಮತ್ತು ಸೆಕ್ಷನ್ 8 ರ ವಿಭಾಗ (2) ‘ಬ್ಯಾಂಕ್‌ಗಳು ಒದಗಿಸುವ ಹಣಕಾಸು ಸೇವೆಗಳು’ ಮತ್ತು ‘ವಂಚನೆಗಳ ವರ್ಗೀಕರಣ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ವರದಿ ಮಾಡದೆ ಆರ್‌ಬಿಐ ನಿಯಮಗಳನ್ನು ಪಾಲನೆ ಮಾಡಿಲ್ಲ. ಇದೇ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ನಿಮ್ಮ ಹೆಣ್ಣು ಮಗಳ ಮದುವೆಗೆ ಸಿಗುತ್ತೆ 25 ಲಕ್ಷ ರೂ. : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ
ಐಸಿಐಸಿಐ ಬ್ಯಾಂಕ್ ತನ್ನ ನಿರ್ದೇಶಕರು ಮತ್ತು ಸಹ ನಿರ್ದೇಶಕರ ಕಂಪೆನಿಗಳಿಗೆ ಸಾಲವನ್ನು ಮಂಜೂರು ಮಾಡಿದೆ ಎಂದು ಅಪೆಕ್ಸ್ ಬ್ಯಾಂಕ್ ಹೇಳಿದೆ. ಬ್ಯಾಂಕ್ ಹಣಕಾಸು ಅಲ್ಲದ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಅಲ್ಲದೇ ವಂಚನೆಯನ್ನು ನಿಗದಿತ ಸಮಯದಲ್ಲಿ ಆರ್‌ಬಿಐಗೆ ವರದಿಯನ್ನು ಮಾಡಲು ವಿಫಲವಾಗಿದೆ.
ಇನ್ನು ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಕೂಡ ರಿಸರ್ವ್ ಬ್ಯಾಂಕ್ ಬಾರೀ ದಂಡ ವಿಧಿಸಿದೆ. ಬ್ಯಾಂಕ್‌ಗಳಿಂದ ಹಣಕಾಸು ಸೇವೆಗಳ ಹೊರಗುತ್ತಿಗೆಯಲ್ಲಿ ನಿಯಮ ಉಲ್ಲಂಘನೆಯ ಜೊತೆಗೆ ಬ್ಯಾಂಕುಗಳು ತೊಡಗಿಸಿಕೊಂಡಿರುವ ರಿಕವರಿ ಏಜೆಂಟ್‌ಗಳು ಆರ್‌ಬಿಐ ನಿರ್ದೇಶನ ಪಾಲನೆ ಮಾಡದ ಕಾರಣಕ್ಕೆ ಕೋಟಕ್ ಮಹೇಂದ್ರಾ ಬ್ಯಾಂಕ್‌ಗೆ ₹3.95 ಕೋಟಿ ವಿತ್ತೀಯ ದಂಡವನ್ನು ವಿಧಿಸಿದೆ.

ಇದನ್ನೂ ಓದಿ : RBL ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬಜಾಜ್ ಫೈನಾನ್ಸ್‌ಗೆ ಭಾರಿ ದಂಡ ವಿಧಿಸಿದ RBI
ಕೊಟಕ್ ಮಹೀಂದ್ರಾ ಬ್ಯಾಂಕ್ ಸೇವಾ ಪೂರೈಕೆದಾರರ ವಾರ್ಷಿಕ ಪರಿಶೀಲನೆಯನ್ನು ಮಾಡುವಲ್ಲಿ ವಿಫಲವಾಗಿದೆ ಎಂದು ಆರ್‌ಬಿಐ ಹೇಳಿದೆ. ಬ್ಯಾಂಕಿಂಗ್ ನಿಯಮಗಳ ಷರತ್ತುಗಳನ್ನು ಬ್ಯಾಂಕ್ ಉಲ್ಲಂಘನೆಯನ್ನು ಮಾಡಿದೆ. ಅಲ್ಲದೇ ನಿಜವಾದ ದಿನಾಂಕದ ಬದಲಿಗೆ ಬಡ್ಡಿ ಪಾವತಿಸುವ ದಿನಾಂಕದಿಂದ ಬಡ್ಡಿಯನ್ನು ವಿಧಿಸಿದೆ.
ಜೊತೆಗೆ ಸಾಲದ ಮೇಲೆ ಪೂರ್ವದಂಡವನ್ನು ವಿಧಿಸಲು ಸಾಲದ ಒಪ್ಪಂದದಲ್ಲಿ ಷತ್ತು ಇಲ್ಲದಿದ್ದರೂ ಕೂಡ ಸ್ವತ್ತು ಮರುಸ್ವಾಧೀನ ಶುಲ್ಕವನ್ನು ವಿಧಿಇಸದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಗ್ರಾಹಕರನ್ನು ಸಂಜೆ 7 ಗಂಟೆಯ ನಂತರ ಮತ್ತು ಬೆಳಿಗ್ಗೆ 7 ಗಂಟೆಯ ಮೊದಲು ಸಂಪರ್ಕ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ : PAN Card ಕಳೆದು ಹೋದ್ರೆ ಹೊಸ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ ?
ಐಸಿಐಸಿಐ ಬ್ಯಾಂಕ್ ಹಾಗೂ ಕೋಟಕ್ ಮಹೇಂದ್ರ ಬ್ಯಾಂಕ್‌ಗಳು ನಿಯಮ ಪಾಲನೆಯನ್ನು ಉಲ್ಲಂಘಟನೆ ಮಾಡಿವೆ. ಇದೇ ಕಾರಣಕ್ಕೆ ಇದೀಗ ಆರ್‌ಬಿಐ ದಂಡ ವಿಧಿಸಿದೆ ಎಂದು ಮಿಂಟ್ ವರದಿ ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಆರ್‌ಬಿಐ ದಂಡ ವಿಧಿಸಿತ್ತು.
ಎಂದು ಆರ್‌ಬಿಐ ಹೇಳಿದೆ.
ICICI Bank Kotak Mahendra Bank fined 16.14 crore rupees by RBI