ಸರಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಭಾರೀ ಹೆಚ್ಚಳ : ವೇತನದಲ್ಲಿ ಎಷ್ಟು ಏರಿಕೆಯಾಗಲಿದೆ ಗೊತ್ತಾ ?

ತಮಿಳುನಾಡು ರಾಜ್ಯದ 1700 ಆವಿನ್ ನೌಕರರಿಗೆ (Aavin employees) ಗುಡ್‌ನ್ಯೂಸ್‌ ಕೊಟ್ಟಿದೆ. ನೌಕರರ ತುಟ್ಟಿಭತ್ಯೆ(DA Hike) ಯನ್ನು ಶೇ.4ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ತಮಿಳುನಾಡು ರಾಜ್ಯದ 1700 ಆವಿನ್ ನೌಕರರಿಗೆ (Aavin employees) ಗುಡ್‌ನ್ಯೂಸ್‌ ಕೊಟ್ಟಿದೆ. ನೌಕರರ ತುಟ್ಟಿಭತ್ಯೆ(DA Hike) ಯನ್ನು ಶೇ.4ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಡಿಎ ಹೆಚ್ಚಳದ ನಂತರ DSH 34% ರಿಂದ 38% ಕ್ಕೆ ಏರಿದೆ. ಇದರಿಂದಾಗಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ.

ಆವಿನ್ ತಮಿಳುನಾಡು ರಾಜ್ಯದ ಅತಿದೊಡ್ಡ ಸಹಕಾರಿ ಮಾರುಕಟ್ಟೆ 9Tamil Nadu Cooperative Milk Producers Union) ಒಕ್ಕೂಟವಾಗಿದೆ. ಇದು ತಮಿಳುನಾಡು ಸರ್ಕಾರದ ಒಡೆತನದಲ್ಲಿದೆ. ರಾಜ್ಯ ಸರಕಾರ ಇದೀಗ ತುಟ್ಟಿಭತ್ಯೆ ಹೆಚ್ಚಳ ಮಾಡಿರುವುದರಿಂದಾಗಿ ಆವಿನ್‌ ಉದ್ಯೋಗಿಗಳಗೆ ಅನುಕೂಲವಾಗಲಿದೆ.

tamilnadu Government Announced DA Increase How Much Salary Will Take Govt Employee
Image credit to Original Source

ಡಿಎ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ಹೆಚ್ಚಿನ ಆವಿನ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಈ ಹಿಂದೆ ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ಆರು ಜಿಲ್ಲಾ ಒಕ್ಕೂಟಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಶೇ.38 ದರದಲ್ಲಿ ಡಿಎ ಪಡೆಯುತ್ತಿದ್ದರು. ಇದಲ್ಲದೇ ಇತರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಶೇ.34ರಷ್ಟು ಭತ್ಯೆ ನೀಡಲಾಗಿತ್ತು.

ಇದನ್ನೂ ಓದಿ : ಯುವತಿಯರ ಮದುವೆಗೆ 10 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಉಚಿತ : ಗೃಹಲಕ್ಷ್ಮೀ ಬೆನ್ನಲ್ಲೇ ಮಹಾಲಕ್ಷ್ಮೀ ಯೋಜನೆ ಘೋಷಣೆ

ಆವಿನ್‌ ನೌಕರರು ನಿರಂತರ ಬೇಡಿಕೆಗೆ ಕೊನೆಗೂ ಸರಕಾರ ಮಣಿದಿದೆ. ಆವಿನ್‌ ನೌಕರರಿಗೆ ಇದೀಗ ಎಕರೂಪದಲ್ಲಿ ತುಟ್ಟಿಭತ್ಯೆಯನ್ನು ಹೆಚ್ಳಳ ಮಾಡಲಾಗಿದೆ. ರಾಜ್ಯ ಸರಕಾರ ಇದೀಗ ತುಟ್ಟಿಭತ್ಯೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ವಾರ್ಷಿಕ ವೆಚ್ಚದಲ್ಲಿ 3.18 ಕೋಟಿ ರೂ.ಗಳಷ್ಟು ಹೆಚ್ಚುವರಿ ಹೊರೆ ಬೀಳಿದೆ. ಕೇಂದ್ರ ಸರಕಾರದಲ್ಲಿ ಸದ್ಯದಲ್ಲಿಯೇ ತುಟ್ಟಿಭತ್ಯೆ ಹೆಚ್ಚಳ ಮಾಡಲಿದೆ.

tamilnadu Government Announced DA Increase How Much Salary Will Take Govt Employee
Image credit to Original Source

ಕೇಂದ್ರ ನೌಕರರ ಡಿಎ ಯಾವಾಗ ಹೆಚ್ಚಳ ?

ಕೇಂದ್ತ ಸರಕಾರಿ ನೌಕರರಿಗೆ ಶೀಘ್ರದಲ್ಲಿಯೇ ಗುಡ್‌ನ್ಯೂಸ್‌ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರಕಾರ ತನ್ನ ನೌಕರರಿಗೆ ಪ್ರಸ್ತುತ 42 ಪ್ರತಿಶತದಷ್ಟು ತುಟ್ಟಿಭತ್ಯೆ (ಡಿಎ) / ಡಿಯರ್ನೆಸ್ ರಿಲೀಫ್ (ಡಿಆರ್) ನೀಡಲಾಗುತ್ತದೆ. ನವರಾತ್ರಿ ಅಥವಾ ದೀಪಾವಳಿಯ ಸಮಯದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : PAN Card ಕಳೆದು ಹೋದ್ರೆ ಹೊಸ ಪ್ಯಾನ್ ಕಾರ್ಡ್‌ ಪಡೆಯುವುದು ಹೇಗೆ ?

ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳ ವೇತನದಲ್ಲಿ ಕೇಂದ್ರ ಸರಕಾರ ತುಟ್ಟಿಭತ್ಯೆಯನ್ನು ಘೋಷಣೆ ಮಾಡಿದ್ರೆ ನಿರ್ಧಿಷ್ಟ ಅವಧಿಯಿಂದ ತುಟ್ಟಿಭತ್ಯೆ ಹೆಚ್ಚಳ ಅನ್ನೋದನ್ನು ತಿಳಿಸುತ್ತದೆ. ಬಾಕಿ ತುಟ್ಟಿಭತ್ಯೆಯ ಹಣವನ್ನು ಒಂದು ತಿಂಗಳ ಅವಧಿಯಲ್ಲಿ ನೌಕರರ ಖಾತೆಗೆ ಜಮೆ ಆಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರತೀ ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತವೆ.

ಸಾಮಾನ್ಯವಾಗಿ ದಸರಾ ಅಥವಾ ದೀಪಾವಳಿಯ ಸಮಯದಲ್ಲಿ ಹಬ್ಬದ ಗಿಫ್ಟ್‌ ಆಗಿ ರಾಜ್ಯ ಹಾಗೂ ಕೇಂದ್ರ ಸರಕಾರವು ತುಟ್ಟಿಭತ್ಯೆಯನ್ನು ಹೆಚ್ಳಳ ಮಾಡುತ್ತವೆ. ಈ ಬಾರಿಯ ಕೇಂದ್ರ ಸರಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಸರಕಾರಿ ನೌಕರರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದಾರೆ.

ಇದನ್ನೂ ಓದಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್‌ : ಇದೇ ತಿಂಗಳು ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳ, ವೇತನದಲ್ಲಿ ಬಾರಿ ಏರಿಕೆ

ಕೇಂದ್ರ ಸರಕಾರವು 7 ನೇ ವೇತನ ಆಯೋಗದ ಲೆಕ್ಕಾಚಾರದಂತೆ ಜುಲೈ 1, 2023 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ. ಮುಂಬರುವ ಪರಿಷ್ಕರಣೆಗಳಲ್ಲಿ CPI-IW ಸೂಚ್ಯಂಕ ಸಂಖ್ಯೆಗಳು ಬದಲಾಗದೆ ಇದ್ದರೂ, ಹಣದುಬ್ಬರ ಅಂಕಿಅಂಶಗಳು ಹಣದುಬ್ಬರ ಅಂಕಿಅಂಶಗಳು ಶೇಕಡಾ 6 ಕ್ಕಿಂತ ಹೆಚ್ಚಿರುವುದರಿಂದ ಹಣದುಬ್ಬರಕ್ಕಿಂತ ಶೇಕಡಾ 46 ಕ್ಕೆ ಏರಲಿದೆ ಅನ್ನುತ್ತಾರೆ ಆರ್ಥಿಕ ತಜ್ಞರು.

tamilnadu Government Announced DA Increase How Much Salary Will Take Govt Employee

Comments are closed.